More

    ನೀವು ಸ್ನಾತಕೋತ್ತರ ಪದವೀಧರರಾಗಿದ್ದಲ್ಲಿ ನಿಮ್ಹಾನ್ಸ್​ನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ರಿಸರ್ಚ್ ಅಸಿಸ್ಟೆಂಟ್ ಇತ್ಯಾದಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಸೆಕ್ಟರ್ ಮ್ಯಾನೇಜರ್-1 ಹುದ್ದೆ ಇದೆ. ಸಮಾಜಶಾಸ್ತ್ರ/ ಗ್ರಾಮೀಣ ಅಭಿವೃದ್ಧಿ/ ಅರ್ಥಶಾಸ್ತ್ರ/ ಮಾನವ ಸಂಪನ್ಮೂಲ/ ಸಾಮಾಜಿಕ ಕಾರ್ಯ/ ಮನೋವಿಜ್ಞಾನ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಾಸಾಗಿರಬೇಕು.
    ಮಾಸಿಕ ವೇತನ 30 ಸಾವಿರ ರೂ.ಇರುತ್ತದೆ. ರಿಸರ್ಚ್ ಅಸಿಸ್ಟೆಂಟ್-3 ಹುದ್ದೆಗಳಿವೆ. ವೈದ್ಯಕೀಯ ಮನೋವಿಜ್ಞಾನ/ ಮನೋವಿಜ್ಞಾನ/ ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಆಗಿರಬೇಕು. ಮಾಸಿಕ ವೇತನ 25 ಸಾವಿರ ರೂ. ಇರುತ್ತದೆ.

    ಇದನ್ನೂ ಓದಿ:  ಭಾರತಕ್ಕೆ ಫ್ರಾನ್ಸ್​​​ ವಿಶೇಷ ಕೊಡುಗೆ – ವೆಂಟಿಲೇಟರ್, ಟೆಸ್ಟಿಂಗ್ ಕಿಟ್

    ಪ್ರಾಜೆಕ್ಟ್ ಫಿಜಿಷಿಯನ್ -1 ಹುದ್ದೆ ಇದೆ. ಎಂಬಿಬಿಎಸ್/ ಬಿಎಎಂಎಸ್/ ಬಿಎಚ್​​ಎಂಎ/ ಬಿಡಿಎಸ್ ಆಗಿರಬೇಕು. ಮಾಸಿಕ ವೇತನ 45 ಸಾವಿರ ರೂ. ಇರುತ್ತದೆ. ಎಲ್ಲ ಹುದ್ದೆಗಳ ಅಭ್ಯರ್ಥಿಗಳಿಗೂ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಮತ್ತು ಆಸಕ್ತ ಅಭ್ಯರ್ಥಿಗಳು [email protected] ಈ ವಿಳಾಸಕ್ಕೆ ರಿಸ್ಯೂಮ್/ ಸಿವಿ ಹಾಗೂ ಅರ್ಜಿ ಸಲ್ಲಿಸುವ ಹುದ್ದೆಗೆ ಅಭ್ಯರ್ಥಿಗಿರುವ ಅರ್ಹತೆ ಕುರಿತ ವಿವರವನ್ನು ಆಗಸ್ಟ್ 9 ರವರೆಗೆ ಮೇಲ್ ಮಾಡಬೇಕು. ಹೆಚ್ಚಿನ ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.

    ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ…. ಈ ಸಾವಿನ ಹಿಂದೆ ಯಾರಿದ್ದಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts