More

    ಸುಶಾಂತ್ ಸಾವಿಗೆ ಇಸ್ರೇಲ್​ನಲ್ಲೂ ಕಂಬನಿ!

    ಸುಶಾಂತ್ ಸಿಂಗ್​ ಸಾವಿಗೆ ಕಂಬನಿ ಸುರಿಸದವರೇ ಇಲ್ಲ. ಬಾಲಿವುಡ್​ನಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಸುಶಾಂತ್​ ಸಾವಿನ ಸುದ್ದಿ ಕೇಳಿ ನೊಂದವರೆಷ್ಟೋ ಗೊತ್ತಿಲ್ಲ. ಈಗ ಆ ಸಾಲಿಗೆ ಇಸ್ರೇಲ್​ ಸಹ ಸೇರಿದೆ.

    ಇದನ್ನೂ ಓದಿ: ಮ್ಯೂಸಿಕ್​ ಮಾಫಿಯಾ ಕರಾಳ ಸತ್ಯ ಬಿಚ್ಚಿಟ್ಟ ಸೋನು ನಿಗಂ

    ಇಸ್ರೇಲ್​ನ ವಿದೇಶಾಂಗ ಇಲಾಖೆಯ ಡೆಪ್ಯುಟಿ ಡೈರೆಕ್ಟರ್​ ಜನರಲ್​ ಆಗಿರುವ ಗಿಲಾಡ್​ ಕೋಹನ್​ ಸಹ ಸುಶಾಂತ್​ ಸಾವಿಗೆ ಕಂಬನಿ ಮಿಡಿದಿದ್ದಾರೆ. ಸುಶಾಂತ್​, ಇಸ್ರೇಲ್​ನ ನಿಜವಾದ ಸ್ನೇಹಿತರಾಗಿದ್ದು, ಅವರನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಸುಶಾಂತ್​ಗೂ, ಇಸ್ರೇಲ್​ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಬರುವುದು ಸಹಜ. ಬಾಲಿವುಡ್​ ಮಂದಿ ತಮ್ಮ ಚಿತ್ರಗಳ ಚಿತ್ರೀಕರಣಕ್ಕೆ ಯಾವ್ಯಾವುದೋ ದೇಶಕ್ಕೆ ಹೋಗುವುದಿದೆ. ಆದರೆ, ಇಸ್ರೇಲ್​ಗೆ ಹೋಗಿ ಶೂಟ್​ ಮಾಡಿದವರು ಕಡಿಮೆಯೇ. ಹಾಗಾಗಿ ಬಾಲಿವುಡ್​ ಜನರನ್ನು ಇಸ್ರೇಲ್​ನತ್ತ ಸೆಳೆಯುವುದಕ್ಕೆ, ಅಲ್ಲಿನ ವಿದೇಶಾಂಗ ಇಲಾಖೆಯು, ದೇಶವನ್ನು ಪರಿಚಯಿಸುವ ಒಂದು ವಿಡಿಯೋ ಸಾಂಗ್​ ಮಾಡಿತ್ತು.

    ಬಾಲಿವುಡ್​ ಮಂದಿಯನ್ನು ಸೆಳೆಯುವುದಕ್ಕೆ ಬಾಲಿವುಡ್​ ನಟರೇ ಸೂಕ್ತ ಎಂಬ ಕಾರಣಕ್ಕೆ, ಆ ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಸುಶಾಂತ್​, ಜಾಕ್ವೆಲಿನ್​ ಮುಂತಾದವರನ್ನು ಕೇಳಲಾಗಿತ್ತು. ಇಲಾಖೆಯ ಮಾತಿಗೆ ಬೆಲೆ ಕೊಟ್ಟು, ಸುಶಾಂತ್​ ಆ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇಸ್ರೇಲ್​ನ ರಾಜಧಾನಿಯಾದ ಟೆಲ್​ ಅವೀವ್​ಗೆ ಹೋಗಿ, ಹಾಡಿನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

    ಇದನ್ನೂ ಓದಿ: ದಸರಾದಲ್ಲಿ ಪತ್ತೇದಾರಿ ಸತೀಶ್

    ಹಾಗಾಗಿ, ಸುಶಾಂತ್​ ಅವರನ್ನು ಇಸ್ರೇಲ್​ನ ವಿದೇಶಾಂಗ ಇಲಾಖೆಯ ಡೆಪ್ಯುಟಿ ಡೈರೆಕ್ಟರ್​ ಜನರಲ್​ ಗಿಲಾಡ್​ ಕೋಹನ್​ ನೆನಪಿಸಿಕೊಂಡಿರುವುದಷ್ಟೇ ಅಲ್ಲ, ಅವರು ಇಸ್ರೇಲ್​ನ ನಿಜವಾ ಸ್ನೇಹಿತರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts