More

    ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್​​18- ಖೇಲ್​ನಲ್ಲಿ ಜಿಂಬಾಬ್ವೆಯ ಜಿಮ್​ ಆಫ್ರೋ ಟಿ10 ಕ್ರಿಕೆಟ್​ ಟೂರ್ನಿ ನೇರಪ್ರಸಾರ

    ಹರಾರೆ: ಬಹುನಿರೀಕ್ಷಿತ ಜಿಂಬಾಬ್ವೆಯ ಜಿಮ್​ ಸೈಬರ್ ಸಿಟಿ ಜಿಮ್ ಆಫ್ರೋ ಟಿ10 ಟೂರ್ನಿ ಪ್ರಾರಂಭವಾಗಲು ವೇದಿಕೆ ಸಿದ್ಧವಾಗಿದ್ದು, ಐದು ಫ್ರಾಂಚೈಸಿಗಳು ಉನ್ನತ ಗೌರವಕ್ಕಾಗಿ ಹೋರಾಡುವ ನಿರೀಕ್ಷೆಯಿದೆ. ಟೂರ್ನಿಯ ಉದ್ಘಾಟನಾ ಆವೃತ್ತಿಯು ಜುಲೈ 21ರಂದು ಆರಂಭವಾಗಲಿದ್ದು, ಜುಲೈ 29ರಂದು ಗ್ರ್ಯಾಂಡ್ ಫೈನಲ್ ಪಂದ್ಯ ನಡೆಯಲಿದೆ. ಜಿಂಬಾಬ್ವೆಯಲ್ಲಿ ನಡೆಯಲಿರುವ ಈ ಮೊಟ್ಟಮೊದಲ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯನ್ನು ಭಾರತೀಯ ಅಭಿಮಾನಿಗಳಿಗೆ ಜಿಯೋಸಿನಿಮಾ ಮತ್ತು ಸ್ಪೋರ್ಟ್ಸ್​​18- ಖೇಲ್​ನಲ್ಲಿ ನೇರಪ್ರಸಾರ ಮಾಡಲಾಗುವುದು.

    ಟೂರ್ನಿಯ ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಟೂರ್ನಿಯನ್ನು ಜಿಂಬಾಬ್ವೆ ಕ್ರಿಕೆಟ್ ಮತ್ತು ಟಿ ಟೆನ್ ಗ್ಲೋಬಲ್ ಸ್ಪೋರ್ಟ್ಸ್ ಜಂಟಿಯಾಗಿ ಆಯೋಜಿಸುತ್ತಿವೆ. ಹರಾರೆ ಹರಿಕೇನ್ಸ್, ಡರ್ಬನ್ ಕ್ವಾಲಂಡರ್ಸ್, ಕೇಪ್​ಟೌನ್ ಸ್ಯಾಂಪ್ ಆರ್ಮಿ, ಬುಲವಾಯೊ ಬ್ರೇವ್ಸ್ ಮತ್ತು ಜೊಹಾನ್ಸ್‌ಬರ್ಗ್ ಬಫಲೋಸ್ ಟೂರ್ನಿಯಲ್ಲಿ ಅಡುವ ಐದು ತಂಡಗಳಾಗಿದ್ದು, ಈಗಾಗಲೇ ಅದ್ದೂರಿ ಪ್ಲೇಯರ್ ಡ್ರಾಫ್ಟ್ ಸಮಾರಂಭದಲ್ಲಿ ತಮ್ಮ ತಂಡಗಳನ್ನು ಅಂತಿಮಗೊಳಿಸಿವೆ. ಜಿಮ್ ಸೈಬರ್ ಸಿಟಿ ಜಿಮ್ ಆಫ್ರೋ ಟಿ10 ಟೂರ್ನಿಯಲ್ಲಿ ಭಾಗವಹಿಸುವ ದೊಡ್ಡ ಸ್ಟಾರ್​ ಆಟಗಾರರ ಹೆಸರುಗಳಲ್ಲಿ ಇಯಾನ್ ಮಾರ್ಗನ್, ಯೂಸುಫ್ ಪಠಾಣ್, ಮೊಹಮ್ಮದ್ ಹಫೀಜ್, ಇರ್ಫಾನ್ ಪಠಾಣ್ ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ ಸೇರಿದ್ದಾರೆ.

    ‘ಫ್ರಾಂಚೈಸಿ ಕ್ರಿಕೆಟ್ ಜಿಂಬಾಬ್ವೆಗೆ ಮೊದಲ ಬಾರಿ ಪ್ರವೇಶ ಮಾಡುತ್ತಿರುವಾಗ, ಭಾರತದಲ್ಲಿ ಅದರ ವಿಶೇಷ ಮಾಧ್ಯಮ ಪಾಲುದಾರರಾಗಿ ಜಿಮ್ ಸೈಬರ್ ಸಿಟಿ ಜಿಮ್ ಆಫ್ರೋ ಟಿ10 ನೊಂದಿಗೆ ಕೈಜೋಡಿಸಲು ನಾವು ಸಂತೋಷಪಡುತ್ತೇವೆ. ಇದು ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಮುಂಬರುವ ಅನೇಕ ಯಶಸ್ಸಿನ ಕಥೆಗಳ ಪೈಕಿ ಆರಂಭವಷ್ಟೇ ಆಗಿದೆ ಎಂದು ನಾವು ಭಾವಿಸುತ್ತೇವೆ’ ಎಂದು ವಯಾಕಾಮ್​18 ವಕ್ತಾರರು ಹೇಳಿದ್ದಾರೆ.

    ‘ಜಿಮ್ ಸೈಬರ್ ಸಿಟಿ ಜಿಮ್ ಆಫ್ರೋ ಟಿ10 ಟೂರ್ನಿಯನ್ನು ಜಿಯೋಸಿನಿಮಾದಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುವುದು. ಜತೆಗೆ ಸ್ಪೋರ್ಟ್ಸ್​18- ಖೇಲ್​ ಚಾನಲ್​ನಲ್ಲಿ ನೇರಪ್ರಸಾರವಾಗುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಅವರು ಕ್ರೀಡೆಯನ್ನು ಅಭಿಮಾನಿಗಳಿಗೆ ತಲುಪಿಸುವ ವಿಷಯದಲ್ಲಿ ಉನ್ನತ ಗುಣಮಟ್ಟವನ್ನು ಹೊಂದಿದ್ದಾರೆ ಮತ್ತು ಹರಾರೆಯಲ್ಲಿ ಅವರು ಅದರ ಮಟ್ಟವನ್ನು ಮತ್ತೆ ಹೆಚ್ಚಿಸುತ್ತಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಕೆಲವು ಸ್ಫೂರ್ತಿದಾಯಕ ಕಥೆಗಳನ್ನು ಹೇಳುತ್ತಾರೆ ಎಂಬುದು ನಮಗೆ ಖಚಿತವಾಗಿದೆ. ಜಿಮ್​ ಸೈಬರ್​ ಸಿಟಿ ಜಿಮ್​ ಆಫ್ರೋ ಟಿ10 ಟೂರ್ನಿ ಜಿಂಬಾಬ್ವೆ ಮತ್ತು ಟಿ10 ಕ್ರಿಕೆಟ್‌ ಪ್ರಯಾಣದಲ್ಲಿ ಒಂದು ಐತಿಹಾಸಿಕ ಪಂದ್ಯಾವಳಿಯಾಗಿದೆ ಮತ್ತು ಅದಕ್ಕಾಗಿ ವಯಾಕಾಮ್​18ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ’ ಎಂದು ಟಿ ಟೆನ್ ಗ್ಲೋಬಲ್ ಸ್ಪೋರ್ಟ್ಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ನವಾಬ್ ಶಾಜಿ ಉಲ್ ಮುಲ್ಕ್ ಹೇಳಿದ್ದಾರೆ.

    ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದನಾ ಬರ್ತ್​ಡೇಗೆ ಬಾಂಗ್ಲಾದೇಶದಲ್ಲಿ ಸಪ್ರ್ರೈಸ್​ ನೀಡಿದ ಬಾಯ್​ಫ್ರೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts