More

    ಅನಿಮಲ್​ ತರಹದ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​: ಜಾವೇದ್ ಅಖ್ತರ್

    ಮುಂಬೈ: ಕಳೆದ ವರ್ಷದ ಅಂತ್ಯದಲ್ಲಿ ​ ನಟ ರಣಬೀರ್​ ಕಪೂರ್​, ಸಂದೀಪ್​ ರೆಡ್ಡಿ ವಂಗಾ ಕಂಬಿನೇಷನ್​ನ ಅನಿಮಲ್​ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರವು ಬ್ಲಾಕ್​ಬಸ್ಟರ್​ ಎನ್ನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

    ಇನ್ನು ಅನಿಮಲ್​ನಂತಹ ಚಿತ್ರಗಳ ಸಕ್ಸಸ್​ ಬಹಳ ಡೇಂಜರಸ್​ ಎಂದು ಹೇಳುವ ಮೂಲಕ ಬಾಲಿವುಡ್​ನ ಹಿರಿಯ ಸಾಹಿತಿ ಜಾವೇದ್​ ಅಖ್ತರ್​ ಅಸಮಾಧಾನ ಹೊರಹಾಕಿದ್ದಾರೆ. ಇವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಔರಂಗಾಬಾದ್‌ನಲ್ಲಿ ನಡೆದ ಅಜಂತಾ ಎಲ್ಲೋರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಜಾವೇದ್ ಅಖ್ತರ್, ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಲನಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆಯೇ ನಿಂತಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಶೀತಗಾಳಿ, ಭದ್ರತಾ ಕಳವಳ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುಂದೂಡಿಕೆ

    ಒಂದು ವೇಳೆ ಪುರುಷನು ಮಹಿಳೆಯನ್ನು ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ, ಒಬ್ಬ ಪುರುಷನು ಮಹಿಳೆಗೆ ಕಪಾಳಮೋಕ್ಷ ಮಾಡುವುದನ್ನು ಸರಿ ಎಂದು ಹೇಳುವುದಿದ್ದರೇ, ಅಂತಹ ಚಿತ್ರವು ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ ಎಂದು ಹೇಳುವ ಮೂಲಕ ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​ ಹಾಗೂ ಕಬೀರ್​ ಸಿಂಗ್​ ಚಿತ್ರಗಳ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.

    ಆನಂದ್ ಬಕ್ಷಿ ಬರೆದ ಸಾಹಿತ್ಯದ ಬಗ್ಗೆ ವಿವಾದಗಳ ಹೊರತಾಗಿಯೂ, ಖಳ್ ನಾಯಕ್‌ ಸಿನಿಮಾದ ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡು 90 ರ ದಶಕದಲ್ಲಿ ಭಾರಿ ಹಿಟ್ ಆಗಿತ್ತು. ಸಮಸ್ಯೆಯೆಂದರೆ ಪ್ರೇಕ್ಷಕರು ಈ ಹಾಡನ್ನು ಭಾರಿ ಹಿಟ್ ಮಾಡಿದ್ದಾರೆ. ಕೋಟಿಗಟ್ಟಲೆ ಜನರು ಹಾಡನ್ನು ಇಷ್ಟಪಟ್ಟಿದ್ದಾರೆ, ಅದೇ ತುಂಬಾ ಭಯಾನಕ ಎಂದು ಹೇಳಿದ್ದಾರೆ.

    ಒಂದು ಚಲನಚಿತ್ರ ಮತ್ತು ಹಾಡುಗಳನ್ನು ಹಿಟ್ ಮಾಡುವುದು ಪ್ರೇಕ್ಷಕರ ಮೇಲೆ ನಿಂತಿದೆ. ಸಿನಿಮಾ ನಿರ್ಮಾಪಕರಿಗಿಂತ ಹೆಚ್ಚಿನ ಜವಾಬ್ದಾರಿ ಇಂದು ಪ್ರೇಕ್ಷಕರ ಮೇಲಿದೆ. ನೀವು ಯಾವ ರೀತಿಯ ಚಲನಚಿತ್ರಗಳನ್ನು ನೋಡುತ್ತೀರಿ ಎಂಬುದರ ಜವಾಬ್ದಾರಿಯನ್ನು ಸಹ ನೀವು ತೆಗೆದುಕೊಳ್ಳಬೇಕು. ಇದರಿಂದ ಯಾವ ರೀತಿಯ ಚಿತ್ರಗಳನ್ನು ಮಾಡಬೇಕು ಎಂಬುದು ಕೂಡ ನಿರ್ಧಾರವಾಗುತ್ತದೆ ಎಂದು ಸಾಹಿತಿ ಜಾವೇದ್​ ಅಖ್ತರ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts