ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯನ್ನು ಅಂತಿಮ ಗಮ್ಯಸ್ಥಾನ ಕಕ್ಷೆಗೆ ಸೇರಿಸಿದ ಬೆನ್ನಲ್ಲೇ, ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ಈ ನಿರ್ಣಾಯಕ ಮಿಷನ್ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸಂಬಂಧಿಸಿದ್ದಾಗಿದೆ ಎಂದು ಘೋಪಿಸಿದ್ದಾರೆ.
ಶನಿವಾರ ಮಾಧ್ಯಮದ ಜತೆ ಸೋಮನಾಥ್ ಅವರು, ಈ ಸೌರ ಯೋಜನೆಯಾದ ಆದಿತ್ಯ-ಎಲ್ 1 ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಂಬಂಧಿಸಿದ್ದಾಗಿದೆ. ನಾವೆಲ್ಲರೂ ಅದರ ವೈಜ್ಞಾನಿಕ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಬೇಕು ಎಂದು ಹೇಳಿದರು.
ಬಾಹ್ಯಾಕಾಶ ಉಪಗ್ರಹವನ್ನು ನಿಖರವಾದ ಹಂತದಲ್ಲಿ ಇರಿಸಲು ವಿಜ್ಞಾನಿಗಳು ಹಲವಾರು ತಿದ್ದುಪಡಿಗಳನ್ನು ಮಾಡಬೇಕಾಯಿತು ಎಂದೂ ಇಸ್ರೋ ಮುಖ್ಯಸ್ಥರು ಹೇಳಿದರು.
“ಇಂದಿನ ಪ್ರಕ್ರಿಯೆಯು ಆದಿತ್ಯ-L1 ಅನ್ನು ನಿಖರವಾದ ಹಾಲೋ ಕಕ್ಷೆಯಲ್ಲಿ ಮಾತ್ರ ಇರಿಸಿದೆ. ಅದು ಎತ್ತರದ ಕಕ್ಷೆಯತ್ತ ಚಲಿಸುತ್ತಿತ್ತು. ಆದರೆ, ಅದನ್ನು ಸರಿಯಾದ ಸ್ಥಳದಲ್ಲಿ ಇರಿಸಲು ನಾವು ಸ್ವಲ್ಪ ತಿದ್ದುಪಡಿಗಳನ್ನು ಮಾಡಬೇಕಾಯಿತು. ಹಾಗಾಗಿ, ಉಪಗ್ರಹವನ್ನು ಸರಿಯಾದ ಸ್ಥಳದಲ್ಲಿ ಇರಿಸಲು ಸೆಕೆಂಡಿಗೆ 31 ಮೀಟರ್ ವೇಗವನ್ನು ನೀಡಬೇಕಾಯಿತು” ಎಂದು ಸೋಮನಾಥ್ ಹೇಳಿದರು.
ಹಾಲೋ ಆರ್ಬಿಟ್ (ಈ ಹಾಲೋ ಕಕ್ಷೆಯು ಸೂರ್ಯ, ಭೂಮಿ ಮತ್ತು ಬಾಹ್ಯಾಕಾಶ ನೌಕೆಯನ್ನು ಒಳಗೊಂಡ ಎಲ್ 1 ಬಿಂದುವಿನಲ್ಲಿ ಮೂರು ಆಯಾಮದ ಕಕ್ಷೆಯಾಗಿದೆ.) ಕುರಿತು ಮಾತನಾಡಿದ ಶ್ರೀ ಸೋಮನಾಥ್, “ಹಾಲೋ ಆರ್ಬಿಟ್ ಎಲ್ 1 ಬಿಂದುವಿನ ಸುತ್ತ ಚಲಿಸುವ ಕಕ್ಷೆಯಾಗಿದ್ದು, ಒಂದು ಆಯಾಮದಲ್ಲಿ 6 ಲಕ್ಷ ಕಿಲೋಮೀಟರ್ ಮತ್ತು ಇನ್ನೊಂದು ಆಯಾಮದಲ್ಲಿ ಒಂದು ಲಕ್ಷ ಕಿಲೋಮೀಟರ್ ಗಾತ್ರದಲ್ಲಿದೆ. ಆದ್ದರಿಂದ ಇದು ಮೊಟ್ಟೆಯಂತಿದೆ. ನಾವು ಇದನ್ನು ಹೊಸ ಕಕ್ಷೆಯಲ್ಲಿ ಇರಿಸುವ ಕೆಲಸ ಮಾಡಿದೇವು” ಎಂದರು.
ಉಪಗ್ರಹವನ್ನು ನಿಖರವಾದ ಸ್ಥಳದಲ್ಲಿ ಇರಿಸದಿದ್ದರೆ ಅದು ಬಿಂದುವಿನಿಂದ ತಪ್ಪಿಸಿಕೊಳ್ಳಬಹುದಾಗಿತ್ತು ಎಂದೂ ಇಸ್ರೋ ಮುಖ್ಯಸ್ಥರು ಹೇಳಿದರು.
“ನಾವು ಇಂದು ತಿದ್ದುಪಡಿಯನ್ನು ಮಾಡದಿದ್ದರೆ ಅದು ಈ ಹಂತದಿಂದ ತಪ್ಪಿಸಿಕೊಳ್ಳುತ್ತಿತ್ತು. ನಾವು ಅದನ್ನು ತಪ್ಪಿಸಿಕೊಳ್ಳಲು ಬಿಡಲಿಲ್ಲ. ಕೆಲವು ಅನಿಶ್ಚಿತತೆಗಳಿವೆ. ಆದರೆ, ಗಣಿತದ ಪ್ರಕಾರ ಅದು ತಪ್ಪಿಸಿಕೊಳ್ಳಬಹುದು. ಆದ್ದರಿಂದ ಅದನ್ನು ಬಹಳ ನಿಖರವಾಗಿ ಮಾಡಲಾಗಿದೆ. ಇಂದು ನಾವು ನಮ್ಮ ಆಧಾರದ ಮೇಲೆ ನಿಖರವಾದ ಸ್ಥಾನವನ್ನು ಸಾಧಿಸಿದ್ದೇವೆ. ಇದೀಗ, ನಮ್ಮ ಲೆಕ್ಕಾಚಾರದಲ್ಲಿ, ಅದು ಸರಿಯಾದ ಸ್ಥಳದಲ್ಲಿದೆ” ಎಂದು ಸೋಮನಾಥ್ ಹೇಳಿದರು.
ಆದರೂ, ದಿಕ್ಚ್ಯುತಿಗಳನ್ನು ಪರಿಶೀಲಿಸಲು ನಮ್ಮ ತಂಡವು ಮುಂದಿನ ಕೆಲವು ಗಂಟೆಗಳ ಕಾಲ ಅದನ್ನು ಮೇಲ್ವಿಚಾರಣೆ ಮಾಡಲಿದೆ. ಅದು ತನ್ನ ಸ್ಥಳದಿಂದ ಸ್ವಲ್ಪಮಟ್ಟಿಗೆ ತಿರುಗಿದರೆ ತಿದ್ದುಪಡಿಗಳು ಬೇಕಾಗಬಹುದು ಎಂದು ಅವರು ಹೇಳಿದರು.
“ಅದು ಸರಿಯಾದ ಸ್ಥಳದಲ್ಲಿದೆಯೇ ಎಂದು ನೋಡಲು ನಾವು ಮುಂದಿನ ಕೆಲವು ಗಂಟೆಗಳ ಕಾಲ ಅದನ್ನು ಮೇಲ್ವಿಚಾರಣೆ ಮಾಡಲಿದ್ದೇವೆ. ನಂತರ ಅದು ಸ್ವಲ್ಪ ತೇಲುತ್ತಿದ್ದರೆ, ನಾವು ಸ್ವಲ್ಪ ತಿದ್ದುಪಡಿಯನ್ನು ಮಾಡಬೇಕಾಗಬಹುದು. ಈ ರೀತಿಯಾಗುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ..,” ಸೋಮನಾಥ್ ಹೇಳಿದರು.
ಸೌರ ಮಿಷನ್ ಕುರಿತು ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್, ಬಾಹ್ಯಾಕಾಶ ನೌಕೆಯು ಲಗ್ರಾಂಜಿಯನ್ ಪಾಯಿಂಟ್‌ನಲ್ಲಿ ಸ್ಥಿರವಾದ ಕಕ್ಷೆಯನ್ನು ತೆಗೆದುಕೊಳ್ಳಬೇಕು. ಇದರಿಂದ ಮುಂದಿನ ಕೆಲವು ವರ್ಷಗಳವರೆಗೆ ಸೂರ್ಯನನ್ನು ಅಡೆತಡೆಯಿಲ್ಲದೆ ವೀಕ್ಷಿಸಬಹುದು ಎಂದಿದ್ದಾರೆ.
ಮಹತ್ವದ ವೈಜ್ಞಾನಿಕ ಮೈಲಿಗಲ್ಲಿನಲ್ಲಿ ಇಸ್ರೋ ಶನಿವಾರದಂದು ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ತನ್ನ ಅಂತಿಮ ಗಮ್ಯಸ್ಥಾನ ಕಕ್ಷೆಯಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.
ನಾನು ದಾವೂದ್ನನ್ನು ಸೋಲಿಸಲು ಬಯಸುತ್ತೇನೆ: ಭೂಗತ ಪಾತಕಿಯನ್ನು ದೆಹಲಿ ವಕೀಲರು ಎದುರುಹಾಕಿಕೊಂಡಿದ್ದು ಹೀಗೆ….
ಹಳಿಗಳೇ ಇಲ್ಲದೆ ರಸ್ತೆಯಲ್ಲಿ ರೈಲು ಸಂಚರಿಸಲು ಸಾಧ್ಯವೇ? ಚೀನಾದ ಈ ರೈಲನ್ನು ನೋಡಿ…