More

    ಮೈಸೂರಿನಲ್ಲಿ ನಡೆಯುತ್ತಿದೆ ಹಲಸಿನ ಮೇಳ

    ಸಹಜ ಸಮೃದ್ಧ ಸಹಯೋಗದಲ್ಲಿ ನೆಕ್ಸಸ್ ಸೆಂಟರ್ ಸಿಟಿ ಮಾಲ್ನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಹಲಸಿನ ಹಬ್ಬಕ್ಕೆ ಶುಕ್ರವಾರ ಚಾಲನೆ ದೊರೆಯಿತು.

    ಮೇಳದಲ್ಲಿ ಹಲಸಿನ ಹಬ್ಬದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿಯ ಹಣ್ಣುಗಳು ತಿನ್ನಲು ಮತ್ತು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೊಲೆಟ್, ಹಪ್ಪಳ, ಹಲ್ವ, ಕಬಾಬ್, ವಡೆ, ದೋಸೆ, ಪಲ್ಯ, ಬಿರಿಯಾನಿ ಮೊದಲಾದ ಹಲಸಿನ ಅಡುಗೆಗಳು ಲಭ್ಯ ಇವೆ. ಹಲಸು ಹಚ್ಚುವ ಯಂತ್ರವೂ ಇದೆ. ಹಲಸಿನ ಹೋಳಿಗೆ ಘಮಲು ಜನರನ್ನು ಸೆಳೆಯುತ್ತಿದೆ.

    ರುದ್ರಾಕ್ಷಿ ಬಕ್ಕೆ, ಸಿಂಧೂರ, ಸರ್ವಋತು, ಗಮ್‌ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಹಲಸಿನ ತಳಿಗಳು ಲಭ್ಯ ಇವೆ. ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೋಂದಣಿಯಾಗಿರುವ ರಾಜ್ಯದ ಮೊದಲ ಕೆಂಪು ಹಲಸಿನ ತಳಿಗಳಾದ ಸಿದ್ದು ಹಲಸು ಮತ್ತು ಶಂಕರ ಗಿಡಗಳು ದೊರೆಯುತ್ತಿವೆ.

    ರಾಜ್ಯದ ವಿವಿಧ ಭಾಗಗಳಿಂದ ಬರುವ 12 ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು, ರೈತ ಮತ್ತು ಮಹಿಳಾ ಗುಂಪುಗಳು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಹಲಸಿನ ಹಬ್ಬವು ಜು. 16 ರವರೆಗೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts