More

    ಮತ್ತೆ ಶುರುವಾಯ್ತಾ ಲಾಕ್​ಡೌನ್​ ಯುಗ..? ಕರೊನಾ ತಡೆಗೆ ರಾಜ್ಯಗಳಿಂದಲೇ ಕಠಿಣ ಕ್ರಮ

    ನವದೆಹಲಿ: ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರ ಹಾಗೂ ಸಾರ್ವಜನಿಕ ಸಭೆ ಸಮಾರಂಭ ಹೊರತುಪಡಿಸಿದರೆ ಇನ್ನುಳಿದ ಚಟುವಟಿಕೆಗಳ ಮೇಲಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ.

    ಆದರೆ, ಕಂಟೇನ್​ಮೆಂಟ್​ ಝೋನ್​ಗಳಲ್ಲಿ ವಿಧಿಸಬಹುದಾದ ನಿರ್ಬಂಧಗಳನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಲಿವೆ. ಕರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್​ಡೌನ್​ ಜಾರಿ ಮಾಡಲಾಗುತ್ತಿದೆ.

    ಇದನ್ನೂ ಓದಿ; ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ವ್ಯಕ್ತಿಯೀಗ ಭಾರತದಲ್ಲೇ ಇಂಗ್ಲೆಂಡ್​ ಹೈಕಮೀಷನರ್​

    ಪಟನಾದಲ್ಲಿ ಈಗಾಗಲೇ ಲಾಕ್​ಡೌನ್​ ವಿಧಿಸಲಾಗಿದ್ದು, ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕೋಲ್ಕತ್ತ, ಹೌರಾ, ಉತ್ತರ 24 ಪರಗಣ ಜಿಲ್ಲೆಯಲ್ಲಿ ಗುರುವಾರದಿಂದಲೇ (ಜು.9) ಸಂಜೆ 5 ಗಂಟೆಯಿಂದ ಲಾಕ್​​​ಡೌನ್​ ಜಾರಿಗೊಳಿಸಲಿದೆ. ಇದು ಏಳು ದಿನಗಳ ಅವಧಿಗೆ ಸೀಮಿತವಾಗಿದ್ದ, ಅಗತ್ಯ ಬಿದ್ದರಷ್ಟೇ ವಿಸ್ತರಿಸಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಈಗಾಗಲೇ ಲಾಕ್​ಡೌನ್​ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಎಂದಿನಂತೆ ಆದೇಶ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕಳೆದ 24 ತಾಸುಗಳಲ್ಲಿ 850 ಹೊಸ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಇದನ್ನೂ ಓದಿ; ನದಿಯ ಮೇಲೆ ಬೋಟ್​ಗಳಲ್ಲಿ ಕುಳಿತು ಸಿನಿಮಾ ನೋಡಿ; ಉಚಿತ ಪ್ರವೇಶ…! 

    ಇದಲ್ಲದೆ, ಅಸ್ಸಾಂ ಗುವಾಹಟಿ, ಚೆನ್ನೈ, ಜಾರ್ಖಂಡ್​, ಹರಿಯಾಣ, ಮಹಾರಾಷ್ಟ್ರದ ಹಲವೆಡೆಗಳಲ್ಲಿ ಜು.13ರವರೆಗೆ ಜಾರಿಯಲ್ಲಿದೆ. ಹೀಗಾಗಿ ಕರೊನಾ ಸೋಂಕು ಹೆಚ್ಚಾಗಿತ್ತಿರುವ ಕಾರಣ ಇನ್ನಷ್ಟು ರಾಜ್ಯಗಳು ಲಾಕ್​ಡೌನ್​ಗೆ ಮೊರೆ ಹೋಗುತ್ತಿವೆ.

    ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts