More

    ಚಂದ್ರಯಾನಕ್ಕೆ ತೆರಳಲು ಸಂಗಾತಿ ಬೇಕಾಗಿದ್ದಾಳೆ: ಅರ್ಜಿ ಸಲ್ಲಿಸಲು ಜನವರಿ 17 ಕೊನೇ ದಿನ!

    ಟೋಕಿಯೊ: ಜಪಾನಿನ ಬಿಲ್ಲೇನಿಯರ್​ ಯುಸಾಕು ಮೇಜಾವಾ ಅವರಿಗೆ ಚಂದ್ರನ ಯಾನಕ್ಕೆ ತೆರಳಲು ಒಬ್ಬಳು ಗೆಳತಿ ಬೇಕಾಗಿದ್ದಾಳೆ. ಅಬೆಮಾ ಟಿವಿಗೆ ಕಾರ್ಯಕ್ರಮವೊಂದು ತಯಾರಾಗುತ್ತಿದ್ದು, ಅದರಲ್ಲಿ ಚಂದ್ರನ ಯಾತ್ರೆಯೇ ಮುಖ್ಯ ವಿಷಯವಾಗಿದೆ.

    “ನನ್ನಲ್ಲಿ ಒಂಟಿತನ ಮತ್ತು ಶೂನ್ಯತೆ ಆವರಿಸಿದೆ. ಈಗ ನಾನು ಒಬ್ಬ ಮಹಿಳೆಯನ್ನು ಪ್ರೀತಿಸುವುದು ಅವಶ್ಯಕ ಅನ್ನಿಸುತ್ತಿದೆ” ಎಂದು ಯುಸಾಕು ಮೇಜಾವಾ ಅವರು ತನ್ನ ವೆಬ್​ಸೈಟ್​ನಲ್ಲಿ ಬರೆದುಕೊಂಡಿದ್ದಾರೆ. ಮತ್ತೆ ಅದೇ ವೆಬ್​ಸೈಟ್​ನಲ್ಲಿ ಮಹಿಳೆಯರಿಂದ ಅರ್ಜಿ ಕರೆಯಲಾಗಿದೆ.

    “ನಾನೀಗ ಜೀವನ ಸಂಗಾತಿಯನ್ನು ಹುಡುಕಬೇಕಿದೆ. ಭವಿಷ್ಯದಲ್ಲಿ ಆಕೆ ನನ್ನ ಜೀವನದ ಭಾಗವಾಗಿ ಇರಲಿದ್ದಾಳೆ. ಇಂತಹ ಪ್ರೀತಿಯನ್ನು ನಾನು ಬಾಹ್ಯಾಕಾಶದಿಂದ ಜಗತ್ತಿಗೆ ಕೂಗಿ ಹೇಳಬೇಕಿದೆ” ಎಂದು ಬರೆದುಕೊಂಡಿದ್ದಾರೆ.

    2023ರಲ್ಲಿ ಎಲೋನ್ ಮಸ್ಕ್‌ ಎಂಬಲ್ಲಿನ ಸ್ಪೇಸ್‌ಎಕ್ಸ್‌ನಿಂದ ಯುಸಾಕು ಮೇಜಾವಾ ಅವರು ಮೊದಲ ಖಾಸಗಿ ಪ್ರಯಾಣಿಕನಾಗಿ ಚಂದ್ರನ ಸುತ್ತ ಹಾರಾಟ ನಡೆಸಲಿದ್ದಾರೆ. ಈ ಬಗ್ಗೆ ಅಬೆಮಾ ಟಿವಿ ಕಾರ್ಯಕ್ರಮವೊಂದನ್ನು ತಯಾರಿಸಲಿದೆ. ಆ ಕಾರ್ಯಕ್ರಮಕ್ಕೆ “ಫುಲ್​ ಮೂನ್​ ಲವರ್ಸ್​” ಅಂದು ಹೆಸರಿಸಲಾಗಿದೆ.

    ಈ ಅರ್ಜಿ ಸಲ್ಲಿಸಲು 20 ವರ್ಷದ ಹುಡುಗಿಯರು ಅರ್ಹರಾಗಿರುತ್ತಾರೆ. ಮತ್ತು ಇದಕ್ಕಾಗಿ ಬಾಹ್ಯಾಕಾಶಕ್ಕೆ ಹೋಗಲು ಹಾಗೂ ಅದಕ್ಕಾಗಿ ನಡೆಸುವ ತಯಾರಿಯಲ್ಲಿ ಭಾಗವಹಿಸಲು ಸಿದ್ಧರಿರಬೇಕು. ವಿಶ್ವಶಾಂತಿ ಬಯಸುವವರಿಗೆ ಸ್ವಾಗತ ಎಂದು ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ ಜನವರಿ 17. ಮಾರ್ಚ್​ನಲ್ಲಿ ಯುಸಾಕು ಮೇಜಾವಾ ಅವರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts