More

    ಚಾಲಕರಿಗೆ ನಿವೇಶನ ಕೊಡಿಸಲು ಸಹಕಾರ

    ಜಮಖಂಡಿ: ದೇಶದ ಅಭಿವೃದ್ಧಿಯಲ್ಲಿ ಚಾಲಕರ ಪಾತ್ರ ಅತಿಮುಖ್ಯವಾಗಿದೆ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕರು ದುಶ್ಚಟಗಳನ್ನು ಮಾಡದೆ, ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

    ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಂಗಳೂರಿನ ಖಾಸಗಿ ಹಾಗೂ ಟ್ಯಾಕ್ಸಿ ವಾಹನ ಚಾಲಕರ ಸಂಘ, ಗಜಾನನ ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಹಕರು ವಾಹನ ಚಾಲಕರ ಮೇಲೆ ಅಗಾಧ ವಿಶ್ವಾಸ ಇಟ್ಟಿರುತ್ತಾರೆ. ಗ್ರಾಹಕರನ್ನು ಸುರಕ್ಷಿತವಾಗಿ ಸರಿಯಾದ ವೇಳೆಗೆ ಅವರನ್ನು ಮುಟ್ಟಿಸಬೇಕು. ಅವರ ಜತೆ ಸರಿಯಾಗಿ ವರ್ತಿಸಬೇಕು ಎಂದರು.

    ವಾಹನ ಚಾಲಕರು ಸರಿಯಾದ ವೇಳೆಗೆ ಇನ್ಶೂರೆನ್ಸ್ ಮಾಡಿಸಿ ದಾಖಲೆಗಳು ಸರಿಯಾಗಿಟ್ಟುಕೊಳ್ಳಬೇಕು. ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಗರದಲ್ಲಿ ಚಾಲಕರ ಸಂಘಕ್ಕೆ ನಿವೇಶನ ಕೊಡಿಸುವಲ್ಲಿ ಸಹಾಯ ಸಹಕಾರ ನೀಡಲಾಗುವುದು ಎಂದರು.

    ಸಂಘದ ರಾಜ್ಯಾಧ್ಯಕ್ಷ ನಿಂಗರಾಜ ಜಿ. ಮಾತನಾಡಿ, ಅಸಂಘಟಿತರನ್ನು ಒಗ್ಗೂಡಿಸಿ ಪ್ರತಿ ತಾಲೂಕಿನಲ್ಲಿ ಸಂಘಟನೆಯನ್ನು ಪ್ರಾರಂಭಿಸಲಾಗುತ್ತಿದೆ. ಸಂಘಟನೆಯಿಂದ ಸಾರ್ವಜನಿಕರು ಚಾಲಕರನ್ನು ನೋಡುವ ದೃಷ್ಟಿ ಬದಲಾಯಿಸುವ ಕಾರ್ಯ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಬಜೆಟ್‌ನಲ್ಲಿ ಚಾಲಕರಿಗೆ ಅನುದಾನ ಕಾಯ್ದಿರಿಸಬೇಕು ಎಂದರು.

    ಪಿಎಸ್‌ಐ ಗೋವಿಂದೇಗೌಡ ಪಾಟೀಲ, ಉದ್ಯಮಿ, ಅರ್ಬನ್ ಬ್ಯಾಂಕ್ ನಿರ್ದೇಶಕ ಮಾಮೂನ ಪಾರ್ಥನಳ್ಳಿ, ಜಿ.ಪಂ. ಸದಸ್ಯ ಬಸವರಾಜ ಬಿರಾದಾರ ಮಾತನಾಡಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಮಿಕ ಅಧಿಕಾರಿ ಬಿ.ಆರ್. ಜಾಧವ, ನಗರ ಸಭೆ ಸದಸ್ಯ ರಾಜು ಪಿಸಾಳ, ಮುಖಂಡ ಸಚಿನ ಕುಲಕರ್ಣಿ, ಗ್ರಾಮೀಣ ಪಿಎಸ್‌ಐ ಅನೀಲಕುಮಾರ ರಾಠೋಡ, ನಗರಸಭೆ ಸದಸ್ಯೆ ದಾನೇಶ ಘಾಟಗೆ, ಜಿಲ್ಲಾಧ್ಯಕ್ಷ ಶಿವಾನಂದ ಪವಾರ, ದೇವಲ ದೇಸಾಯಿ, ಎಇಇ ಜಯಾನಂದ ಹಿರೇಮಠ, ನ್ಯಾಯವಾದಿ ಆನಂದ ಮುಂಜಿ, ತಾಲೂಕಾಧ್ಯಕ್ಷ ಸುರೇಶ ಮಾನೆ, ಉಪಾಧ್ಯಕ್ಷ ಅಬುಬಕ್ಕರ ಜತ್ತಿ, ಕಾನಿಪ ಅಧ್ಯಕ್ಷ ಎಂ.ಎನ್.ನದ್ಾ ಇತರರು ಇದ್ದರು. ನಾಗರಾಜ ತಂಗಡಗಿ ಸ್ವಾಗತಿಸಿದರು. ಉಮೇಶ ಸಿದರೆಡ್ಡಿ ನಿರೂಪಿಸಿದರು. ಚಂದ್ರಶೇಖರ ರಾಮದುರ್ಗ ವಂದಿಸಿದರು.

    ಚಾಲಕರ ಕಾರ್ಯ ಪರಿಶುದ್ಧವಾಗಿರಬೇಕು. ವಾಹನ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಶಿಸ್ತು ರೂಢಿಸಿಕೊಳ್ಳಬೇಕು. ವ್ಯಸನ ಮುಕ್ತರಾಗಿರಬೇಕು. ಶ್ರದ್ಧೆ, ಸಮಯ ಪ್ರಜ್ಞೆಯಿಂದ ಕೆಲಸ ಮಾಡಬೇಕು.
    – ಜಗದೀಶ ಗುಡಗುಂಟಿ, ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts