More

    ಹಲಸಿನಲ್ಲಿದೆ ಔಷಧೀಯ ಗುಣ

    ವಾತಾವರಣ ಬದಲಾವಣೆ, ಮಳೆಯ ವೈಪರೀತ್ಯ ಎದುರಿಸಿ ನಿಲ್ಲುವ ಸಾಮರ್ಥ್ಯವಿರುವ ಹಲಸು ಬಯಲು ಸೀಮೆಯ ಕಲ್ಪವೃಕ್ಷ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಲಸಿನ ಬಳಕೆಗೆ ಒತ್ತು ಕೊಡುವುದರ ಮೂಲಕ ಗ್ರಾಹಕರು ಹಲಸನ್ನು ಮುಖ್ಯವಾಹಿನಿಗೆ ತರಬಹುದಾಗಿದೆ ಎಂದು ಸಹಜ ಕೃಷಿಕ ಮತ್ತು ಹಲಸು ಬೆಳೆಗಾರ ಎಂ.ಕೆ.ಕೈಲಾಸಮೂರ್ತಿ ಅಭಿಪ್ರಾಯಪಟ್ಟರು.

    ಸಹಜ ಸಮೃದ್ಧ ಸಹಯೋಗದಲ್ಲಿ ನೆಕ್ಸಸ್ ಸೆಂಟರ್ ಸಿಟಿ ಮಾಲ್ನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಹಲಸಿನ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಹಲಸು ಪೋಷಕಾಂಶಗಳ ಆಗರ. ವಿಟಮಿನ್, ಖನಿಜಾಂಶ ಮತ್ತು ನಾರಿನಿಂದ ಹಲಸು ಸಮೃದ್ಧವಾಗಿದೆ. ಎಳೆಯ ಹಲಸು ಮಧುಮೇಹ, ಮಲಬದ್ಧತೆ ದೂರವಿಡುತ್ತದೆ. ಹಲಸಿನಿಂದ ಅನೇಕ ಬಗೆಯ ಅಡುಗೆಗಳನ್ನು ಮಾಡಬಹುದು. ಎಳೆಯ ಕಾಯಿಯಿಂದ ತೊಳೆ ಬಿಡಿಸಿದ ಬೀಜದವರೆಗೆ ತಿನ್ನಲು ಬರುತ್ತದೆ. ಇದರ ಘಮಲು ನಮ್ಮ ಮನೆಗಳಲ್ಲಿ ಹರಡಬೇಕು ಎಂದರು.

    ಹಲಸಿನ ಪಾಕ ಪ್ರವೀಣೆ ಮಂಗಳಾ ಪ್ರಕಾಶ್ ಹಲಸಿನ ಅಡುಗೆ ಪುಸ್ತಕ ಬಿಡುಗಡೆ ಮಾಡಿದರು. ಹಲಸಿನ ಸಿಪ್ಪೆ , ಎಳೆಯ ಕಾಯಿ, ಹಣ್ಣು, ಬೀಜದಿಂದ ಹತ್ತಾರು ಬಗೆಯ ಸ್ವಾದಿಷ್ಟ ಅಡುಗೆಗಳನ್ನು ಮಾಡಬಹುದು. ಹಲಸಿನ ಬೀಜದಿಂದ ರುಚಿಕರ ಚಾಕೊಲೆಟ್, ಮಾಲ್ಟ್ ಮಾಡಲು ಅವಕಾಶವಿದೆ. ನಗರದ ಗ್ರಾಹಕರು ಹಲಸನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ರೈತರಿಗೆ ನೆರವಾಗಬಹುದು. ಗ್ರಾಹಕರು ಮತ್ತು ರೈತರನ್ನು ಬೆಸೆಯುವ ಹಲಸಿನ ಹಬ್ಬದಂತಹ ಮೇಳಗಳು ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಬೇಕು ಎಂದು ಅವರು ಆಶಿಸಿದರು.

    ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಬೀದಿ ಬದಿಯ ಹಣ್ಣು ಎನಿಸಿದ ಹಲಸಿನ ಬಗ್ಗೆ ನಮ್ಮದು ಸದಾ ನಿರ್ಲಕ್ಷೃ. ಮಳೆಯ ಕಣ್ಣಾಮುಚ್ಚಾಲೆ ರೈತರನ್ನು ಕಂಗೆಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಹಲಸಿನ ಕೃಷಿ ಬಯಲು ಸೀಮೆಯ ರೈತರ ಆಶಾಕಿರಣವಾಗಿದೆ ಎಂದರು. ನೆಕ್ಸಸ್ ಸಿಟಿ ಸೆಂಟರ್‌ನ ಕಾರ್ಯಾಚರಣೆ ಮುಖ್ಯಸ್ಥ ಎಂ.ಎಸ್.ಮೋಹನ್ ಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts