ಬಡವರಿಗೆ ಮನೆ ನೀಡದ ಡಿ.ಎನ್.ಜೀವರಾಜ್

1 Min Read
ಬಡವರಿಗೆ ಮನೆ ನೀಡದ ಡಿ.ಎನ್.ಜೀವರಾಜ್
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿದರು. ಪಿ.ಆರ್.ಸದಾಶಿವ, ಎಂ.ಆರ್.ರವಿಶಂಕರ್, ಮುಕುಂದ, ಎಚ್.ಎಂ.ಶಿವಣ್ಣ, ಅಂಜುಂ,ಶೋಜಾ, ಜುಬೇದಾ, ಉಪೇಂದ್ರ ಇತರರಿದ್ದರು.

ಎನ್.ಆರ್.ಪುರ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಎನ್.ಜೀವರಾಜ್ ಆಡಳಿತದ ಅವಧಿಯಲ್ಲಿ ಬಡವರಿಗೆ ಒಂದೂ ಮನೆಯನ್ನು ನೀಡಿಲ್ಲ ಎಂದು ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಆರೋಪಿಸಿದರು.

ಬುಧವಾರ ನಗರ ಕಾಂಗ್ರೆಸ್ ಘಟಕದಿಂದ ಬಸ್ತಿಮಠದಿಂದ ಪ್ರವಾಸಿಮಂದಿರದವರೆಗೆ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ಮತಯಾಚನೆ ಮಾಡಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾಗ ಧರ್ಮಗಳ ನಡುವೆ ವೈಷಮ್ಯ ಹುಟ್ಟುಹಾಕಿ ಜನರ ನೆಮ್ಮದಿಯ ಬದುಕು ಕಸಿದುಕೊಂಡಿದ್ದರು ಎಂದು ದೂರಿದರು.
ಪಿಎಂ ನರೇಂದ್ರ ಮೋದಿ ಭಾಷಣದಲ್ಲಿ ಎಲ್ಲಿಯೂ ಬಡವರ, ಕೂಲಿಕಾರ್ಮಿಕರ, ನಿರುದ್ಯೋಗ ಸಮಸ್ಯೆ ನಿವಾರಣೆ ಪ್ರಸ್ತಾಪಿಸದೆ ಕೇವಲ ಕಾಂಗ್ರೆಸ್‌ನ್ನು ಟೀಕಿಸುತ್ತಿದ್ದಾರೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರ ಬದುಕು ಹಸನಾಗುವಂತೆ ಮಾಡಿದೆ. ಬಡವರಿಗಾಗಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಬಿಜೆಪಿ ನಾಯಕರು ಅಪಹಾಸ್ಯ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 8ನೇ ಕಂತು ಬಿಡುಗಡೆಯಾಗಿರುವುದು ಕಾಂಗ್ರೆಸ್‌ನ ಬದ್ಧತೆಗೆ ಸಾಕ್ಷಿ ಎಂದರು.
ಡಿ.ಎನ್.ಜೀವರಾಜ್ ಅವಧಿಯಲ್ಲಿ ಬಡವರಿಗೆ, ವಸತಿರಹಿತರಿಗೆ ನೀಡಬೇಕಾದ 70ಕ್ಕೂ ಹೆಚ್ಚು ನಿವೇಶನಗಳನ್ನು ಪಟ್ಟಣ ಪಂಚಾಯಿತಿಯಿಂದ ಹರಾಜು ಮಾಡಿದ್ದಾರೆ ಎಂದು ದೂರಿದರು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇದುವರೆಗೂ ಒಂದೂ ನಿವೇಶನ ಹರಾಜು ಮಾಡಿಲ್ಲ. ಹಿಂದುತ್ವದ ಕುರಿತು ಮಾತನಾಡುವ ಮಾಜಿ ಶಾಸಕರು ಯಾವ ದೇವಸ್ಥಾನವನ್ನೂ ಅಭಿವೃದ್ಧಿಪಡಿಸಿಲ್ಲ. ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಪಟ್ಟಣದಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದ ದೇವಸ್ಥಾನ, ಮಸೀದಿ,ಚರ್ಚ್ ಅಭಿವೃದ್ಧಿಪಡಿಸಿದ್ದಾರೆ ಎಂದರು.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಪಟ್ಟಣ ಉಸ್ತುವಾರಿ ಎಂ.ಆರ್.ರವಿಶಂಕರ್ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡ ಪಟ್ಟಣದ ವ್ಯಾಪ್ತಿಯಲ್ಲಿ ಮಿನಿವಿಧಾನ ಸೌಧ ನಿರ್ಮಿಸಲು ತೀರ್ಮಾನಿಸಿದ್ದು ಪಟ್ಟಣದ ಜನರಿಗೆ ನ್ಯಾಯ ಒದಗಿಸಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಪಪಂ ಸದಸ್ಯ ಮುಕುಂದ, ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ , ಮುಖಂಡರಾದ ಜುಬೇದಾ, ಅಂಜುಮ್, ಶೋಜಾ, ಸುರಯ್ಯಬಾನು, ಸೈಯದ್ ವಸೀಂ,ಉಪೇಂದ್ರ, ಮುನಾವರ್ ಪಾಷಾ, ತಿಮ್ಮಪ್ಪಯ್ಯ ಇತರರಿದ್ದರು.

See also  ಕೊಟ್ಟೂರಿಗೆ 23ನೇ ವರ್ಷದ ಪಾದಯಾತ್ರೆ
Share This Article