More

    ಅಕ್ಕಿ ತುಂಬಿದ ಲಾರಿಯ ವಿರುದ್ಧ ತನಿಖೆಗೆ ಹಿಂದೇಟು

    ದೇವದುರ್ಗ: ಎಪಿಎಂಸಿಯಲ್ಲಿ ಪತ್ತೆಯಾದ ಅಕ್ಕಿ ತುಂಬಿದ ಲಾರಿಯ ಕುರಿತು ತನಿಖೆ ಕೈಗೊಳ್ಳಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕಗೆ ಸೋಮವಾರ ಮನವಿ ಸಲ್ಲಿಸಿತು.

    ಪ್ರಭಾವಿಗಳು ಶಾಮೀಲಾಗಿರುವ ಶಂಕೆ

    ಪಟ್ಟಣದ ಎಪಿಎಂಸಿ ಗೋದಾಮಿನ ಮುಂಭಾಗದಲ್ಲಿ ಅಕ್ಕಿ ತುಂಬದ ಲಾರಿ ಪತ್ತೆಯಾಗಿದೆ. ಇದರಲ್ಲಿ ಪಡಿತರ ಅಕ್ಕಿ ಅನಧಿಕೃತವಾಗಿ ಸಾಗಣೆ ಮಾಡುತ್ತಿರುವ ಅನುಮಾನವಿದೆ. ಒಂದು ವಾರದ ಹಿಂದೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಎಫ್‌ಐಆರ್ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇದರಲ್ಲಿ ಪ್ರಭಾವಿಗಳು ಶಾಮೀಲಾಗಿರುವ ಶಂಕೆಯಿದೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಬಾಕಿ ಕೊಡುವವರೆಗೂ ಕಬ್ಬು ಸಾಗಿಸುವುದಿಲ್ಲ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ರೈತರ ಎಚ್ಚರಿಕೆ

    ಲಾರಿಯಲ್ಲಿರುವ ಅಕ್ಕಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಕುರಿತು ಚಾಲಕ ಹಾಗೂ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು. ನಿರ್ಲಕ್ಷ್ಯ ವಹಿಸದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಂಘಟನೆಯ ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಕುಮಾರ ಮಡಿವಾಳ, ಸೋಫಿಸಾಬ್ ಉದ್ದಾರ್, ಆಂಜನೇಯ್ಯ ನಾಯಕ, ಮುಸ್ತಾಫ್, ಕೆ.ಸುನೀಲ್ ಕುಮಾರ, ವಿನೋದ್‌ಕುಮಾರ, ಅಮರೇಶ ಚವ್ಹಾಣ್, ವಾಜೀದ್, ಹೇಮರೆಡ್ಡಿ, ಶಂಕರ, ಮಲ್ಲಪ್ಪ, ಮರಿಗೆಯ್ಯ ನಾಯಕ, ರಂಗಯ್ಯ, ಹನುಮಂತ್ರಾಯ, ಅಬ್ದುಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts