More

    ಕೆಲಸ ಹುಡುಕುತ್ತಿದ್ದೀರಾ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ರಾಜ್​ ಇಲಾಖೆಯಲ್ಲಿ ಸಮಾಲೋಚಕರಾಗಿ

    ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸ್ವಚ್ಛ ಭಾರತ್​ ಮಿಷನ್​ ಯೋಜನೆಯನ್ವಯ ಕಾರ್ಯನಿರ್ವಹಿಸಲು ವಿವಿಧ ಜಿಲ್ಲೆಗಳಲ್ಲಿ ಸಮಾಲೋಚಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.

    ಹುದ್ದೆ ಹಾಗೂ ವಿದ್ಯಾರ್ಹತೆ ವಿವರ ಇಂತಿದೆ.
    * ಮಾನವ ಸಂಪನ್ಮೂಲ ಅಭಿವೃದ್ಧಿ- ಎಂಎಸ್​ಡಬ್ಲ್ಯೂ/ ಎಂಎ/ ಗ್ರಾಮೀಣಾಭಿವೃದ್ಧಿ, ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
    * ಮಾಹಿತಿ ಶಿಕ್ಷಣ ಹಾಗೂ ಸಂವಹನ- ಸಂವಹನದಲ್ಲಿ ಎಂ.ಎಸ್​/ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

    * ನೈರ್ಮಲ್ಯ ಮತ್ತು ಶುಚಿತ್ವ- ಇಂಜಿನಿಯರಿಂಗ್​, ಸೋಷಿಯನ್​ ಸೈನ್ಸ್​ನಲ್ಲಿ ಪದವಿ ಅಥವಾ ಪಬ್ಲಿಕ್​ ಹೆಲ್ತ್​ನಲ್ಲಿ ಡಿಪ್ಲೊಮಾ, ಗ್ರಾಮೀಣ ನಿರ್ವಹಣೆಯಲ್ಲಿ ಪದವಿ ಅಥವಾ ಇತರ ಸಂಬಂಧಿಸಿದ ಪದವಿ ಪಡೆದಿರಬೇಕು.

    * ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ- ಪರಿಸರ ಇಂಜಿನಿಯರಿಂಗ್​, ಪರಿಸರ ವಿಜ್ಞಾನದಲ್ಲಿ ವಿಶೇಷತೆಯೊಂದಿಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ ಪದವಿ ಪಡೆದಿರಬೇಕು.

    * ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ- ಎಂಸಿಎ, ಎಂ.ಎ ಎಕನಾಮಿಕ್ಸ್​, ಸ್ಟಾಟಿಟಿಕ್ಸ್​, ಎಂ.ಎಸ್​ಸಿ ಕಂಪ್ಯೂಟರ್​ ಸೈನ್ಸ್​, ಬಿಇ ಕಂಪ್ಯೂಟರ್​ ಸೈನ್ಸ್​ ಆಗಿರಬೇಕು.

    ಮೇಲಿನ ಎಲ್ಲ ಹುದ್ದೆಗಳು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. 22,000 ರೂ. ಮಾಸಿಕ ಸಂಭಾವನೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷ.

    ಆಸಕ್ತರು https://rdpr.kar.nic.in/ ನಲ್ಲಿ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿಕೊಂಡು ಮೇ 11 ರೊಳಗಾಗಿ [email protected] ಗೆ ಕಳುಹಿಸಬೇಕು.
    ಉದ್ಯೋಗಾವಕಾಶಗಳಿರುವ ಜಿಲ್ಲೆಗಳು: ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ.

    ವಿವರಗಳಿಗೆ ಏಪ್ರಿಲ್​ 21ರ ವಿಜಯವಾಣಿ ದಿನಪತ್ರಿಕೆಯನ್ನು ನೋಡಿ.

    ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts