More

    2019ರ ನವೆಂಬರ್​ನಲ್ಲೇ ಭಾರತ ಪ್ರವೇಶಿಸಿದ್ದ ಕರೊನಾ ವೈರಾಣು

    ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೇ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ, ಈ ವೈರಾಣು 2019ರ ನವೆಂಬರ್​ನಲ್ಲೇ ಭಾರತವನ್ನು ಪ್ರವೇಶಿಸಿತ್ತು. ಆದರೆ ಅದು ವ್ಯಾಪಕವಾಗಿರಲಿಲ್ಲ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

    ಹೈದರಾಬಾದ್​ ಮೂಲದ ಸೆಂಟರ್​ ಫಾರ್​ ಸೆಲ್ಯುಲಾರ್​ ಆ್ಯಂಡ್​ ಮಾಲಿಕ್ಯುಲಾರ್​ ಬಯಾಲಜಿಯ (ಸಿಸಿಎಂಬಿ) ವಿಜ್ಞಾನಿಗಳ ಪ್ರಕಾರ ಈ ವೈರಾಣು 2019ರ ನವೆಂಬರ್​ 26ರಿಂದ ಡಿಸೆಂಬರ್​ 25ರ ನಡುವೆಯೇ ಪ್ರವೇಶಿಸಿತ್ತು. ಆದರೆ ಆಗ ಅಷ್ಟೇನೂ ಬಾಧಿಸಿರಲಿಲ್ಲ. ಹಾಗಾಗಿ ಇದು ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ.

    ವೈರಾಣುವಿನ ತೀರಾ ಇತ್ತೀಚಿನ ಸಾಮಾನ್ಯ ಪೂರ್ವರೂಪ (Time to Most Recent Common Ancestor-MRCA) ಕ್ರಮವನ್ನು ಆಧರಿಸಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಪಕವಾಗಿರುವ ವೈರಾಣುವಿನ ಮೂಲರೂಪವನ್ನು ಪರಿಶೀಲಿಸಿದಾಗ ಅದು, ಚೀನಾ ಮೂಲದ್ದು ಎಂಬುದು ಖಚಿತವಾಗಿದೆ. ಅಲ್ಲದೆ, ಇದು 2019ರ ನವೆಂಬರ್​ನಿಂದಲೇ ಭಾರತದಲ್ಲಿ ವ್ಯಾಪಿಸಲಾರಂಭಿಸಿತ್ತು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಜತೆಗೆ ದೆಹಲಿಗೆ ಕಾದಿದೆಯಾ ಪ್ರಬಲ ಭೂಕಂಪದ ಗಂಡಾಂತರ?

    ಆದರೆ ಆಗಿನಿಂದ ಹಿಡಿದು 2020ರ ಜನವರಿ 30ರವರೆಗೆ ಭಾರತದಲ್ಲಿ ವ್ಯಾಪಕವಾಗಿ ಕೋವಿಡ್​-19 ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಹಾಗಾಗಿ ಈ ವೈರಾಣು ಚೀನಾ ಮೂಲದಿಂದಲೇ ಬಂದು ಭಾರತಕ್ಕೆ ವಕ್ಕರಿಸಿತು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

    ಭಾರತದಲ್ಲಿ ವ್ಯಾಪಕವಾಗಿ ಹಬ್ಬಿರುವ ನೋವೆಲ್​ ಕರೊನಾ ವೈರಾಣುವಿನ ಪೂರ್ವರೂಪವನ್ನು ಪರಿಶೀಲಿಸಿದಾಗ ಅದರ ವಂಶ ಚೀನಾ ಮೂಲದ್ದು ಎಂಬುದು ಖಚಿತಪಟ್ಟಿದೆ. ಆದರೆ ಈಗಾಗಲೆ ಪತ್ತೆಯಾಗಿರುವ ಕ್ಲಾಡ್​ ಐ/ಎ3ಗೂ ಭಿನ್ನವಾದ ಹೊಸ ವಂಶಕ್ಕೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾರೆ.

    ಕೇರಳದಲ್ಲಿ ಮೊದಲಿಗೆ ವರದಿಯಾದ ಕರೊನಾ ಸೋಂಕಿಗೆ ಕಾರಣವಾದ ವೈರಾಣುವಿನ ವಂಶ ಚೀನಾದ ವುಹಾನ್​ನಲ್ಲಿನ ವೈರಾಣುವಿನ ವಂಶದ್ದಾಗಿತ್ತು. ಆದರೆ, ಹೈದರಾಬಾದ್​ನಲ್ಲಿ ಪತ್ತೆಯಾದ ಕರೊನಾ ಸೋಂಕಿಗೆ ಅದಕ್ಕಿಂತ ಭಿನ್ನವಾದ ವಂಶಕ್ಕೆ ಸೇರಿದ್ದ ಕೋವಿಡ್​-19 ಕಾರಣವಾಗಿತ್ತು. ಇದು ಬಹುಶಃ ಆಗ್ನೇಯ ಏಷ್ಯಾದಿಂದ ಬಂದ ವ್ಯಕ್ತಿಯಿಂದ ವ್ಯಾಪಿಸಿರಬಹುದು ಎಂದು ಸಿಸಿಎಂಬಿ ನಿರ್ದೇಶಕ ಡಾ. ರಾಕೇಶ್​ ಕೆ ಮಿಶ್ರಾ ಹೇಳಿದ್ದಾರೆ.

    ಎರಡು ವರ್ಷಗಳಿಂದಲೂ ನಡೆದಿದ್ದ ಕೊಲೆಯ ಸಂಚಿಗೆ ಸಿಲುಕದವನು ಬಾತ್​ರೂಮ್​ನಲ್ಲಿ ಅಸಹಾಯಕನಾದ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts