More

    ಇದು ಸ್ವಾಭಿಮಾನದ ಹೋರಾಟ

    ಶಿರಸಿ: ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜಿಲ್ಲೆಯಲ್ಲಿ ಸುಸಜ್ಜಿತವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ವಣವಾಗಿಲ್ಲ. ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಅನಂತಮೂರ್ತಿ ಹೆಗಡೆ ಅವರ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ಸೂಚಿಸೋಣ ಎಂದು ಸ್ವಾತಂತ್ರ್ಯ ಹೋರಾಟಗಾರ ಕಾಶಿನಾಥ ಮೂಡಿ ಹೇಳಿದರು.

    ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜನರ ಸ್ವಾಭಿಮಾನದ ಪಾದಯಾತ್ರೆ ಕಾರ್ಯಕ್ರಮಕ್ಕೆ ಗುರುವಾರ ನಗರದ ಮಾರಿಕಾಂಬಾ ದೇವಸ್ಥಾನದ ಎದುರು ಚಾಲನೆ ನೀಡಿ ಅವರು ಮಾತನಾಡಿದರು.

    ಅನಂತ ಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅನಂತ ಮೂರ್ತಿ ಹೆಗಡೆ ಮಾತನಾಡಿ, ಜಿಲ್ಲೆಯ ಜನರು ತುರ್ತು ಚಿಕಿತ್ಸೆ ಗಾಗಿ ಮಂಗಳೂರು ಅಥವಾ ಹುಬ್ಬಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಪ್ರತಿದಿನ ಇಲ್ಲಿನ ಸರಿಸುಮಾರು 300ಕ್ಕೂ ಅಧಿಕ ಜನರು ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಒತ್ತಾಯಿಸಿ ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆಸ್ಪತ್ರೆ ವಿಚಾರದಲ್ಲಿ ನಮಗಾದ ಅನ್ಯಾಯವನ್ನು ಸಹಿಸಿಕೊಂಡು ಇದ್ದೇವೆ. ಇದರ ಬಗ್ಗೆ ಧ್ವನಿ ಎತ್ತಿದವರನ್ನು ಟಾರ್ಗೆಟ್ ಮಾಡುವ ಕೆಲಸ ಆಗುತ್ತಿದೆ. ಇದು ಯಾವುದೇ ಒಂದು ಸಮುದಾಯದ, ಜಾತಿಯ, ಪಕ್ಷದ ಹೋರಾಟವಲ್ಲ. ನಮ್ಮ ನಿಮ್ಮೆಲ್ಲರ ಸ್ವಾಭಿಮಾನ ಹೋರಾಟವಾಗಿದೆ ಎಂದರು.

    ನಾಗೇಶ್ ನಾಯ್ಕ ಕಾಗಲ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆಗಳ ಆಗರವೇ ಇದೆ. ಈ ಹೋರಾಟ ರಾಜಕೀಯ ಹೋರಾಟ ಅಲ್ಲ. ಇದು ನಮ್ಮೆಲ್ಲರ ಅನುಕೂಲಕ್ಕಾಗಿ ಮಾಡುವ ಹೋರಾಟವಾಗಿದೆ. ಕಳೆದ 40 ವರ್ಷಗಳಿಂದ ದಿಗ್ಗಜ ರಾಜಕಾರಣಿಗಳು ಜಿಲ್ಲೆಯಲ್ಲಿ ಇದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಚುನಾವಣೆ ಹೊರತಾಗಿ ಆಸ್ಪತ್ರೆಗೆ ಹೋರಾಟ ಮಾಡಬೇಕು ಎಂದರು.

    ಸ್ಕೋಡ್ ವೇಸ್ ನಿರ್ದೇಶಕ ವೆಂಕಟೇಶ್ ನಾಯ್ಕ, ಉದ್ಯಮಿ ಉಪೇಂದ್ರ ಪೈ ಮಾತನಾಡಿದರು.

    ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಪಾದಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುವಾರ ರಾತ್ರಿ ಕೊಳಗಿಬೀಸ್​ನಲ್ಲಿ ಅಂತ್ಯಗೊಳ್ಳಲಿದೆ. ಶುಕ್ರವಾರ ಬೆಳಗ್ಗೆ ಪುನಃ ಕೊಳಗಿಬೀಸ್​ನಿಂದ ಹೊರಟು ದೇವಿಮನೆಯಲ್ಲಿ ಅಂತ್ಯಗೊಂಡು ಶನಿವಾರ ಕುಮಟಾ, ಭಾನುವಾರ ಬರ್ಗಿ ಸೋಮವಾರ ಅಂಕೋಲಾ, ಮಂಗಳವಾರ ಅಮದಳ್ಳಿ ಮೂಲಕ ಬುಧವಾರ ಕಾರವಾರ ತಲುಪಲಿದೆ.

    ಸಾಮಾಜಿಕ ಹೋರಾಟಗಾರ ಪರಮಾನಂದ ಹೆಗಡೆ, ಮಾರಿಕಾಂಬಾ ಆಟೋ ಚಾಲಕ-ಮಾಲೀಕ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಕರವೇಯ ಉಮೇಶ ಹರಿಕಾಂತ, ಗಣಪತಿ ಭಟ್ ಮನುವಿಕಾಸ, ರಾಘವೇಂದ್ರ ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts