More

    ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ

    ನವದೆಹಲಿ : ರಾಷ್ಟ್ರದ ಪ್ರತಿಷ್ಠಿತ ಟೆಕ್ನಾಲಜಿ ಇನ್​ಸ್ಟಿಟ್ಯೂಟ್​ಗಳಿಗೆ ಪ್ರವೇಶ ನೀಡುವ 2021 ರ ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ (ಜೆಇಇ ಮೇನ್ 2021)ನ ಎರಡು ಹಂತಗಳ ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಕರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಮೂರನೇ ಹಂತದ ಪರೀಕ್ಷೆಗಳು ನಿಗದಿಯಂತೆ, ಜುಲೈ 20 ರಿಂದ 25 ರವರೆಗೆ ನಡೆಯಲಿವೆ.

    ಆದರೆ, ಜುಲೈ 27 ರಿಂದ ಆಗಸ್ಟ್​ 2 ರವರೆಗೆ ನಡೆಯಬೇಕೆಂದು ನಿಶ್ಚಯಿಸಲಾಗಿದ್ದ ನಾಲ್ಕನೇ ಹಂತದ ಪರೀಕ್ಷೆಗಳಿಗೆ ಇದೀಗ ಹೊಸ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. 4ನೇ ಹಂತದ ಪರೀಕ್ಷೆಗಳು​ ಆಗಸ್ಟ್​ 26 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿವೆ.

    ಇದನ್ನೂ ಓದಿ: ಇಬ್ಬರು ಪತ್ನಿಯರಿದ್ದರೆ ಇಬ್ಬರ ಮಕ್ಕಳಿಗೂ ಆಸ್ತಿ ಸಮಪಾಲು ಸಿಗುತ್ತಾ?

    ಈ ಬಗ್ಗೆ ನೂತನ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. “ವಿದ್ಯಾರ್ಥಿ ಸಮುದಾಯದ ಬೇಡಿಕೆಯಂತೆ ಪರೀಕ್ಷೆಗೆ ಉತ್ತಮ ಸಿದ್ಧತೆಗೆ ಅವಕಾಶ ನೀಡುವ ದೃಷ್ಟಿಯಿಂದ ನಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಗೆ 3ನೇ ಮತ್ತು 4ನೇ ಸೆಷನ್​ ನಡುವೆ ನಾಲ್ಕು ವಾರಗಳ ಅಂತರ ನೀಡಲು ಸೂಚಿಸಲಾಗಿದೆ” ಎಂದು ಸಚಿವರು ಹೇಳಿದ್ದಾರೆ.

    ಅಂತೆಯೇ, ನಾಲ್ಕನೇ ಹಂತದ ಜೆಇಇ ಮೈನ್ ಪರೀಕ್ಷೆಗಳು ಆಗಸ್ಟ್​ 26, 27 ಮತ್ತು 31 ಹಾಗೂ ಸೆಪ್ಟೆಂಬರ್ 1 ಮತ್ತು 2 ನೇ ತಾರೀಖುಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. 4ನೇ ಹಂತಕ್ಕೆ ಈಗಾಗಲೇ 7.32 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಜುಲೈ 20 ರವರೆಗೆ ನೋಂದಣಿ ಸಮಯವನ್ನು ವಿಸ್ತರಿಸಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)

    VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!

    ಪಾಕ್​ ಗಡಿಯ ಪ್ರಮುಖ ಪಟ್ಟಣವನ್ನು ಆಕ್ರಮಿಸಿಕೊಂಡ ತಾಲಿಬಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts