More

  “ಜೈ ಶ್ರೀರಾಮ್”​ ಘೋಷಣೆ ಪ್ರೀತಿ, ಏಕತೆಯ ಸಂಕೇತ: ಜಾವೇದ್ ಅಖ್ತರ್

  ಮುಂಬೈ: ಧರ್ಮ ಮತ್ತು ರಾಜಕೀಯ ವಿದ್ಯಾಮಾನಗಳ ಕುರಿತು ತಮ್ಮ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿರುವ ಹಿಂದಿ ಚಿತ್ರರಂಗದ ಹಿರಿಯ ಸಾಹಿತಿ, ಕವಿ ಜಾವೇದ್​ ಅಖ್ತರ್​ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜೈ ಶ್ರೀರಾಮ್​ ಎಂಬ ಘೋಷಣೆ ಪ್ರೀತಿ ಮತ್ತು ಏಕತೆಯ ಸಂಕೇತ ಎಂದು ಹೇಳುವ ಮೂಲಕ ಈ ಬಾರಿ ಸುದ್ದಿಯಾಗಿದ್ದಾರೆ.

  ಶ್ರೀರಾಮ ಮತ್ತು ಸೀತಾ ದೇವಿ ಆದರ್ಶ ಸತಿ-ಪತಿಗೆ ನೀಡಬಹುದಾದ ಉತ್ತಮ ಉದಾಹರಣೆ ಎಂದು ಹೇಳುವ ಮೂಲಕ ಜಾವೇದ್​ ಅಖ್ತರ್​ ಸುದ್ದಿಯಾಗಿದ್ದು, ಇವರ ಹೇಳಿಕೆಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

  ರಾಜ್​ ಠಾಕ್ರೆ ಣೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಜಾವೇದ್​ ಅಖ್ತರ್, ಅನೇಕ ದೇವತೆಗಳಿದ್ದಾರೆ. ಆದರೆ, ನಾವು ಆದರ್ಶ ಸತಿ-ಪತಿ ಬಗ್ಗೆ ಮಾತನಾಡುವಾಗ ಮೊದಲಿಗೆ ನಮ್ಮ ತಲೆಗೆ ಬರುವುದು ಶ್ರೀರಾಮ ಮತ್ತು ಸೀತಾ ದೇವಿ. ಜೈ ಶ್ರೀರಾಮ್​ ಎಂಬ ಘೋಷನೆಯು ಪ್ರೀತಿ ಮತ್ತು ಏಕತೆಯ ಸಂಕೇತವಾಗಿದೆ.

  ಇದನ್ನೂ ಓದಿ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು; ಬಿ.ವೈ. ವಿಜಯೇಂದ್ರಗೆ ಟೀಕಿಸಿ ಶುಭ ಕೋರಿದ ಕಾಂಗ್ರೆಸ್​

  ದೇಶದಲ್ಲಿ ಕ್ಷೀಣಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಕಳವಳ ವ್ಯಕ್ತಪಡಿಸಿದ ಅಖ್ತರ್​ ಯಾವಾಗಲೂ ಅಸಹಿಷ್ಣುತೆ ಹೊಂದಿರುವ ಕೆಲವರು ಇದ್ದಾರೆ. ಆದರೆ, ಹಿಂದೂಗಳ ವಿಚಾರಕ್ಕೆ ಬಂದರೆ ಹಾಗಾಗುವುದಿಲ್ಲ. ಏಕೆಂದರೆ ಅವರು ಉದಾರ ಮತ್ತು ದೊಡ್ಡ ಹೃದಯದವರು ಇದು ಹಿಂದೂ ಸಂಸ್ಕೃತಿ ಮತ್ತು ನಾಗರೀಕತೆಯನ್ನು ತೋರಿಸುತ್ತದೆ. ನಮಗೆ ಪ್ರಜಾಸತ್ತಾತ್ಮಕ ಧೋರಣೆಗಳನ್ನು ಕಲಿಸಿದೆ. ಅದಕ್ಕಾಗಿಯೇ ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ನಾವು ಸರಿ, ಎಲ್ಲರೂ ತಪ್ಪು ಎಂದು ಭಾವಿಸುವುದು ಹಿಂದೂಗಳ ಕೆಲಸವಲ್ಲ. ಕೆಲವರು ತಮ್ಮ ತಪ್ಪು ಗ್ರಹಿಕೆಯಿಂದ ಈ ರೀತಿ ಹೇಳಿಕೊಡುವ ಮೂಲಕ ಅಶಾಂತಿ ಸೃಷ್ಟಿಸುತ್ತಿದ್ದಾರೆ.

  ಶ್ರೀರಾಮ ಮತ್ತು ಸೀತಾ ದೇವಿ ಹಿಂದೂ ದೇವತೆಗಳಲ್ಲ ಅವರು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಎಂದು ಹೇಳುವ ಮೂಲಕ ಬಾಲಿವುಡ್​ನ ಗೀತೆ ರಚನೆಕಾರ ಜಾವೇದ್​ ಅಖ್ತರ್​ MNS ದೀಪೋತ್ಸವ ಕಾರ್ಯಕ್ರಮದಲ್ಲಿ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts