More

    ಎಸ್​.ಎಂ.ಕೃಷ್ಣ ಸಹೋದರಿ ಮನೆಗೆ ಐಟಿ ದಾಳಿ; ಮಹತ್ವದ ದಾಖಲೆ ಪರಿಶೀಲನೆ

    ಬೆಂಗಳೂರು: ಚುನಾವಣಾ ಸಮಯಲ್ಲಿ ಬೆಂಗಳೂರಿನ ವಿವಿಧೆಡೆ ಐಟಿ ದಾಳಿ ಮುಂದುವರೆದಿದೆ. ಇದೀಗ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.

    ಕೋರಮಂಗಲ 1st ಬ್ಲಾಕ್​ನಲ್ಲಿರುವ ಎಸ್.ಎಂ. ಕೃಷ್ಣ ಸಹೋದರಿ ಎಸ್.ಎಂ. ಸುನಿತಾ ಮನೆಗೆ ಎಂಟು ಐಟಿ ಅಧಿಕಾರಿಗಳನ್ನು ಒಳಗೊಂಡ ತಂಡ ದಾಳಿ ಮಾಡಿದೆ. ಬಳಿಕ ಕೆಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಅಕ್ಕನ ಬದಲು ತಂಗಿಯನ್ನು ಮದುವೆಯಾಗಲು ಸಿದ್ಧನಾದ ವರ; ಮುಂದೇನಾಯ್ತ..?

    ಬಾಗ್ಮನೆ ಹೆಸರಲ್ಲಿರುವ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್ ಕಚೇರಿಗಳ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮತ್ತೊಂಡೆದೆ ಟ್ರಾನ್ ಇನ್ಸೈನಿಯಾ ಅಪಾರ್ಟ್ಮೆಂಟ್ ಮೇಲೆಯೂ ದಾಳಿ ಮಾಡಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿಯ ಆಪ್ತನ ಮನೆ ಮೇಲೂ ದಾಳಿ

    ವಿಧಾನಸಭಾ ಚುನಾವಣೆ ಕ್ಯಾಷ್ ಸಂಗ್ರಹದ ಮೇಲೆ ಐಟಿ ಕಣ್ಣಿಟ್ಟಿದ್ದು, ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದೆ. ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಆಪ್ತ ಕಾಮಾಕ್ಯ ಬಳಿ ಇರುವ ಹರಿರೆಡ್ಡಿ ಎಂಬಾತನ ಮನೆಗೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಹರಿರೆಡ್ಡಿ, ಅಪಾರ ಪ್ರಮಾಣದ ನಗದು ಹಣ ಸಂಗ್ರಹಿಸಿರುವ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts