More

    ಇಸ್ರೇಲ್ ಯುದ್ಧ ನಿಲ್ಲಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾದೀತು: ಇರಾನ್ ಎಚ್ಚರಿಕೆ

    ನ್ಯೂಯಾರ್ಕ್: ಪ್ಯಾಲೇಸ್ತೇನ್ ಮೇಲೆ​ ಇಸ್ರೇಲ್‌ ಯುದ್ಧ ನಿಯಂತ್ರಣ ತಪ್ಪುತ್ತಿದೆ. ಹೀಗಾಗಿ ಕೂಡಲೇ ಯುದ್ಧ ನಿಲ್ಲಿಸದಿದ್ದರೆ ತೀವ್ರ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು ಎಂದು ಇರಾನ್​ ಕಳವಳ ವ್ಯಕ್ತಪಡಿಸಿದೆ.

    ಗಾಜಾದಲ್ಲಿ ಹಮಾಸ್​ ಉಗ್ರರ ಮೇಲೆ ಶನಿವಾರ ದಾಳಿಗೆ ಇಸ್ರೇಲ್ ಮುಂದಾಗಿತ್ತು. ಅಧಿಕ ಜನಸಅಂದ್ರತೆ ಇರುವ ಈ ಭೂಭಾಗದಲ್ಲಿ ಪ್ಯಾಲೆಸ್ತೇನಿಯನ್ನರು ಗಾಜಾ ದಕ್ಷಿಣ ಕಡೆಗೆ ಓಡಿಹೋಗಬೇಕೆಂದು ಇಸ್ರೆಲ್​ ಆದೇಶ ಜಾರಿಮಾಡಿದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಹಮಾಸ್​ ಅನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇಸ್ರೆಲ್​ ಸೇನೆ ರಕ್ತಸಿಕ್ತ ಅಧ್ಯಾಯ ಬರೆಯಲು ಮುಂದಾಗಿರುವುದು ಸರಿಯಲ್ಲ ಎಂದು ಇರಾನ್ UN ಮಿಷನ್ “x”(ಎಕ್ಸ್​)ನಲ್ಲಿ ಪೋಸ್ಟ್‌ ಮಾಡಿ ಎಚ್ಚರಿಸಿದೆ.

    ಇದನ್ನೂ ಓದಿ: ಇಸ್ರೆಲ್​ ಜತೆ ಸೌದಿ ಒಪ್ಪಂದ ಕಡಿತ

    ಪ್ಯಾಲೇಸ್ತೇನ್ ನೆಲದ ಮೇಲೆ ಆಕ್ರಮಣ ನಡೆಸಿದರೆ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಅಮೆರಿಕಾ ಮೂಲಕ ಕಳುಹಿಸಲಾದ ಅಧಿಕೃತ ಸಂದೇಶದಲ್ಲಿ ಟೆಹ್ರಾನ್ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ನಂತರ ಇರಾನ್‌ನ ಎಚ್ಚರಿಕೆ ನೀಡಿದೆ.

    ಇಸ್ರೇಲ್ ವರ್ಣಭೇದ ನೀತಿ ಅನುಸರಿಸುತ್ತಿದೆ. ಯುದ್ಧಾಪರಾಧಗಳು ಮತ್ತು ನರಮೇಧವನ್ನು ತಕ್ಷಣವೇ ನಿಲ್ಲಿಸಬೇಕು. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದು, ಮುಂದೆ ತೀವ್ರವಾದ ಪರಿಣಾಮಗಳನ್ನು ಎದುರಿಸುವುದು ನಿಶ್ಚಿತ. ಇದರ ಜವಾಬ್ದಾರಿಯು ಯುಎನ್ ಭದ್ರತಾ ಮಂಡಳಿ ಮತ್ತು ಯುಎಸ್​ ಸಹ ಹೊರಬೇಕಾಗುತ್ತದೆ. ಗಾಜಾ ನಾಶ ಮಾಡುವ ಕಡೆಗೆ ಇವು ಮುನ್ನಡೆಸುತ್ತಿವೆ ಎಂದು ಇರಾನ್‌ನ ಪೋಸ್ಟ್​ ನಲ್ಲಿ ವಿವರಿಸಿದೆ.

    ಇಸ್ರೇಲ್ ಎಚ್ಚರಿಕೆ ನಂತರ ಪ್ಯಾಲೇಸ್ತೇನ್​ನ 11ಲಕ್ಷ ಜನರಲ್ಲಿ ಈಗಾಗಲೇ 4ಲಕ್ಷ ಜನರು ದಕ್ಇಣದ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ಶೀಘ್ರ ಇಸ್ರೇಲ್​ ಪೂರ್ಣ ಪ್ರಮಾಣದಲ್ಲಿ ಪ್ಯಾಲೇಸ್ತೇನಿಯರನ್ನು ಖಾಲಿ ಮಾಡಿಸುವ ಉದ್ದೇಶ ಹೊಂದಿದ್ದು, ಬೆದರಿಕೆಗಳಿಗೆ ಜಗ್ಗಲ್ಲ ಎಂದು ಹಮಾಸ್​ ಉಗ್ರರು ಪಟ್ಟುಹಿಡಿದು ಕುಳಿತಿದ್ದಾರೆ.

    ಒಂದು ವಾರದ ಹಿಂದೆ ಪ್ಯಾಲೇಸ್ತೇನ್​ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಮಾಸ್ ಅನ್ನು ನಿರ್ನಾಮ ಮಾಡಲು ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಹಮಾಸ್ 1300 ಜನರನ್ನು ಕೊಂದಿತ್ತು. ಬಳಿಕ ಇಸ್ರೇಲ್ ವಾಯುದಾಳಿ ನಡೆಸಿ 1500ಕ್ಕೂ ಹೆಚ್ಚು ಹಮಾಸ್​ ಉಗ್ರರನ್ನು ಸದೆಬಡಿದಿತ್ತು.

    ಇಸ್ರೇಲಿನ ಸೈನಿಕರಿಗೆ ಮೆಕ್‌ಡೊನಾಲ್ಡ್ಸ್​​ನಿಂದ ಉಚಿತ ಊಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts