More

    ಗಾಜಾದಲ್ಲಿ ಇಸ್ರೇಲ್ ಆತ್ಮ ರಕ್ಷಣೆ ವ್ಯಾಪ್ತಿ ಮೀರಿ ವರ್ತಿಸುತ್ತಿದೆ: ಚೀನಾ

    ಬೀಜಿಂಗ್: ಗಾಜಾದಲ್ಲಿ ಇಸ್ರೇಲ್‌ ಆತ್ಮರಕ್ಷಣೆಯ ವ್ಯಾಪ್ತಿ ಮೀರಿ ವರ್ತಿಸುತ್ತಿದೆ. ಈ ಕೂಡಲೇ ಇಸ್ರೇಲ್ ಸರ್ಕಾರವು ಇಡೀ ಗಾಜಾ ಜನರಿಗೆ ಯುದ್ಧದ ರೂಪದಲ್ಲಿ ನೀಡುತ್ತಿರುವ ಸಾಮೂಹಿಕ ಶಿಕ್ಷೆಯನ್ನು ನಿಲ್ಲಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
    ಯುದ್ಧ ಕುರಿತು ಶನಿವಾರ ಸೌದಿ ಅರೇಬಿಯಾದ ರಾಜ ಫೈಸಲ್ ಬಿನ್ ಫರ್ಹಾನ್ ಅವರಿಗೆ ಕರೆ ಮಾಡಿ ವಾಂಗ್ ಮಾತನಾಡಿದ್ದರು. ಇದಾದ ಬಳಿಕ ಭಾನುವಾರ ಹೇಳಿಕೆ ಬಿಡುಗಡೆಮಾಡಿರುವ ವಾಂಗ್​, ಗಾಜಾದಲ್ಲಿ ಹಮಾಸ್ ಉಗ್ರರರನ್ನು ಸದೆಬಡಿಯುವ ನೆಪದಲ್ಲಿ ಗಾಜಾದ ಆಕ್ರಮಣಕ್ಕೆ ಇಸ್ರೇಲ್ ಸಜ್ಜಾಗುತ್ತಿರುವಂತೆ ಕಂಡುಬಂದಿದೆ. ಇಸ್ರೇಲ್‌ನ ಕ್ರಮಗಳು ಆತ್ಮರಕ್ಷಣೆಯ ವ್ಯಾಪ್ತಿಯನ್ನು ಮೀರಿವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಇಸ್ರೇಲ್ ಯುದ್ಧ ನಿಲ್ಲಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾದೀತು: ಇರಾನ್ ಎಚ್ಚರಿಕೆ

    ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಬೆಲೆ ಕೊಡಬೇಕು. ಗಾಜಾದ ಜನರ ಸಾಮೂಹಿಕ ಶಿಕ್ಷೆಯನ್ನು ನಿಲ್ಲಿಸಬೇಕು. ಗಾಜಾದ ಉತ್ತರ ಭಾಗದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರಿದ್ದು, ನಿರೀಕ್ಷಿತ ದಾಳಿಯ ಮುಂದೆ ಅವರು ಪಲಾಯನ ಮಾಡಲು ಆದೇಶಿಸಲಾಗಿದೆ, ಇದು ಮಾನವೀಯ ದುರಂತವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

    ಎರಡೂ ಕಡೆಗಳಲ್ಲಿ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ನಾಗರಿಕರು. ಯಾವುದೇ ದೇಶ ಅಥವಾ ಪಕ್ಷಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು. ಸಾಧ್ಯವಾದಷ್ಟು ಬೇಗ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು. ಇದನ್ನೇ ತಾವು ರಾಜ ಫೈಸಲ್‌ಗೆ ಹೇಳಿರುವುದಾಗಿ ವಾಂಗ್​ ಹೇಳಿದ್ದಾರೆ.

    ಇಸ್ರೆಲ್​ ಜತೆ ಸೌದಿ ಒಪ್ಪಂದ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts