More

    2024ರಲ್ಲಿ ಯಾವ ಷೇರುಗಳಿಗೆ ಬೇಡಿಕೆ? ಮಾರುಕಟ್ಟೆ ಏನಾಗಲಿದೆ?: ಜಪಾನ್​ ಸಂಸ್ಥೆ ನೊಮುರಾ ಭವಿಷ್ಯ

    ಮುಂಬೈ: ಜಪಾನಿನ ಬ್ರೋಕರೇಜ್ ಸಂಸ್ಥೆ ನೊಮುರಾ ಸಂಸ್ಥೆಯು 2024ನೇ ಸಾಲಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಬೆಳವಣಿಗೆ, ಏರಿಳಿತಗಳ ಕುರಿತು ಭವಿಷ್ಯ ನುಡಿದಿದೆ. ಯಾವ ವಲಯದ ಷೇರುಗಳು, ಯಾವ ಷೇರುಗಳ ಕಂಪನಿಗಳು ಬೇಡಿಕೆ ಪಡೆದುಕೊಂಡು ಲಾಭ ಗಳಿಸಬಹುದೆಂಬ ಅಂದಾಜನ್ನು ಅದು ಮುಂದಿಟ್ಟಿದೆ.

    ನೋಮುರಾ ಪ್ರಕಾರ 2024ನೇ ವರ್ಷದಲ್ಲಿ ಲಾಭ ಷೇರುಗಳು, ವಲಯಗಳ ವಿವರ ಈ ರೀತಿ ಇದೆ.

    ಆಟೋ ವಲಯಕ್ಕೆ ಈ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಿದೆ. ಗ್ರಾಹಕ ಬರುವ ವಸ್ತುಗಳು, ಬಂಡವಾಳ ಸರಕುಗಳು, ರಕ್ಷಣೆ, ಲೋಹಗಳು, ಇಂಟರ್ನೆಟ್ ಐಟಿ ವಲಯಗಳಿಗೆ ಅದು ಅಷ್ಟೇನೂ ಮಹತ್ವ ನೀಡಿಲ್ಲ.

    ಲಾರ್ಜ್‌ಕ್ಯಾಪ್​ಗಳ (ಬೃಹತ್​ ಕಂಪನಿಗಳ ಷೇರುಗಳ) ಪೈಕಿ ಅದು ಐಸಿಐಸಿಐ ಬ್ಯಾಂಕ್, ಗೋದ್ರೇಜ್ ಕನ್ಸೂಮರ್​, ಮಹೀಂದ್ರಾ & ಮಹೀಂದ್ರಾ, ಎಲ್​ & ಟಿ, ರಿಲಯನ್ಸ್ ಇಂಡಸ್ಟ್ರೀಸ್​ (RIL) ಷೇರುಗಳು ಲಾಭ ತರಲಿವೆ ಎಂದು ಅಂದಾಜಿಸಿದೆ.

    ಸ್ಮಾಲ್​ ಕ್ಯಾಪ್​ ಮತ್ತು ಮಿಡ್‌ಕ್ಯಾಪ್ ವಿಭಾಗಗಳಲ್ಲಿ, ಕೋಫೋರ್ಜ್, ಲುಪಿನ್, ಮೆಡ್‌ಪ್ಲಸ್, ದಾಲ್ಮಿಯಾ ಭಾರತ್, ಫೆಡರಲ್ ಬ್ಯಾಂಕ್ ಮತ್ತು ಸನ್ಸೆರಾ ಇಂಜಿನಿಯರಿಂಗ್ ಷೇರುಗಳನ್ನು ಆಯ್ಕೆ ಮಾಡಿದೆ.

    ನಿಫ್ಟಿ ಶೇ. 12ರಷ್ಟು ಹೆಚ್ಚಳ ಸಾಧ್ಯತೆ:

    2024 ರಲ್ಲಿ ನಿಫ್ಟಿ ಬೆಂಚ್‌ಮಾರ್ಕ್‌ ಸೂಚ್ಯಂಕವು ಶೇಕಡಾ 12ರಷ್ಟು ಏರಿಕೆ ಕಂಡು, 24,260 ಗೆ 24,260ಕ್ಕೆ ತಲುಪಬಹುದು ಎಂದು ಅಂದಾಜಿಸಿದೆ.

    ಹಣದುಬ್ಬರದ ನಿರಂತರ ಇಳಿಕೆ, ಇಳುವರಿಯಲ್ಲಿನ ಕುಸಿತ, ಮಧ್ಯಮ ಗತಿಯಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ, ಅನುಕೂಲಕರ ತೈಲ ಮತ್ತು ಸರಕುಗಳ ಬೆಲೆಗಳು ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯನ್ನು ಆಧರಿಸಿ ಅಂದಾಜನ್ನು ಮಾಡಲಾಗಿದೆ.

    ಕ್ವಾಂಟ್, ಸುಂದರಂ ಮ್ಯೂಚುವಲ್ ಫಂಡ್ ಕಂಪನಿಗಳ ನ್ಯೂ ಫಂಡ್​ ಆಫರ್​: ಎನ್​ಎಫ್​ಒ ಎಂದರೇನು? ಹೂಡಿಕೆ ಲಾಭದಾಯಕವೇ?

    1 ಕೋಟಿ ರೂಪಾಯಿ ಸಂಬಳದ ಪ್ಯಾಕೇಜ್​: ಕ್ಯಾಂಪಸ್​ ನೇಮಕದಲ್ಲಿ ಯಾವ ಸಂಸ್ಥೆ ವಿದ್ಯಾರ್ಥಿಗಳಿಗೆ ಇಂತಹ ಆಫರ್​ ಸಿಕ್ಕಿದ್ದು ಗೊತ್ತೆ?

    ಮುಸ್ಲಿಮರು ಜ. 20- 26ರ ನಡುವೆ ಮನೆಯಲ್ಲೇ ಇರಬೇಕು: ಎಐಯುಡಿಎಫ್​ ಮುಖ್ಯಸ್ಥನ ವಿವಾದಿತ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts