More

    ಸಾಲ ಮರುಪಾವತಿ ಬಡ್ಡಿಗೂ ವಿನಾಯ್ತಿ ನೀಡಿದರೆ ಬ್ಯಾಂಕ್​ಗಳ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ…

    ನವದೆಹಲಿ: ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಗೃಹ, ವಾಹನ ಹಾಗೂ ಮತ್ತಿತರ ಸಾಲ ಮರುಪಾವತಿಯನ್ನು ವಿಳಂಬಿಸಲು (Moratorium) ಆಗಸ್ಟ್​ 31ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಸಾಲ ಮರುಪಾವತಿ ಮೇಲಿನ ಬಡ್ಡಿಗೂ ವಿನಾಯ್ತಿ ನೀಡಿದರೆ ಬ್ಯಾಂಕ್​ಗಳಿಗೆ 2 ಲಕ್ಷ ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕ್​ಗಳ ಆರ್ಥಿಕ ಸ್ಥಿತಿ ಏರುಪೇರಾಗುವ ಅಪಾಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದೆ.

    ಸಾಲ ಮರುಪಾವತಿ ವಿಳಂಬಕ್ಕೆ ಅವಕಾಶ ನೀಡಿರುವುದರಿಂದ ಉಂಟಾಗಬಹುದಾದ ತೊಂದರೆಯನ್ನು ನೀಗಿಸಿಕೊಳ್ಳಲು ಬ್ಯಾಂಕ್​ಗಳಿಗೆ ಎಲ್ಲ ರೀತಿಯ ಸಹಾಯವನ್ನು ಒದಗಿಸಲಾಗುತ್ತಿದೆ. ಆದರೆ, ಬಡ್ಡಿಗೂ ವಿನಾಯ್ತಿ ನೀಡುವಂತೆ ಬ್ಯಾಂಕ್​ಗಳನ್ನು ಬಲವಂತಪಡಿಸಿದರೆ, ಮುಂದೆ ಬ್ಯಾಂಕ್​ಗಳ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಜತೆಗೆ ನಿಶ್ಚಿತ ಠೇವಣಿ ಸೇರಿ ವಿವಿಧ ಠೇವಣಿಗಳಲ್ಲಿ ಹಣತೊಡಿಗಿಸುರುವ ಗ್ರಾಹಕರಿಗೆ ಬಡ್ಡಿ ನೀಡಲು ತೊಂದರೆಯಾಗುತ್ತದೆ ಎಂದು ಆರ್​ಬಿಐ ಆತಂಕ ವ್ಯಕ್ತಪಡಿಸಿದೆ.

    ಇದನ್ನೂ ಓದಿ: 2019ರ ನವೆಂಬರ್​ನಲ್ಲೇ ಭಾರತ ಪ್ರವೇಶಿಸಿದ್ದ ಕರೊನಾ ವೈರಾಣು

    ಸಾಲ ಮರುಪಾವತಿ ವಿಳಂಬದ ಅವಧಿಯಲ್ಲಿ ಬಾಕಿವುಳಿಸಿಕೊಳ್ಳುವ ಸಾಲದ ಮೇಲೆ ಬ್ಯಾಂಕ್​ಗಳು ಹೆಚ್ಚುವರಿ ಬಡ್ಡಿ ವಿಧಿಸಲಿವೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಸಾಲ ಮರುಪಾವತಿಗೂ ಕೊಟ್ಟಂತೆ ಬಡ್ಡಿ ಪಾವತಿಗೂ ವಿನಾಯ್ತಿ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ಆರ್​ಬಿಐ ಈ ಹೇಳಿಕೆ ನೀಡಿದೆ.

    ಸಾಲ ಮರುಪಾವತಿಯನ್ನು ವಿಳಂಬಿಸಲು ಅವಕಾಶ ನೀಡಲಾಗಿದೆಯೇ ಹೊರತು, ಸಾಲವನ್ನು ಸಂಪೂರ್ಣವಾಗಿ ಮಾಫಿ ಮಾಡಲಾಗಿಲ್ಲ ಎಂದು ಅದು ಸುಪ್ರೀಂಕೋರ್ಟ್​ಗೆ ಸ್ಪಷ್ಟಪಡಿಸಿದೆ.

    ಜನಪ್ರತಿನಿಧಿಗಳು ಕದ್ದುಮುಚ್ಚಿ ಮಾಡುವುದನ್ನೂ ತಿಳಿಯುವ ಹಕ್ಕು ಮತದಾರರಿಗಿದೆ ಎಂದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts