More

    ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್​ ಜಲೋಟ?

    ಮುಂಬೈ: ಗಜಲ್​ ಗಾಯನದಲ್ಲಿ ದೊಡ್ಡ ಹೆಸರು ಮಾಡಿರುವ ಗಾಯಕರಲ್ಲಿ ಅನೂಪ್​ ಜಲೋಟ ಸಹ ಒಬ್ಬರು. 67 ವರ್ಷದ ಅನೂಪ್​ ಇದುವರೆಗೂ ಮೂರು ಬಾರಿ ಮದುವೆಯಾಗಿದ್ದಾರೆ. ಆದರೆ, ಮೂರೂ ಮದುವೆಗಳು ಡೈವೋರ್ಸ್​ನಲ್ಲಿ ಅಂತ್ಯವಾಗಿವೆ. ಇದೀಗ ಅವರು ಇನ್ನೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

    ಇದನ್ನೂ ಓದಿ: VIDEOS| ಹರಿಪ್ರಿಯಾ ಹೊಸ ಹೊಸ ಅವತಾರಗಳು…

    ಅನೂಪ್​ ಜಲೋಟ ಮದುವೆಯಾಗಿದ್ದಾರೆನ್ನುವ ಹುಡುಗಿಯ ಹೆಸರು ಜಸ್ಲೀನ್​ ಮತಾರು. ಅನೂಪ್​ ಮತ್ತು ಜಸ್ಲೀನ್​ ಕಳೆದ ವರ್ಷ ‘ಬಿಗ್​ ಬಾಸ್​’ನಲ್ಲಿ ಜೋಡಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಬ್ಬರೂ ಗುರು-ಶಿಷ್ಯೆಯಾಗಿ ಭಾಗವಹಿಸಿದ್ದು ಸಾಕಷ್ಟು ಚರ್ಚೆಯಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳೆಲ್ಲಾ ಕೇಳಿ ಬಂದಿತ್ತು.

    ಆದರೆ, ‘ಬಿಗ್​ ಬಾಸ್​’ ಮುಗಿದು ಹಲವು ತಿಂಗಳುಗಳಾದರೂ ಅನೂಪ್ ಮತ್ತು ಜಸ್ಲೀನ್​ ದೂರವೇ ಇದ್ದರು. ಇದೀಗ ಅವರಿಬ್ಬರ ಮದುವೆ ಫೋಟೋವೊಂದು ಬಿಡುಗಡೆಯಾಗಿದ್ದು, ಇದನ್ನು ನೋಡಿ ಅವರ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದು ಬೇರೆ ಯಾರೋ ಅಲ್ಲ, ಸ್ವತಃ ಜಸ್ಲೀನ್​ ಅವರೇ ತಮ್ಮ ಇನ್​ಸ್ಟಾ ಖಾತೆಯ ಮೂಲಕ ಈ ಫೋಟೋ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಕ್ಷಮೆ ಕೇಳಲ್ಲ ಎಂದ ಪಾಯಲ್​ ಕೊನೆಗೂ ಮಾಡಿದ್ದೇನು? ಇಲ್ಲಿದೆ ನೋಡಿ ಉತ್ತರ …

    ಅಂದಹಾಗೆ, ಇದೊಂದು ಫೇಕ್​ ಫೋಟೋ ಎಂದು ಹೇಳಲಾಗುತ್ತಿದೆ. ಜಸ್ಲೀನ್, ಇದೀಗ ‘ಯೇ ಮೇರಿ ಸ್ಟೂಡೆಂಟ್​ ಹೇ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅನೂಪ್​ ಜಲೋಟ ಸಹ ನಟಿಸುತ್ತಿದ್ದಾರೆ. ಈ ಚಿತ್ರದ ಫೋಟೋ ಇದು ಎಂದು ಹೇಳಲಾಗುತ್ತಿದೆ. ಅನೂಪ್​ ಆಗಲೀ, ಜಸ್ಲೀನ್​ ಆಗಲೀ ಈ ಬಗ್ಗೆ ಯಾವೊಂದು ಸ್ಪಷ್ಟೀಕರಣವನ್ನೂ ಕೊಟ್ಟಿಲ್ಲ. ಈ ವಿಷಯವನ್ನು ಇಬ್ಬರೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    Photos: ಮಾಲ್ಡೀವ್ಸ್​ನಲ್ಲಿ ತಾಪ್ಸಿ ಏನ್ಮಾಡ್ತಿದ್ದಾರೆ? ನೀವೇ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts