More

    ಆರ್​ಡಿಪಿಆರ್​ ವಿವಿಯಲ್ಲಿ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಚಾಲನೆ

    ವಿಜಯವಾಣಿ ಸುದ್ದಿಜಾಲ ಗದಗ
    ಆರ್​ಡಿಪಿಆರ್​ ವಿವಿಯಲ್ಲಿ ಶುಕ್ರವಾರ 7 ದಿನಗಳ ಎನ್​ಎಸ್​ಎಸ್​ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಚಾಲನೆ ನೀಡಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿರಬಿರದಲ್ಲಿ 6 ರಾಜ್ಯ ಒಳಗೊಂಡಂತೆ ದೇಶದ ವಿವಿಧ ಭಾಗಗಳಿಂದ 150 ವಿದ್ಯಾಥಿರ್ಗಳು ಭಾಗವಹಿಸಿದ್ದಾರೆ. ದೇಶದ ವಿವಿಧ ಬಗೆಯ ಕಲೆ ಮತ್ತು ಸಂಸತಿಯನ್ನು ಪ್ರತಿನಿಧಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ. “ನೀರು ಉಳಿಸಿ, ಪಕ್ಷಿ ಸಂಕುಲ ರಕ್ಷಿಸಿ’ ಎಂಬ ದ್ಯೇಯ ವಾಕ್ಯದೊಂದಿಗೆ ಶಿಬಿರದ ಕಾರ್ಯಚಟುವಟಿಕೆಗಳು ಜರುಗಲಿವೆ ಎಂದರು.
    ಏರ್​ ಕಮಾಂಡರ್​ ಸಿ. ಎಸ್​. ಹವಾಲ್ದಾರ್​ ಮಾತನಾಡಿ, ಭಾವೈಕ್ಯತೆ ನಮ್ಮ ದೇಶದ ಹೆಮ್ಮೆ, ವಿವಿಧ ಜನಾಂಗಗಳು, ಪಂಗಡಗಳು, ಧರ್ಮ, ಸಂಸತಿ ಇರುವ ದೇಶದಲ್ಲಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವವೇ ರಾಷ್ಟ್ರೀಯ ಭಾವೈಕ್ಯತೆ. ನಮ್ಮ ದೇಶ ಇದನ್ನು ಪೋಷಿಸುಗೊಂಡು ಬಂದಿದೆ. ಭವ್ಯ ಪರಂಪರೆಯ ದೇಶದ ಸಂಸತಿಯನ್ನು ಪ್ರತಿಪಾದಿಸುತ್ತದೆ. ದೇಶದ ಅಭಿವೃದ್ಧಿಗೆ ಯುವಕರು ಕೊಡುಗೆ ನೀಡಬೇಕು ಎಂದು ಹೇಳಿದರು
    ಕುಲಸಚಿ ಪ್ರೊ. ಸುರೇಶ ನಾಡಗೌಡರ, ಪ್ರಶಾಂತ ಮೆರವಾಡೆ, ಪ್ರಕಾಶ ಮಾಚೇನಹಳ್ಳಿ, ಮಹೇಶ್​ ಅಣ್ಣಿಗೇರಿ, ಅಭಿಷೇಕ ಎಚ್​. ಈ, ಸುರೇಶ್​ ಲಮಾಣಿ, ಡಾ. ಚೈತ್ರಾ ನೇತ್ರಾವತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts