More

    ಬಿಜೆಪಿಗೆ ಮರಳಿ ಹೋಗುವ ಬಗ್ಗೆ ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ: ಜನಾರ್ದನ ರೆಡ್ಡಿ

    ಬೆಂಗಳೂರು: ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಈಗ ಅದು ನನ್ನ ಪಾಲಿಗೆ ನೂರಕ್ಕೆ ನೂರರಷ್ಟು ಮುಗಿದ ಅಧ್ಯಾಯ ಎಂದು ಗಂಗಾವತಿ ಕ್ಷೇತ್ರದ ಕೆಆರ್​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ನೇತೃತ್ವದ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಪರ್ಧಿಸಿದ್ದ ಅನೇಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದಿತ್ತು. ಇದರಿಂದಾಗಿ ಎಚ್ಚೆತ್ತಿರುವ ಬಿಜೆಪಿ ಜನಾರ್ದನ ರೆಡ್ಡಿ ಅವರನ್ನು ಮಾತೃಪಕ್ಷಕ್ಕೆ ಮರಳಿ ಕರೆತರಲು ಯತ್ನ ನಡೆದಿದೆ ಎಂಬ ಮಾತು ಕೇಳಿ ಬಂದಿದೆ.

    ಇದನ್ನೂ ಓದಿ: ಶಾಪಿಂಗ್ ಮಾಲ್​ನಲ್ಲಿ ಅಗ್ನಿ ಅವಘಡ; 11 ಮಂದಿ ಮೃತ್ಯು

    ಈ ಕುರಿತು ಪ್ರತಿಕ್ರಿಯಿಸಿರುವ ಜನಾರ್ದನ ರೆಡ್ಡಿ, ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಈಗ ಅದು ನನ್ನ ಪಾಲಿಗೆ ನೂರಕ್ಕೆ ನೂರರಷ್ಟು ಮುಗಿದ ಅಧ್ಯಾಯ. ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಯೋಚನೆಯೇ ಮಾಡಿಲ್ಲ. ಕೆಆರ್​ಪಿಪಿ ಪಕ್ಷದ ಸ್ಥಾಪಿಸಿದಾಗ ಯಾರೆಲ್ಲಾ ಎಷ್ಟೇ ಪ್ರಯತ್ನಿಸಿದರೂ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸ್ವತಂತ್ರವಾಗಿಯೇ ನಾನು ಮುಂದೆ ಹೋಗುತ್ತೇನೆ.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ನನ್ನ ಸಹಾಯ ಕೇಳುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಯಡಿಯೂರಪ್ಪ ಅವರನ್ನು ತಂದೆಯ ಸ್ಥಾನದಲ್ಲಿ ಗೌರವಿಸಿದರೆ, ಶ್ರೀರಾಮುಲು ಅವರನ್ನು ಮಗು ರೂಪದಲ್ಲಿ ನೋಡುತ್ತೇನೆ. ಅವರು ಆಯಾ ಪಕ್ಷದಲ್ಲಿ ಚೆನ್ನಾಗಿರಲಿ ಎಂದು ಬಯಸುವೆ ಹೊರತು ಅವರನ್ನು ಆಹ್ವಾನ ಮಾಡಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts