More

    ಒಂದು ಜಿರಳೆ ಕೊಲ್ಲಲು ಹೋಗಿ ಮನೆಯನ್ನೇ ಸ್ಫೋಟಿಸಿದ!

    ಜಪಾನ್​​: ಒಂದೇ ಒಂದು ಜಿರಳೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ಜಪಾನಿನ ವ್ಯಕ್ತಿಯೊಬ್ಬನು ಅಜಾಗರೂಕತೆಯಿಂದ ತನ್ನ ಅಪಾರ್ಟ್‌ಮೆಂಟ್ ಅನ್ನು ಸ್ಫೋಟಿಸಿದ್ದಾನೆ. ಈ ಘಟನೆ ಜಪಾನ್​ನಲ್ಲಿ ನಡೆದಿದೆ.

    ಪೊಲೀಸರ ಪ್ರಕಾರ, ಜಪಾನಿನ 54 ವರ್ಷದ ವ್ಯಕ್ತಿ ಕುಮಾಮೊಟೊದ ವಾರ್ಡ್‌ನಲ್ಲಿರುವ ತನ್ನ  ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದನು. ಡಿ. 10 ರ ಮಧ್ಯರಾತ್ರಿ ಒಂದು ಜಿರಳೆ ಕಾಣಿಸಿದೆ ಅದನ್ನು ಕೊಲ್ಲಲು ಪ್ರಯತ್ನಿಸಿ ಹೆಚ್ಚಿನ  ಪ್ರಮಾಣದ ಕೀಟನಾಶಕವನ್ನು ಸಿಂಪಡಿಸಿದ್ದಾನೆ. ಅದು ಅಪಾರ್ಟ್‌ಮೆಂಟ್‌ ಸ್ಫೋಟಕ್ಕೆ ಕಾರಣವಾಗಿದೆ. ಈ ಸ್ಫೋಟದಲ್ಲಿ ನಿವಾಸಿಗೆ ಸಣ್ಣಪುಟ್ಟ ಗಾಯವಾಗಿದೆ. ಜಪಾನಿನ ಹೀಟಿಂಗ್ ಟೇಬಲ್, ಮನುಷ್ಯನ ಕೊಟಾಟ್ಸು ಬಳಿ ಸುಟ್ಟ ಗುರುತುಗಳನ್ನು ಪೊಲೀಸರು ಗುರುತಿಸಿದ್ದಾರೆ .

    ಜಪಾನ್‌ನ ರಾಷ್ಟ್ರೀಯ ಗ್ರಾಹಕ ವ್ಯವಹಾರಗಳ ಕೇಂದ್ರವು, ಎಲೆಕ್ಟ್ರಿಕಲ್ ಔಟ್‌ಲೆಟ್‌ಗಳ ಬಳಿ ಕೀಟನಾಶಕ ಬಳಕೆಗೆ ಸಂಬಂಧಿಸಿದ ಸ್ಫೋಟಗಳ ಮಾದರಿಯನ್ನು ಬಳಸಿದ್ದಾರೆಂದು ತಿಳಿಸಿದೆ. ಕೀಟನಾಶಕ ತಜ್ಞರು ಇಂತಹ ಅಭ್ಯಾಸಗಳ ವಿರುದ್ಧ ಎಚ್ಚರಿಕೆ ನೀಡಿದರು, ಎಲೆಕ್ಟ್ರಿಕಲ್ ಔಟ್‌ಲೆಟ್‌ಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅವುಗಳನ್ನು ಹಾನಿಯಾಗುತ್ತವೆ ಮತ್ತು ಜನರಿಗೂ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು.

    ಅನೇಕ ಕೀಟನಾಶಕಗಳು ಆಲ್ಕೋಹಾಲ್ ಸೇರಿದಂತೆ ಸುಡುವ ಪದಾರ್ಥಗಳನ್ನು ಹೊಂದಿರುತ್ತವೆ ಮತ್ತು ಪ್ರೋಪೇನ್ ಮತ್ತು ಬ್ಯುಟೇನ್ ಸೇರಿದಂತೆ ಪ್ರೊಪೆಲ್ಲಂಟ್‌ಗಳನ್ನು ಒಳಗೊಂಡಿರುತ್ತವೆ. ಒಂದು ಕೊಠಡಿಯು ಪ್ರೊಪೆಲ್ಲಂಟ್‌ಗಳು ಮತ್ತು ಆಮ್ಲಜನಕದ ಪರಿಪೂರ್ಣ ಮಿಶ್ರಣವನ್ನು ಹೊಂದಿದ್ದರೆ, ಸ್ಫೋಟ ಸಂಭವಿಸಬಹುದು. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್‌ ಆಗಿದೆ, ತಮಾಷೆಯಾಗಿ ಕಾಣುವ ಈ ಸುದ್ಧಿಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಕಮೆಂಟ್  ಮಾಡುತ್ತಿದ್ದಾರೆ. ಜಾಗೃತಿ ಅಗತ್ಯವಾಗಿದೆ.

    https://www.vijayavani.net/kannada-youtuber-dr-bro-fame-gagan-srinivas-has-gone-nowhere-he-is-planning-to-next-fans-finally-got-an-answer

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts