More

    ಉಗ್ರ ಸಂಘಟನೆಗಳಿಗೆ ಯುವಕರನ್ನು ಸೇರಿಸುತ್ತಿದ್ದ ದಂಪತಿ ಬಂಧನ; ಜಮ್ಮುವಲ್ಲದೆ ಇಡೀ ಭಾರತಕ್ಕೆ ಉಗ್ರ ಚಟುವಟಿಕೆ ವಿಸ್ತರಿಸಲು ಪ್ಲಾನ್​!

    ನವದೆಹಲಿ: ಇಸ್ಲಾಮಿಕ್ ಸ್ಟೇಟ್ – ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕಾಶ್ಮೀರದ ದಂಪತಿಯನ್ನು ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ಭಾನುವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರಾಜಧಾನಿ ದೆಹಲಿಯಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಮುಂಜಾನೆ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಮುಸ್ಲಿಂ ಯುವಕರನ್ನು ಭಯೋತ್ಪಾದನೆ ಚಟುವಟಿಕೆ ನಡೆಸಲು ಪ್ರಚೋದಿಸುತ್ತಿದ್ದರು. ಇದಕ್ಕಾಗಿ ಈ ದಂಪತಿ ಅಫ್ಘಾನಿಸ್ತಾನದ ಐಎಸ್‌ಕೆಪಿ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ.

    ಕಾಶ್ಮೀರದ ಶ್ರೀನಗರ ನಿವಾಸಿಗಳಾದ ಜಹಾನ್​ ಜೈಬ್​ ಸಾಮಿ ಮತ್ತು ಆತನ ಹೆಂಡತಿ ಹೀನಾ ಬಶೀರ್​ ಬೇಗ್​ ಬಂಧಿತರು. ಇವರು ಅಫ್ಘಾನಿಸ್ತಾನದ ಐಎಸ್‌ಕೆಪಿಯ ಹಿರಿಯ ಸದಸ್ಯರೊಂದಿಗಿನ ಒಡನಾಟ ಹೊಂದಿದ್ದ ಬಗ್ಗೆ ಭಾರತೀಯ ಗುಪ್ತಚರ ಕಾರ್ಯಕರ್ತರ ಗಮನಕ್ಕೆ ಬಂದಿತ್ತು.

    ಐಎಸ್‌ಕೆಪಿ ಅಫ್ಘಾನಿಸ್ತಾನ ಮೂಲದ ಐಎಸ್‌ನ ಅಂಗಸಂಸ್ಥೆ. ಇದು ಆತ್ಮಹತ್ಯಾ ದಾಳಿ ಸೇರಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಉದ್ದೇಶಿಸಿತ್ತು ಮತ್ತು ಇದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆರಂಭಿಸಿತ್ತು ಎಂದು ಗುಪ್ತಚರ ಇಲಾಖೆಗೆ ಮಾಹಿತಿ ದೊರೆತ್ತಿತ್ತು.

    ಈಗ ಬಂಧಿಸಿರುವ ಜಹಾನ್​ ಜೈಬ್​ ಸಾಮಿ ಹೆಚ್ಚಾಗಿ ಸೈಬರ್​ ಮೂಲಕ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದ. ಇಂಟರ್​ನೆಟ್​ ಮುಖಾಂತರ ಭಯೋತ್ಪಾದಕ ಗುಂಪಿನ ಪ್ರಚಾರ ಮಾಡುತ್ತಿದ್ದ. ಈ ಭಯೋತ್ಪಾದಕ ಕೃತ್ಯಗಳನ್ನು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರವಲ್ಲ ಬದಲಿಗೆ ಇಡೀ ಭಾರತಕ್ಕೆ ವಿಸ್ತರಿಸಬೇಕು ಎಂಬುದಾಗಿತ್ತು.

    ಸಾಮಿಗೆ ಪಾಕಿಸ್ತಾನದ ಭಯೋತ್ಪಾದಕ ಹುಜೈಫಾ ಅಲ್-ಬಕಿಸ್ತಾನಿ ಎಂಬಾತನ ಜತೆ ಸಂಪರ್ಕ ಇತ್ತೆಂದು ತಿಳಿದುಬಂದಿದೆ. ಅಲ್ಲದೆ ಸಾಮಿ, ​ಐಎಸ್‌ಕೆಪಿ, ಲಷ್ಕರೇ ಎ ತೊಯ್ಬಾ ಉಗ್ರ ಸಂಘಟನೆಗಳಿಗೆ ಕಾಶ್ಮೀರದ ಯುವಕರಿಗೆ ಸೇರಲು ಪ್ರಚೋದಿಸುತ್ತಿದ್ದ. ಈತನನ್ನು ಉಗ್ರ ಸಂಘಟನೆಗಳಲ್ಲಿ ಕೆಲಸ ಕೊಡಿಸುವವ ಎಂದೇ ಗುರುತಿಸಲಾಗುತ್ತಿತ್ತು.

    ಸಾಮಿ ಪತ್ನಿ ಹೀನಾ ಕೂಡ ಉಗ್ರ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಿದ್ದಳು. ಈಕೆಯ ಕೆಲಸದಿಂದ ಈಕೆಗೆ TALENT ಎಂದೇ ಗುರುತಿಸಲಾಗುತ್ತಿತ್ತು. ಮತ್ತು ಈ ಅಂಶದಿಂದ ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​) 

    ಪುಲ್ವಾಮ ದಾಳಿಗೆ ಬಾಂಬ್​ ತಯಾರಿಸಲು ಅಮೇಜಾನ್​ನಿಂದ ಕೆಮಿಕಲ್ಸ್​ ಖರೀದಿ: ಆರೋಪಿಯಿಂದ ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts