More

    ಕಣ್ಣುಗಳಲ್ಲಿ ನೋವು ಇದೆಯೇ? ಹುಷಾರಾಗಿರಿ, ಅದೂ ಕರೊನಾ ಲಕ್ಷಣ!

    ಬೆಂಗಳೂರು: ಕಣ್ಣಿನಲ್ಲಿನ ಬಿಳಿ ಭಾಗ ಕೆಂಪಗಾಗುವಿಕೆ ಅಥವಾ ಕಣ್ಣುಬೇನೆಯೂ ಕರೊನಾ ಲಕ್ಷಣಗಳಲ್ಲಿ ಒಂದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಆದರೆ ಕಣ್ಣುಬೇನೆ ಇರುವವರೆಲ್ಲ ಸೋಂಕಿತರು ಎಂದು ಪರಿಗಣಿಸಲಾಗುವುದಿಲ್ಲ. ಈ ಲಕ್ಷಣ ಶೇ. 1ರಿಂದ 3ರಷ್ಟು ರೋಗಿಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ ಕಣ್ಣುಬೇನೆ ಸಮಸ್ಯೆಯಿಂದ ಬಳಲುತ್ತಿರುವವರೂ ಕರೊನಾ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

    ಇದನ್ನೂ ಓದಿ ದಂಡಾಗಿ ಬಂದಿರುವ ಮಿಡತೆಗಳಿಂದ ಸಮಸ್ಯೆಯಾಗದು: ವಿಜ್ಞಾನಿಗಳ ತಂಡದ ಸ್ಪಷ್ಟನೆ ಹೀಗಿದೆ…

    ಕರೊನಾದಿಂದ ಗುಣಮುಖರಾದವರಲ್ಲಿ ಶಾಶ್ವತ ಶ್ವಾಸಕೋಶ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ನೆದರ್ಲೆಂಡ್‌ನಲ್ಲಿ ಕರೊನಾದಿಂದ ಗುಣಮುಖರಾದವರಲ್ಲಿ ಈ ರೀತಿ ಸಮಸ್ಯೆ ಕಂಡು ಬರುತ್ತಿದೆ.

    ಶ್ವಾಸಕೋಶಗಳ ಸಾಮರ್ಥ್ಯ ಕಡಿಮೆಯಾಗಿ ಅವರು ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಶ್ವಾಸಕೋಶಗಳು ಕುಗ್ಗಿ ಅವುಗಳ ಅಂಗಾಶಗಳು ಗಟ್ಟಿಯಾಗುತ್ತವೆ. ಇದರಿಂದ ಆಮ್ಲಜನಕ ಪಡೆಯಲು ಕಷ್ಟವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

    ‘ವೊಡಾಫೋನ್​ ಐಡಿಯಾ’ ಮೇಲೆ ಸರ್ಚಿಂಗ್​ ದೈತ್ಯ ‘ಗೂಗಲ್​​’ ಕಣ್ಣು; ಶೀಘ್ರವೇ ನಿರ್ಧಾರ ಪ್ರಕಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts