More

    ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕನ್ನಡಿಗ ಜಾವಗಲ್ ಶ್ರೀನಾಥ್ ಐಸಿಸಿ ಮ್ಯಾಚ್ ರೆಫ್ರಿ

    ಚೆನ್ನೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಐಸಿಸಿ, ಭಾರತೀಯ ಅಂಪೈರ್‌ಗಳನ್ನೇ ನೇಮಿಸಿದ್ದು, ಕನ್ನಡಿಗ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಐಸಿಸಿ ಎಲೈಟ್ ಪ್ಯಾನಲ್‌ನಲ್ಲಿರುವ ಏಕೈಕ ಭಾರತೀಯ ನಿತಿನ್ ಮೆನನ್ (ಎರಡೂ ಟೆಸ್ಟ್‌ಗೆ) ಜತೆಗೆ ಅನಿಲ್ ಚೌಧರಿ (ಮೊದಲ ಟೆಸ್ಟ್) ಮತ್ತು ವೀರೇಂದ್ರ ಶರ್ಮ (2ನೇ ಟೆಸ್ಟ್) ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಸಿ ಶಂಶುದ್ದೀನ್ ಮೊದಲ ಟೆಸ್ಟ್‌ಗೆ ತೃತೀಯ ಅಂಪೈರ್ ಆಗಿರುತ್ತಾರೆ. 2ನೇ ಟೆಸ್ಟ್‌ಗೆ ಅನಿಲ್ ಚೌಧರಿ ತೃತೀಯ ಅಂಪೈರ್ ಆಗಿರುತ್ತಾರೆ. ನಿತಿನ್ ಮೆನನ್ ಹೊರತಾಗಿ ಇತರೆಲ್ಲರೂ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಐಸಿಸಿ ನಿಯಮದನ್ವಯ ಟೆಸ್ಟ್‌ಗೆ ಇಬ್ಬರೂ ತಟಸ್ಥ ಅಂಪೈರ್‌ಗಳಿರಬೇಕಾಗಿದ್ದರೂ, ಕರೊನಾ ಕಾಲದಲ್ಲಿ ಇದರಿಂದ ವಿನಾಯಿತಿ ನೀಡಲಾಗಿದೆ.

    ಇದನ್ನೂ ಓದಿ: ಆಸೀಸ್ ಪ್ರವಾಸದಲ್ಲಿ ಮಿಂಚಿದ 6 ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಮಹೀಂದ್ರಾ

    ಬಯೋ-ಬಬಲ್‌ಗೆ ಚೇತನ್ ಶರ್ಮ
    ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮ ಕೂಡ ಚೆನ್ನೈನಲ್ಲಿ ಟೀಮ್ ಇಂಡಿಯಾದ ಬಯೋ-ಬಬಲ್ ಪ್ರವೇಶಿಸಿದ್ದಾರೆ. ಮೊದಲ ಟೆಸ್ಟ್‌ಗೆ ಮುನ್ನ 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ಭಾರತ ತಂಡ, ಬಳಿಕ 3 ದಿನ ಅಭ್ಯಾಸ ನಡೆಸಲಿದೆ. ಈ ವೇಳೆ ಚೇತನ್ ಶರ್ಮ ಕೂಡ ಟೀಮ್ ಮ್ಯಾನೇಜ್‌ಮೆಂಟ್ ಜತೆಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

    ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಟೆಸ್ಟ್ ಸರಣಿಗೆ ಮುನ್ನ ಚೆನ್ನೈನಲ್ಲಿ ಭಾರತ-ಇಂಗ್ಲೆಂಡ್ ತಂಡಗಳು ಕ್ವಾರಂಟೈನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts