More

    ‘ಜೇಮ್ಸ್‘ ಟೀಸರ್​ನ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್! ಅಪ್ಪುಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

    ಅವರು ಅಭಿಮಾನಿಗಳನ್ನು ದೇವರು ಎಂದವರು. ಆದರೆ, ಅವರು ಅಗಲಿದ ನಂತರ ಅಭಿಮಾನಿಗಳಿಗೆ ಅವರು ನಿಜವಾದ ದೇವರಾದರು. ಅವರೇ ಅಪ್ಪು. ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಕೊನೆಯ ಬಾರಿ ಅಭಿನಯಿಸಿದ ‘ಜೇಮ್ಸ್’ ಚಿತ್ರವನ್ನು ವೀಕ್ಷಿಸಲು ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್​ಗಳು ಸಖತ್ ನಿರೀಕ್ಷೆ ಹುಟ್ಟಿಸಿದ್ದು, ಸಖತ್ ವೈರಲ್ ಕೂಡಾ ಆಗಿದ್ದವು. ಇದೀಗ, ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು, ಅದು ಅಭಿಮಾನಿಗಳ ಮನಗೆಲ್ಲುತ್ತಿದ್ದು, ಕಮಾಲ್ ಮಾಡುತ್ತಿದೆ. 1.27 ನಿಮಿಷದ ‘ಜೇಮ್ಸ್’ ಟೀಸರ್​ನಲ್ಲಿ ಅಪ್ಪು ಪಾತ್ರದ ಒಂದು ಸಣ್ಣ ಪರಿಚಯವಿದ್ದು, ಅದನ್ನು ಕಂಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.
    ಒಂದು ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ‘ಜೇಮ್ಸ್’ ಎನ್ನುವದಕ್ಕೆ ಇಂದು ಬಿಡುಗಡೆಯಾದ ಟೀಸರ್ ಸಾಕ್ಷಿ ಎಂದರೇ ತಪ್ಪಾಗುವುದಿಲ್ಲ. ಅಪ್ಪು ಅವರ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಅವರು ಡಬ್ಬಿಂಗ್ ಮಾಡಿದ್ದಾರೆ. ಟೀಸರ್​ನಲ್ಲಿರುವ ‘ಭಾವನೆಗಳು ಬ್ಯುಸಿನೆಸ್​ಗಿಂತ ದೊಡ್ಡದುಜೇಮ್ಸ್’ ಎಂಬ ಬರಹ ಇದೀಗ ಅಭಿಮಾನಿಗಳನ್ನು ದಿಲ್ ಖುಷ್ ಮಾಡಿದೆ. ಪುನೀತ್​ ರಾಜ್​ಕುಮಾರ್ ಅವರು ಹೃದಯಾಘಾತದಿಂದ ಕಳೆದ ವರ್ಷ ಅ.29ರಂದು​ ನಿಧನರಾಗಿದ್ದು ಎಲ್ಲರಿಗೂ ತೀವ್ರ ನೋವುಂಟುಮಾಡಿತ್ತು. ಹೀಗಾಗಿ, ಅಪ್ಪು ಕೊನೆಯ ಬಾರಿಗೆ ತೆರೆ ಮೇಲೆ ಮಿಂಚಲಿರುವ ಈ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಆಧರಿಸುತ್ತಾ, ಖುಷಿ ಪಡುತ್ತಿದ್ದಾರೆ.
    ಬೆಂಗಳೂರಿನ ಹಲವು ಕಡೆ LED ಸ್ಕ್ರೀನ್​ಗಳನ್ನು ಹಾಕಿ, ಸಿನಿಮಾದ ಟೀಸರ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ಟೀಸರ್​ನ ಹಲವು ದೃಶ್ಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ‘ಜೇಮ್ಸ್ಸಿನಿಮಾ ಮಾರ್ಚ್ 17ರಂದು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚೇತನ್ ಕುಮಾರ್ ಅವರು ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಕಿಶೋರ್ ಪತ್ತಿಕೊಂಡ ಅವರು ನಿರ್ಮಾಪಕರು. ನಟಿ ಪ್ರಿಯಾ ಆನಂದ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ಶ್ರೀಕಾಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ‘ಜೇಮ್ಸ್‘ ಟೀಸರ್​ನ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್! ಅಪ್ಪುಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು? ‘ಜೇಮ್ಸ್‘ ಟೀಸರ್​ನ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್! ಅಪ್ಪುಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts