More

    ತಾಂತ್ರಿಕ ಕಾರಣಕ್ಕೆ ‘GISAT-1’ಉಪಗ್ರಹ ಉಡಾವಣೆ ಮುಂದೂಡಿದ ಇಸ್ರೋ

    ಬೆಂಗಳೂರು: ನಾಳೆಗೆ ನಿಗದಿಯಾಗಿದ್ದ ‘GISAT-1’ಉಪಗ್ರಹ ಉಡಾವಣೆಯ ಕಾರ್ಯವನ್ನು ತಾಂತ್ರಿಕ ಕಾರಣಕ್ಕೆ ಮುಂದೂಡಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುಧವಾರ ತಿಳಿಸಿದೆ.

    GSLV-F10 ಉಡಾವಣಾ ವಾಹಕದ ಮೂಲಕ GISAT-1 ಉಪಗ್ರಹವನ್ನು ಮಾರ್ಚ್ 5ರಂದು ಉಡಾವಣೆ ಮಾಡುವುದಾಗಿ ಇಸ್ರೋ ಘೋಷಿಸಿತ್ತು. ತಾಂತ್ರಿಕ ಕಾರಣಗಳಿಗೆ ಈಗ ಉಡಾವಣೆ ಮುಂದೂಡಿರುವ ಇಸ್ರೋ, ಹೊಸ ಉಡಾವಣಾ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ತಿಳಿಸಿದೆ.

    ಪೂರ್ವನಿಗದಿತ ಕಾರ್ಯಸೂಚಿ ಪ್ರಕಾರ, ಈ ಉಡಾವಣೆ ಗುರುವಾರ ಸಂಜೆ 5.43ಕ್ಕೆ ನಿಗದಿಯಾಗಿತ್ತು.ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್ ಸ್ಪೇಸ್​ ಸೆಂಟರ್​ನ ಎರಡನೇ ಲಾಂಚ್​ ಪ್ಯಾಡ್​ನಿಂದ ಉಡಾವಣೆಗೆ ಸಿದ್ಧತೆಯೂ ನಡೆದಿತ್ತು. ಹವಾಮಾನ ವ್ಯತ್ಯಯದ ಕಾರಣಕ್ಕೆ ಈಗ ಈ ಉಡಾವಣೆಯನ್ನು ಮುಂದೂಡಲಾಗಿದೆ.GISAT-1 ಉಪಗ್ರಹವು 2,268 ಕಿಲೋ ತೂಕ ಇದ್ದು, ಅತ್ಯುತ್ತಮ ಅರ್ಥ್ ಓಬ್ಸರ್ವೇಷನ್ ಸ್ಯಾಟಲೈಟ್​ ಎಂಬ ಕಾರಣಕ್ಕೆ ಗಮನಸೆಳೆದಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts