More

    ಟೋಕಿಯೊ ಒಲಿಂಪಿಕ್ಸ್‌ಗೆ ಜಪಾನ್ ಚಕ್ರವರ್ತಿಯಿಂದ ಚಾಲನೆ?

    ಟೋಕಿಯೊ: ಜಪಾನ್ ಚಕ್ರವರ್ತಿ ನರುಹಿಟೊ ಜುಲೈ 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಆರಂಭವನ್ನು ಘೋಷಿಸುವ ಸಾಧ್ಯತೆ ಇದೆ. ಇದಕ್ಕೆ ಮುನ್ನ ಚಕ್ರವರ್ತಿ ನರುಹಿಟೊ, ಇಂಪೀರಿಯಲ್ ಅರಮನೆಯಲ್ಲಿ ವಿದೇಶಿ ಗಣ್ಯರನ್ನೂ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

    61 ವರ್ಷದ ನರುಹಿಟೊ, ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್‌ನ ಗೌರವ ಪೋಷಕರೂ ಆಗಿದ್ದಾರೆ. ಒಲಿಂಪಿಕ್ ಸಂವಿಧಾನದ ಪ್ರಕಾರ, ಆತಿಥೇಯ ದೇಶದ ಮುಖ್ಯಸ್ಥರಿಗೆ ಗೇಮ್ಸ್ ಆರಂಭವನ್ನು ಘೋಷಿಸುವ ಅಧಿಕಾರವಿರುತ್ತದೆ. ನರುಹಿಟೊ ಅವರ ಅಜ್ಜ ಚಕ್ರವರ್ತಿ ಹಿರೊಹಿಟೊ 1964ರ ಟೋಕಿಯೊ ಒಲಿಂಪಿಕ್ಸ್ ಆರಂಭವನ್ನು ಘೋಷಿಸಿದ್ದರು.

    ಪ್ರಮಾಣ ಸ್ವೀಕಾರದಲ್ಲಿ ಸಮಾನತೆ
    ಲಿಂಗ ಸಮಾನತೆಯನ್ನು ತರುವ ಸಲುವಾಗಿ ಟೋಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರದಲ್ಲಿ 3ರ ಬದಲಾಗಿ 6 ಮಂದಿ ಭಾಗವಹಿಸಲು ಐಒಸಿ ಅವಕಾಶ ಕಲ್ಪಿಸಿದೆ. ಈ ಹಿಂದೆ ಕ್ರೀಡಾಪಟು, ಕೋಚ್ ಮತ್ತು ತೀರ್ಪುಗಾರರ ಪರವಾಗಿ ತಲಾ ಒಬ್ಬರು ಪ್ರಮಾಣ ಸ್ವೀಕರಿಸಲಾಗುತ್ತಿತ್ತು. ಅದು ಪುರುಷ ಅಥವಾ ಮಹಿಳೆ ಆಗಿರಬಹುದಾಗಿತ್ತು. ಆದರೆ ಈ ಬಾರಿ ಮೂರೂ ವಿಭಾಗಗಳಿಂದ ತಲಾ ಓರ್ವ ಪುರುಷ ಮತ್ತು ಮಹಿಳೆ ಪ್ರಮಾಣ ಸ್ವೀಕರಿಸಲಿದ್ದಾರೆ. ಜತೆಗೆ ಆಧುನಿಕ ಒಲಿಂಪಿಕ್ಸ್ ಪಿತಾಮಹಾ ಪಿಯರ್ ಡಿ ಕೌಬರ್ಟಿನ್ ಬರೆದಿರುವ ಮೂಲ ಪ್ರಮಾಣ ವಚನದಲ್ಲಿ ‘ಸಮಾನತೆ’ ಮತ್ತು ‘ಸೇರಿದಂತೆ’ ಎಂಬ 2 ಹೊಸ ಪದಗಳನ್ನು ಸೇರಿಸಲಾಗಿದೆ.

    ಬಾಲಿವುಡ್ ನಟಿ ಕಿಮ್ ಶರ್ಮ ಜತೆ ಟೆನಿಸ್ ತಾರೆ ಲಿಯಾಂಡರ್ ಪೇಸ್ ಡೇಟಿಂಗ್!

    VIDEO: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಉತ್ತೇಜನಕ್ಕೆ ಸಿದ್ಧವಾಗಿದೆ ರೆಹಮಾನ್ ಹಾಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts