More

    ಜೆಇಇ ಮೇಯ್ನ್ ಫಲಿತಾಂಶ ಬಿಡುಗಡೆ: ಕರ್ನಾಟಕದ ವಿದ್ಯಾರ್ಥಿ ಸೇರಿದಂತೆ 18 ಮಂದಿಗೆ ಪ್ರಥಮ ರಾಂಕ್​

    ನವದೆಹಲಿ: ಈ ವರ್ಷ ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಕೇಂದ್ರಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಮೇಯ್ನ್​ಪರೀಕ್ಷೆಯಲ್ಲಿ ಒಟ್ಟು 44 ಅಭ್ಯರ್ಥಿಗಳು 100 ಪರ್ಸೆಂಟೈಲ್ ಮಾರ್ಕ್ಸ್ ಗಳಿಸಿದ್ದಾರೆ. ಕರ್ನಾಟಕದ ವಿದ್ಯಾರ್ಥಿಯೂ ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರಾಂಕ್ ಹಂಚಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಮಧ್ಯರಾತ್ರಿ ತಿಳಿಸಿದ್ದಾರೆ.

    ಆಲ್​ ಇಂಡಿಯಾ ರಾಂಕ್​​(ಎಐಆರ್​) 1 ಪಡೆದಿರುವ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ – ಗೌರಬ್ ದಾಸ್ (ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪನೀಶ್ (ಆಂಧ್ರಪ್ರದೇಶ), ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಮತ್ತು ಮೃದುಲ್ ಅಗರ್ವಾಲ್ (ರಾಜಸ್ಥಾನ), ರುಚಿರ್ ಬನ್ಸಾಲ್ ಮತ್ತು ಕಾವ್ಯಾ ಚೋಪ್ರಾ (ದೆಹಲಿ), ಅಮಯ್ಯ ಸಿಂಘಾಲ್ ಮತ್ತು ಪಾಲ್ ಅಗರ್ವಾಲ್ (ಉತ್ತರ ಪ್ರದೇಶ), ಕೊಮ್ಮ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ (ತೆಲಂಗಾಣ), ಪಸಾಲ ವೀರ ಶಿವ, ಕರ್ಣಂ ಲೋಕೇಶ್ ಮತ್ತು ಕಂಚನಪಲ್ಲಿ ರಾಹುಲ್ ನಾಯ್ಡು, (ಆಂಧ್ರ ಪ್ರದೇಶ), ಪುಲ್ಕಿತ್ ಗೋಯಲ್ (ಪಂಜಾಬ್) ಮತ್ತು ಗುರಂರೀತ್ ಸಿಂಗ್ (ಚಂಡೀಗಡ).

    ಇದನ್ನೂ ಓದಿ: ಡಿಸೆಂಬರ್​ನಲ್ಲಿ ವಿಕ್ರಾಂತ್ ರೋಣ; ತೆಲುಗು, ತಮಿಳು, ಹಿಂದಿಯಲ್ಲೂ ಕಿಚ್ಚನ ಧ್ವನಿ

    ಎನ್​ಟಿಎ ನಡೆಸಿದ ನಾಲ್ಕು ಹಂತಗಳ ಜೆಇಇ ಮೇಯ್ನ್​ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಅತ್ಯುತ್ತಮ ಅಂಕಗಳನ್ನು ಪರಿಗಣಿಸಿ, ಈ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕನ್ನಡ, ಇಂಗ್ಲೀಷ್​ ಮತ್ತು ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾದ ಜೆಇಇ ಮೇಯ್ನ್​​ ಪರೀಕ್ಷೆಗಳನ್ನು ದೇಶಾದ್ಯಂತ 9.34 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. (ಏಜೆನ್ಸೀಸ್)

    ಕರ್ನಾಟಕ ಟಿಇಟಿ ಫಲಿತಾಂಶ ಬಿಡುಗಡೆ: 45,074 ಅಭ್ಯರ್ಥಿಗಳಿಗೆ ಅರ್ಹತೆ

    ಆತ್ಮಹತ್ಯೆಗೆ ತಯಾರಾಗಿದ್ದವನ ಪ್ರಾಣ ರಕ್ಷಿಸಿದ ಪೊಲೀಸರು!

    ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts