More

    ಜನಮತ: ಅಭಿವೃದ್ಧಿಯಲ್ಲಿ ವಿದೇಶ ಮಾದರಿ, ಪರಿಸರ ಕಾಳಜಿಗೆ ಏಕಿಲ್ಲ?

    ಜನಮತ: ಅಭಿವೃದ್ಧಿಯಲ್ಲಿ ವಿದೇಶ ಮಾದರಿ, ಪರಿಸರ ಕಾಳಜಿಗೆ ಏಕಿಲ್ಲ?ಕೆಲವು ದಿನಗಳ ಹಿಂದೆ ಅಮೆರಿಕದ ದೊಡ್ಡ ನಗರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾಗಿರುವ ಸಾನ್​ಫ್ರಾನ್ಸಿಸ್ಕೋ ನಗರಕ್ಕೆ ಹೋಗಿದ್ದೆವು. ಅಲ್ಲಿ ನೋಡಿದ ಒಂದು ದೃಶ್ಯ ಹೀಗಿತ್ತು. ನಗರದಲ್ಲಿ ಅಲ್ಲಲ್ಲಿ ರಸ್ತೆ ಅಗಲೀಕರಣ ಮತ್ತು ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಆದಕ್ಕಾಗಿ ರಸ್ತೆಯಲ್ಲಿ ಇದ್ದ ಬೃಹತ್ ವೃಕ್ಷಗಳನ್ನು ಸ್ಥಳಾಂತರ ಮಾಡುವುದು ಒಂದೆಡೆಯಾದರೆ, ರಸ್ತೆಯ ನಡುವೆ ಇದ್ದ ಸಣ್ಣ ವೃಕ್ಷಗಳನ್ನು ಕೂಡ ಕತ್ತರಿಸದೆ, ಅದಕ್ಕೆ ಎರಡೂ ಕಡೆ ತ್ರಿಭುಜಾಕಾರದ ಬೇಲಿಯನ್ನು ಲೋಹದ ಕಂಬಗಳಿಂದ ರಚಿಸಲಾಗುತ್ತಿತ್ತು.

    ಆದರೆ ನಮ್ಮ ದೇಶದಲ್ಲಿ ರಸ್ತೆ ಅಗಲೀಕರಣ ಸೇರಿ ಯಾವುದೇ ಅಭಿವೃದ್ಧಿ ಯೋಜನೆಗಳಲ್ಲಿ ಮೊದಲ ಬಲಿ ವೃಕ್ಷ ಸಂಕುಲ. ಯೋಜನೆಗಳನ್ನು ಸಾಕಷ್ಟು ಮುಂಚಿತವಾಗಿ ರೂಪಿಸಲಾಗುತ್ತದೆ. ಹಾಗಿರುವಾಗ ಯೋಜನೆಯ ಪರಿಧಿಯಲ್ಲಿ ಬರಬಹುದಾದ ಮರಗಳ ಸಂಖ್ಯೆಯ ಲೆಕ್ಕ ಸಹಜವಾಗಿಯೇ ತಿಳಿಯುತ್ತದೆ. ಆದ್ದರಿಂದ ಯೋಜನೆ ಆರಂಭಿಸುವ ಮೊದಲು ಪರ್ಯಾಯ ಅರಣ್ಯ ರೂಪಿಸುವ ಕಾರ್ಯವನ್ನು ಅದೇ ಯೋಜನೆಯ ಭಾಗವಾಗಿ ಅಳವಡಿಸಿ ಮರಗಳನ್ನು ಕಡಿಯುವ ಮೊದಲು ಗಿಡಗಳನ್ನು ನೆಡುವ ಪ್ರಕ್ರಿಯೆಯನ್ನು ಆರಂಭಿಸಿದರೆ ಕನಿಷ್ಠ ಯೋಜನೆ ಮುಗಿಯುವಷ್ಟರಲ್ಲಿ ಒಂದಿಷ್ಟು ಮರಗಳು ಹುಟ್ಟಿ, ಬೆಳೆದು ಸಿದ್ಧವಾಗಿ ಸ್ವಲ್ಪವಾದರೂ ಸಮತೋಲನ ಸಾಧಿಸಬಹುದಲ್ಲ? ಇದನ್ನು ರಸ್ತೆ, ಕಾರ್ಖಾನೆ ಅಥವಾ ಇನ್ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವ ಮೊದಲು ಕಡ್ಡಾಯಗೊಳಿಸುವತ್ತ ಯೋಚಿಸಬೇಕು.

    ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದ ನಾಸಾದೊಡನೆ ಸ್ಪರ್ಧಿಸುವಷ್ಟು ತಂತ್ರಜ್ಞಾನ ಹೊಂದಿರುವ ನಮಗೆ ವಿದೇಶಗಳಲ್ಲಿರುವ ಪರಿಸರ ಕಾಳಜಿಯ ವಿಷಯಗಳೇಕೆ ಮುಖ್ಯ ಅನ್ನಿಸುವುದಿಲ್ಲ? ಅಭಿವೃದ್ಧಿ ಹೆಸರಿನಲ್ಲಿ ಸಹಸ್ರಾರು ವೃಕ್ಷಗಳ ಮಾರಣಹೋಮ ಅನಿವಾರ್ಯವೇ, ಬದಲಿಗೆ ಮರಗಳನ್ನು ನೆಡುವ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲವೆ?

    | ಮೋಹನದಾಸ ಕಿಣಿ ಕಾಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts