More

    ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ಜಾಹ್ನವಿ ಕಪೂರ್​: ವಿಡಿಯೋ ವೈರಲ್​

    ಮುಂಬೈ: ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​, ಮಾದಕ ಉಡುಗೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವುದರ ಜೊತೆಗೆ ಟ್ರೋಲ್​ ಸಹ ಆಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಡ್ರೆಸ್​ ಕಾರಣದಿಂದಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಸಾಮಾನ್ಯವಾಗಿ ಯಾವುದೇ ಉಡುಗೆ ತೊಟ್ಟರು ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಬೆರಗು ಮೂಡಿಸುವ ಜಾಹ್ನವಿ, ಈ ಬಾರಿ ಬೇರೆ ವಿಚಾರಕ್ಕೆ ಟ್ರೋಲ್​ ಆಗಿದ್ದಾರೆ. ನಿನ್ನೆ ಮುಂಬೈನ ನಿವಾಸದಿಂದ ಹೊರಬಂದ ಜಾಹ್ನವಿ, ನೀಲಿ ಬಣ್ಣದ ಬಾಡಿ ಫಿಟ್ಟಿಂಗ್​ ಥೈ ಸ್ಲಿಟ್ ಗೌನ್​ ಧರಿಸಿದ್ದರು. ಅಲ್ಲದೆ, ಅದಕ್ಕೆ ಸೇಫ್ಟಿ ಪಿನ್​ ಸಹ ಅಳವಡಿಸಲಾಗಿತ್ತು. ಇದೀಗ ಅವರು ಡ್ರೆಸ್ಸಿಂಗ್​ ಸ್ಟೈಲ್​ ಅನ್ನು ಉರ್ಫಿ ಜಾವೇದ್​ ಅವರಿಗೆ ಹೋಲಿಸಿದ್ದಾರೆ. ಉರ್ಫಿಯನ್ನು ನಕಲು ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಅಲ್ಲದೆ, ಜಾಹ್ನವಿ ಅವರು ಬಾಡಿ ಫಿಟ್ಟಿಂಗ್​ ಡ್ರೆಸ್​ ಧರಿಸಿದ್ದರಿಂದಲೂ ಟ್ರೋಲ್​ ಆಗಿದ್ದಾರೆ.

    ಅಂದಹಾಗೆ ಉರ್ಫಿ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ. ಜಾಲತಾಣ ಬಳಸುವವರಿಗೆ ಉರ್ಫಿ ಪರಿಚಯ ಇದ್ದೇ ಇರುತ್ತದೆ. ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್‌ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು. ತಾನು ತೊಡುವ ಡ್ರೆಸ್‌ಗಳಿಂದಲೇ ಟ್ರೋಲ್‌ ಆಗುವ ಈಕೆ ಬಾಲಿವುಡ್​ ಟಿಲಿ ವಿಷನ್​ ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ಜಾಹ್ನವಿ ಕಪೂರ್​ ಅವರ ಮಿಲಿ ಸಿನಿಮಾ ಇಂದು (ನ.4) ತೆರೆಕಂಡಿದ್ದು, ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಕಾರು ಒರಗಿಕೊಂಡು ನಿಂತಿದ್ದ ಬಾಲಕನಿಗೆ ಜಾಡಿಸಿ ಒದ್ದ ಯುವಕ: ದರ್ಪ ಮೆರೆದವನಿಗೆ ಮರು ಕ್ಷಣವೇ ಶಾಕ್​!

    ನಾನು ಮತ್ತು ನನ್ನ ತಂದೆ ಶ್ರೀಮಂತರಲ್ಲ! ಜಾಹ್ನವಿ ಕಪೂರ್​ ಅಚ್ಚರಿಯ ಹೇಳಿಕೆ ಹಿಂದಿದೆ ಈ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts