More

    ಸರಿಯಾದ ಸಮಯ ನೋಡಿ ಸೂಕ್ತ ಉತ್ತರ ಕೊಡುತ್ತೇವೆ: ಇರಾನ್​ಗೆ​ ಪ್ರತೀಕಾರದ ಎಚ್ಚರಿಕೆ ನೀಡಿದ ಇಸ್ರೇಲ್

    ಜೆರುಸಲೇಂ: ಇರಾನ್​​ ನಡೆಸಿದ ಡ್ರೋನ್​ ಮತ್ತು ಕ್ಷಿಪಣಿ ದಾಳಿಗೆ ಖಡಕ್​ ಪ್ರತಿಕ್ರಿಯೆ ನೀಡಿರುವ ಇಸ್ರೇಲ್​ ಸಚಿವ, ಸೂಕ್ತ ಸಮಯದಲ್ಲಿ ಇರಾನ್​ ತನ್ನ ದಾಳಿ​ಗಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ನಾವು ಪ್ರಾದೇಶಿಕ ಒಕ್ಕೂಟವನ್ನು ನಿರ್ಮಿಸುತ್ತೇವೆ ಮತ್ತು ನಮಗೆ ಸೂಕ್ತವಾದ ಟೈಮಿಂಗ್‌ ನೋಡಿ ಇರಾನ್‌ನಿಂದ ನಿಖರವಾದ ಬೆಲೆಯನ್ನು ನಿರ್ಧರಿಸುತ್ತೇವೆ ಎಂದು ಸಚಿವ ಬೆನ್ನಿ ಗ್ಯಾಂಟ್ಜ್ ಅವರು ಹೇಳಿದರು.

    ಇತ್ತರ ಇರಾನ್​ ಕೂಡ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ ಮೇಲಿನ ತನ್ನ ದಾಳಿಗಳನ್ನು “ಸೀಮಿತ” ಮತ್ತು “ಆತ್ಮರಕ್ಷಣೆ” ಎಂದು ಯುಎಸ್​ಗೆ ತಿಳಿಸಿರುವುದಾಗಿ ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದೊಲ್ಲಾಹಿಯಾನ್ ಭಾನುವಾರ ಹೇಳಿದ್ದಾರೆ. ಇಸ್ರೇಲ್ ಮೇಲಿನ ಇರಾನ್‌ನ ಕ್ಷಿಪಣಿ ದಾಳಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಖಂಡಿಸಿದ ಕೆಲವೇ ಗಂಟೆಗಳ ಬೆನ್ನಲ್ಲೇ ಅಬ್ದೊಲ್ಲಾಹಿಯಾನ್ ಹೇಳಿಕೆಗಳು ಬಂದಿವೆ.

    ಏಪ್ರಿಲ್ 1ರಂದು ಸಿರಿಯಾದಲ್ಲಿನ ತನ್ನ ರಾಯಭಾರ ಕಚೇರಿಯ ಮೇಲೆ ಇಸ್ರೇಲ್​ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಇಸ್ರೇಲ್ ಮೇಲೆ ಶನಿವಾರ (ಏಪ್ರಿಲ್​ 13) ತಡರಾತ್ರಿ 300ಕ್ಕು ಅಧಿಕ ಕ್ಷಿಪಣಿಗಳನ್ನು ಉಡಾಯಿಸಿತು. ಆದಾಗ್ಯೂ, ಇರಾನ್ ಉಡಾವಣೆ ಮಾಡಿದ ಶೇ. 99 ರಷ್ಟು ಕ್ಷಿಪಣಿಗಳನ್ನು ತಡೆಹಿಡಿದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ ಮತ್ತು ಈ ದಾಳಿಯಿಂದ ವಾಯುನೆಲೆಗೆ ಕೇವಲ ಸಣ್ಣ ಹಾನಿಯನ್ನುಂಟುಮಾಡಿದೆ ಎಂದಿದೆ.

    ಮಿತ್ರ ರಾಷ್ಟ್ರ ಇಸ್ರೇಲ್​ ಬೆಂಬಲಕ್ಕೆ ನಿಲ್ಲುವುದಾಗಿ ಅಮೆರಿಕ ಘೋಷಿಸಿದೆ. ಆದರೆ, ಈ ಘರ್ಷಣೆಯಿಂದ ದೂರ ಉಳಿಯಿರಿ ಎಂದು ಇರಾನ್​ ಅಮೆರಿಕಕ್ಕೆ ಎಚ್ಚರಿಸಿದೆ. ಇದರ ನಡುವೆಯೂ ಅಮೆರಿಕ ಮಾತ್ರ ತನ್ನ ಮಿತ್ರನನ್ನು ಬಿಟ್ಟುಕೊಟ್ಟಿಲ್ಲ.

    ಸ್ಪಷ್ಟ ತತ್ವವನ್ನು ಇಸ್ರೇಲ್ ಅನುಸರಿಸುತ್ತಿದೆ
    ನಾವು ಸ್ಪಷ್ಟ ತತ್ವವನ್ನು ಹೊಂದಿದ್ದೇವೆ. ಯಾರು ನಮಗೆ ಹಾನಿ ಮಾಡುತ್ತಾರೋ ನಾವು ಅವರಿಗೆ ಹಾನಿ ಮಾಡುತ್ತೇವೆ. ನಾವು ಯಾವುದೇ ಬೆದರಿಕೆ ಅಥವಾ ಅಪಾಯದ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ ಮತ್ತು ಅದನ್ನು ದೃಢವಾಗಿ ಹಾಗೂ ನಿರ್ಣಯದೊಂದಿಗೆ ಮಾಡುತ್ತೇವೆ. ಇಸ್ರೇಲ್‌ನ ಪ್ರಜೆಗಳೇ, ನೀವೂ ಕೂಡ ಸಮಬಲರು ಎಂಬುದು ನನಗೆ ಗೊತ್ತಿದೆ. ಐಡಿಎಫ್​ ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನು ಅನುಸರಿಸಲು ನಾನು ನಿಮಗೆ ಕರೆ ನೀಡುತ್ತೇನೆ. ನಾವು ಒಟ್ಟಾಗಿ ನಿಲ್ಲುತ್ತೇವೆ ಮತ್ತು ದೇವರ ಸಹಾಯದಿಂದ ನಾವು ನಮ್ಮ ಎಲ್ಲಾ ಶತ್ರುಗಳನ್ನು ಜಯಿಸುತ್ತೇವೆ ಎಂದು ನೇತುನ್ಯಾಹು ಹೇಳಿದ್ದಾರೆ.

    ಶನಿವಾರ ತಡರಾತ್ರಿ ಸುಮಾರು 100ಕ್ಕೂ ಅಧಿಕ ಡ್ರೋನ್​ಗಳನ್ನು ಇರಾನ್ ಹಾರಿಸಿರುವುದಾಗಿ ಇಸ್ರೇಲ್​ ಮಿಲಿಟರಿ ಪಡೆ ಹೇಳಿದೆ. ಅಲ್ಲದೆ, ಡಜನ್​ಗಟ್ಟಲೆ ಡ್ರೋನ್​ಗಳು ಹಾದು ಹೋದವು ಎಂದು ಇರಾಕ್​ ಮತ್ತು ಜೋರ್ಡಾನ್​ ರಕ್ಷಣಾ ಪಡೆಗಳು ಸಹ ತಿಳಿಸಿವೆ. ಇಸ್ರೇಲ್ ಕಡೆಗೆ ಹೋಗುತ್ತಿದ್ದ ಇರಾನಿನ ಡ್ರೋನ್ ವಿಮಾನವನ್ನು ಯುಎಸ್ ಮಿಲಿಟರಿ ಪಡೆ ಹೊಡೆದುರುಳಿಸಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಿತ್ರ ರಾಷ್ಟ್ರ ಇಸ್ರೇಲ್​ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದೆ. ಆದರೆ, ಈ ಘರ್ಷಣೆಯಿಂದ ದೂರ ಉಳಿಯಿರಿ ಎಂದು ಇರಾನ್​ ಅಮೆರಿಕಕ್ಕೆ ಎಚ್ಚರಿಸಿದೆ. ಇದರ ನಡುವರೆಯೂ ಅಮೆರಿಕ ಮಾತ್ರ ತನ್ನ ಮಿತ್ರನನ್ನು ಬಿಟ್ಟುಕೊಟ್ಟಿಲ್ಲ. ಈ ದಾಳಿಯಿಂದ ಮತ್ತೊಂದು ಭೀಕರ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ ನಡುವೆ ನಡೆಯುತ್ತಿರುವ ಯುದ್ಧವೇ ಅಂತ್ಯವಾಗಿಲ್ಲ. ಇನ್ನೊಂದೆಡೆ ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧವೂ ಸಹ ಮುಂದುವರಿದಿದೆ. ಇದರ ನಡುವೆ ಇದೀಗ ಇಸ್ರೇಲ್​ ಮತ್ತು ಇರಾನ್​ ನಡುವಿನ ಸಂಘರ್ಷ ಜಗತ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಯಾವುದೇ ಸನ್ನಿವೇಶಕ್ಕೂ ನಾವು ರೆಡಿ: ಇರಾನ್​ ಡ್ರೋನ್​​ ದಾಳಿ ಬೆನ್ನಲ್ಲೇ ಗುಡುಗಿದ ಇಸ್ರೇಲ್​ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts