More

    ಜನದನಿ ಸಂಸ್ಥೆಯಿಂದ ಡಿ.17ರಂದು ಹೈಸ್ಕೂಲ್​ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ

    ಬೆಂಗಳೂರು: ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಜನದನಿ ಸಂಸ್ಥೆಯು ಡಿ. 17 ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ರಾಜ್ಯದ ಸರ್ಕಾರ ಮತ್ತು ಸರಕಾರೇತರ ಪ್ರೌಢಶಾಲಾ ಮಕ್ಕಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆಯ ಸ್ಪರ್ಧೆಗಳನ್ನು ಆನ್​ಲೈನ್​ ಮೂಲಕ ನಡೆಸುತ್ತಿದೆ.

    ಈ ಸ್ಪರ್ಧೆಯ ಮೂಲಕ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳನ್ನು ತಡೆಗಟ್ಟುವ ಕುರಿತು ಯುವಜನತೆಯಲ್ಲಿ ಆರೋಗ್ಯಕರ ಚಿಂತನೆ ಮತ್ತು ಜವಾಬ್ದಾರಿಯನ್ನು ಹುಟ್ಟಿಸುವ ಉದ್ದೇಶವನ್ನು ಜನದನಿ ಸಂಸ್ಥೆ ಹೊಂದಿದೆ.

    ರಾಜ್ಯದ ಒಟ್ಟು 138 ಪ್ರೌಢಶಾಲೆಗಳ ಮಕ್ಕಳು ಈ ಸ್ಪರ್ಧೆಗಳಲ್ಲಿ ಆನ್​ಲೈನ್​ ಮೂಲಕ ಭಾಗವಹಿಸಲಿದ್ದಾರೆ. DSERT ಇಲಾಖೆಗೆ ಜನದನಿ ಟ್ರಸ್ಟ್ ಮನವಿ ಸಲ್ಲಿಸಿ, ರಾಜ್ಯದ ಎಲ್ಲಾ ಜಿಲ್ಲೆಯ ಪ್ರೌಢಶಾಲೆಗಳಿಗೆ ಈ ಸ್ಪರ್ಧೆಗಳ ವಿಷಯವನ್ನು ತಿಳಿಸುವಂತೆ ಕೇಳಿಕೊಂಡಿತ್ತು. ಇಲಾಖೆಯ ಸುತ್ತೋಲೆಯನ್ನು ಗಮನಿಸಿ, ವಿಜಯಪುರ, ತುಮಕೂರು, ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಹಾವೇರಿ, ಚಿತ್ರದುರ್ಗ, ಮೈಸೂರು, ದಾವಣಗೆರೆ, ಶಿವಮೊಗ್ಗ, ಗದಗ, ಬೆಂಗಳೂರು, ರಾಯಚೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಸುಮಾರು 20 ಜಿಲ್ಲೆಯ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿ ತಮ್ಮ ಶಾಲೆಯ ಮಕ್ಕಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿವೆ. ಸ್ಪರ್ಧೆಗಳು ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು, ಭಾಗವಹಿಸಲಿರುವ ಅಷ್ಟೂ ಶಾಲೆಗಳಿಗೆ ಆನ್​ಲೈನ್​ ವ್ಯವಸ್ಥೆಯ ಬಗ್ಗೆ ಜನದನಿಯ ಸದಸ್ಯರು ತರಬೇತಿ ನೀಡಿದ್ದಾರೆ ಎಂದು ಜನದನಿ ಟ್ರಸ್ಟ್​ನ ಅಧ್ಯಕ್ಷರು ಜಯಲಕ್ಷ್ಮೀ ಪಾಟೀಲ್​ ಮಾಹಿತಿ ನೀಡಿದ್ದಾರೆ.

    ಜನದನಿ ಸಂಸ್ಥೆಯ ಬಗ್ಗೆ
    ಜನದನಿ ಒಂದು ಸರಕಾರೇತರ (ಎನ್ ಜಿ ಒ) ಸಂಸ್ಥೆಯಾಗಿದ್ದು, ಕಳೆದ ಒಂಬತ್ತು ವರ್ಷಗಳಿಂದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯಾಗಿದೆ.

    ಕಡೂರಿನಲ್ಲಿ ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು!

    ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2500 ವರ್ಷ ಹಳೆಯ ಸಂಸ್ಕೃತ ವ್ಯಾಕರಣ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ!

    ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು! ಇಲ್ಲಿದೆ 5 ಸರಳ ಟಿಪ್ಸ್​:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts