More

    ‘ದೀದಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರಾ ?’ : ಅಮಿತ್​ ಷಾ ಪ್ರಶ್ನೆ

    ಕೊಲ್ಕತಾ : ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಭದ್ರತಾ ಪಡೆಗಳ ಬಗ್ಗೆ ಮಮತಾ ಬ್ಯಾನರ್ಜಿ ತೋರುತ್ತಿರುವ ವಿರೋಧವು ಅವರ ಮುಂದಿರುವ ಸೋಲಿನ ಬಗೆಗಿನ ಹತಾಶೆಯನ್ನು ತೋರಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಷಾ ಅವರು ಕೊಲ್ಕತಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು.

    ಮೊದಲ ಮೂರು ಹಂತಗಳ ಮತದಾನ ನಡೆದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ 63 ರಿಂದ 68 ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಷಾ ವಿಶ್ವಾಸ ವ್ಯಕ್ತಪಡಿಸಿದರು. ಈವರೆಗೆ ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಲ್ಲಿ 91 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಮುಂದಿನ ಹಂತದ ಮತದಾನಗಳಿಗೆ ಪ್ರಚಾರ ನಡೆಯುತ್ತಿದ್ದು, ಚುನಾವಣೆಯ ಅಂತಿಮ ಫಲಿತಾಂಶವು ಮೇ 2 ರ ಮತ ಎಣಿಕೆಯ ನಂತರ ಬೆಳಕಿಗೆ ಬರಲಿದೆ.

    ಇದನ್ನೂ ಓದಿ: ರೋಮಿಯೋಗಳನ್ನು ಸಹ ನಾವು ಇಷ್ಟಪಡುತ್ತೇವೆ! ಸಿಎಂ ಯೋಗಿ​ ಹೇಳಿಕೆಗೆ ಟಿಎಂಸಿ ಸಂಸದೆಯ ತಿರುಗೇಟು

    “ಮಮತಾ ಬ್ಯಾನರ್ಜಿ ಕೇಂದ್ರ ಪಡೆಗಳ ವಿರುದ್ಧ ಬಳಸುತ್ತಿರುವ ಪದಗಳನ್ನು ಒಬ್ಬ ಮುಖ್ಯಮಂತ್ರಿ ಅಥವಾ ರಾಜಕೀಯ ಪಕ್ಷದ ಅಧ್ಯಕ್ಷರು ಬಳಸುವುದನ್ನು ನಾನು ಎಂದೂ ನೋಡಿಲ್ಲ. ಅವರು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರಾ ? ಅಶಾಂತ ವಾತಾವರಣವನ್ನು ಬಯಸುತ್ತಾರಾ ?” ಎಂದು ಅಮಿತ್​​ ಷಾ ಖಡಕ್​ ಆಗಿ ಮಾತನಾಡಿದರು.

    “ಬ್ಯಾನರ್ಜಿ ಅವರು ಸ್ವಲ್ಪ ಸಾಮಾನ್ಯ ಜ್ಞಾನದಿಂದ ವರ್ತಿಸಬೇಕೆಂದು ನಾನು ಬಯಸುತ್ತೇನೆ. ಚುನಾವಣೆಯ ಸಮಯದಲ್ಲಿ ಕೇಂದ್ರ ಪಡೆಗಳು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಅವರು ತಿಳಿದಿರಬೇಕು. ಅವು ಚುನಾವಣಾ ಆಯೋಗದ ನಿಯಂತ್ರಣದಲ್ಲಿರುತ್ತವೆ” ಎಂದು ಷಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. (ಏಜೆನ್ಸೀಸ್)

    “ಕರೊನಾ ಲಸಿಕೆ ರಫ್ತು ಕೂಡಲೇ ನಿಲ್ಲಿಸಿ” : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ

    VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !

    ಪವನ್​ ಕಲ್ಯಾಣ್​ರ ‘ವಕೀಲ್ ಸಾಬ್’ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts