More

    ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿದ ಶಾಸಕ; ವಿರೋಧ ಪಕ್ಷದ ನಾಯಕ ಈಗ ಜೈಲುಪಾಲು

    ತಿರುವನಂತಪುರಂ: ಷೇರುದಾರರಿಗೆ ಹಣ ಪಾವತಿ ಮಾಡದೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಆರೋಪದಡಿಯಲ್ಲಿ ಶಾಸಕರೊಬ್ಬರನ್ನು ಬಂಧಿಸಲಾಗಿದೆ. ಶಾಸಕನ ವಿರುದ್ಧ ಸರಣಿ ದೂರು ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ‘ಮರ್ಡರ್​’ ಬಿಡುಗಡೆ ಮಾಡಲು ನ್ಯಾಯಾಲಯ ಷರತ್ತುಬದ್ಧ ಒಪ್ಪಿಗೆ …

    ಕೇರಳದ ಇಂಡಿಯನ್​ ಯೂನಿಯನ್​ ಮುಸ್ಲಿಂ ಲೀಗ್​ (ಐಯುಎಂಎಲ್​)ನ ಶಾಸಕ ಎಂ.ಸಿ.ಕಮರುದ್ದೀನ್​ ಬಂಧನಕ್ಕೊಳಗಾದ ಶಾಸಕ. ಈ ಶಾಸಕನ ಪಕ್ಷ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಕೇರಳದ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ.

    ಇದನ್ನೂ ಓದಿ: ಬಿಹಾರ ಗದ್ದುಗೆ ಏರೋದ್ಯಾರು? ಮತದಾನೋತ್ತರ ಸಮೀಕ್ಷಾ ವರದಿ ಇಲ್ಲಿದೆ…

    ಕಮರುದ್ದೀನ್​ ಫ್ಯಾಶನ್​ ಗೋಲ್ಡ್​ ಜ್ಯುವೆಲ್ಲರಿ ಗ್ರೂಪ್​ನ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಗೆ ಅನೇಕರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಈ ಸಂಸ್ಥೆ ತಮ್ಮ ಹೂಡಿಕೆದಾರರಿಗೆ ಯಾವುದೇ ಮಾಹಿತಿ ನೀಡದೆ, ಕಳೆದ ಡಿಸೆಂಬರ್​ನಲ್ಲಿ ಬಾಗಿಲು ಮುಚ್ಚಿದೆ. ಸಂಸ್ಥೆ ಮುಚ್ಚಿದ ನಂತರದಲ್ಲಿ ಹೂಡಿಕೆದಾರರಿಗೆ ಯಾವುದೇ ರೀತಿಯ ಹಣ ವಾಪಾಸು ಮಾಡಲಾಗಿಲ್ಲ. ಈ ಕುರಿತಾಗಿ ನೂರಾರು ಹೂಡಿಕೆದಾರರು ವಿವಿಧ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರ ಬಂಧನಕ್ಕೂ ಮೊದಲು ವಿಶೇಷ ತನಿಖಾ ತಂಡವು ಸುಮಾರು ಐದು ಗಂಟೆಗಳ ಕಾಲ ಶಾಸಕರಿಗೆ ಪ್ರಶ್ನೆ ಕೇಳಿದೆ. ಅದಾದ ನಂತರ ಬಂಧಿಸಲಾಗಿದೆ. ಅರಂಭಿಕ ದೂರುಗಳು ಪ್ರಕಾರ ಸುಮಾರು 1 ಕೋಟಿ ರೂಪಾಯಿ ಮೋಸವಾಗಿರುವುದು ಕಂಡುಬಂದಿದೆ. ಇನ್ನೂ ಹೆಚ್ಚು ಹೂಡಿಕೆದಾರರಿಂದ ಮಾಹಿತಿ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ‘ಮುಂದಿನ ವರ್ಷ ಗೆದ್ದೇ ಗೆಲ್ತೀವಿ’ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಎಬಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts