More

    ‘ಜೋಗಿ’ ಹೆಸರಲ್ಲಿದೆ ಇಷ್ಟೆಲ್ಲಾ ದಾಖಲೆಗಳು!

    72 ಕೇಂದ್ರಗಳಲ್ಲಿ 25 ದಿನ
    63 ಕೇಂದ್ರಗಳಲ್ಲಿ 50 ದಿನ
    54 ಕೇಂದ್ರಗಳಲ್ಲಿ 75 ದಿನ
    45 ಕೇಂದ್ರಗಳಲ್ಲಿ 100 ದಿನ
    4 ಕೇಂದ್ರಗಳಲ್ಲಿ 25 ವಾರ
    ಬಹುಶಃ ಶಿವರಾಜಕುಮಾರ್​ ಅಭಿನಯದ ‘ಜೋಗಿ’ ಚಿತ್ರವೇ ಕೊನೆ. ಆ ನಂತರ ಕನ್ನಡ ಚಿತ್ರರಂಗದಲ್ಲಿ ಯಾವ ಚಿತ್ರವೂ ಅಷ್ಟೊಂದು ಕೇಂದ್ರಗಳಲ್ಲಿ ಅಷ್ಟೊಂದು ದಿನಗಳು ಓಡಿದ ಉದಾಹರಣೆಗಳು ಸಿಗುವುದಿಲ್ಲ. ಆ ಮಟ್ಟಿಗೆ ಪ್ರೇಮ್​ ನಿರ್ದೇಶನದ ‘ಜೋಗಿ’ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ.

    ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್ ಸಿಬಿಐಗೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    ಈಗ್ಯಾಕೆ ‘ಜೋಗಿ’ ಚಿತ್ರದ ವಿಷಯವೆಂದರೆ, ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 15 ವಷರ್ಗಳಾಗಿವೆ. ಸರಿಯಾಗಿ 15 ವರ್ಷಗಳ ಹಿಂದೆ ಅಂದರೆ, 2005ರ ಆಗಸ್ಟ್​ 19ರಂದು ‘ಜೋಗಿ’, ಬೆಂಗಳೂರಿನ ಕಪಾಲಿ ಸೇರಿದಂತೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಶೇಷವೆಂದರೆ, ಅಂದು ವರಮಹಾಲಕ್ಷ್ಮೀ ಹಬ್ಬದ ದಿನ. ಈ ದಿನ, ಕನ್ನಡ ಚಿತ್ರಗಳಿಗೆ ಲಕ್ಕಿ ಎಂಬ ಮಾತಿದೆ. ಅದಕ್ಕೆ ಸರಿಯಾಗಿ, ‘ಜೋಗಿ’ ಚಿತ್ರವು ಅದೇ ದಿನ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಎಂದನಿಸಿಕೊಂಡಿತ್ತು.

    ‘ಜೋಗಿ’ ಚಿತ್ರ ಬಿಡುಗಡೆಯಾಗಿ 15 ವರ್ಷಗಳಾದ ಖುಷಿಯಲ್ಲಿ, ಶಿವರಾಜಕುಮಾರ್​ ಅವರ ಅಭಿಮಾನಿಗಳು ಇಂದು ಸೋಷಿಯಲ್​ ಮೀಡಿಯಾದಲ್ಲಿ ವಿಶೇಷವಾದ ಕಾಮನ್​ ಡಿಸ್​ಪ್ಲೇ ಪಿಕ್ಚರ್​ (ಸಿಡಿಪಿ) ಬಿಡುಗಡೆ ಮಾಡಿಸಿದ್ದಾರೆ. ವಿಶೇಷವೆಂದರ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ ಸಿಡಿಪಿಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

    ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್​’ ಎಂದು ಹೆಸರಿಟ್ಟ ದರ್ಶನ್​ ಅಭಿಮಾನಿ

    ಇದಲ್ಲದೆ ಶಿವಸೈನ್ಯ ಎಂಬ ಶಿವರಾಜಕುಮಾರ್​ ಅವರ ಅಭಿಮಾನಿಗಳ ಸಂಘವು, ಯೂಟ್ಯೂಬ್​ನ ಎ2 ಚಾನಲ್​ನಲ್ಲಿ ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದೆ. ಬುಧವಾರ ಬೆಳಿಗ್ಗೆ ಈ ಟ್ರೇಲರ್​ ಬಿಡುಗಡೆಯಾಗಿದ್ದು, ಈಗಾಗಲೇ ಟ್ರೆಂಡಿಂಗ್​ನಲ್ಲಿದೆ ಎನ್ನುವುದು ವಿಶೇಷ.

    ಸುಶಾಂತ್ ಪೋಸ್ಟ್​ ಮಾರ್ಟಮ್​ ಮಾಡಿದ ವೈದ್ಯರಿಗೆ ಕೊಲೆ ಬೆದರಿಕೆ; ಫೋನ್​ ಮೂಲಕ ಕಿರುಕುಳ ಕೊಟ್ಟಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts