More

    ಹಾವುಗಳು ನಿಜವಾಗಿಯೂ ಸೇಡು ತೀರಿಸಿಕೊಳ್ಳುತ್ತವೆಯೇ? ವಿಜ್ಞಾನ ಹೇಳುವುದೇನು? ಇಲ್ಲಿದೆ ಅಸಲಿ ಸಂಗತಿ…

    ಹಾವಿನ ದ್ವೇಷ ಹನ್ನೆರಡು ವರುಷ ಎಂಬ ಮಾತನ್ನು ಕೇಳಿರುತ್ತೀರಿ. ತನಗೆ ತೊಂದರೆ ಕೊಟ್ಟವರ ವಿರುದ್ಧ ಹಾವು ಸೇಡು ತೀರಿಸಿಕೊಳ್ಳುತ್ತ ಅಂತಾರೆ. ಟಿವಿ ಧಾರವಾಹಿ ಹಾಗೂ ಸಿನಿಮಾಗಳಲ್ಲಿಯೂ ನಾವಿದನ್ನು ನೋಡಿದ್ದೇವೆ. ಆದರೆ, ಇದು ಎಷ್ಟರಮಟ್ಟಿಗೆ ನಿಜ ಎಂಬುದು ಇನ್ನೂ ತಿಳಿದಿಲ್ಲ. ಕೆಲವು ಈ ಪ್ರಕರಣಗಳಲ್ಲಿ ಇದು ನಿಜವಾಗಿದ್ದರೂ ವೈಜ್ಞಾನಿಕ ಕಾರಣವೇ ಬೇರೆ ಇದೆ.

    ವಿಜ್ಞಾನದ ಪ್ರಕಾರ, ಯಾವುದೇ ಹಾವುಗಳು ದ್ವೇಷ ಸಾಧಿಸುವುದಿಲ್ಲ ಮತ್ತು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ವಾಸ್ತವವಾಗಿ ಹಾವುಗಳು ಮನುಷ್ಯರಿಗೆ ತುಂಬಾ ಹೆದರುತ್ತವೆ. ಹೀಗಾಗಿ ಮನುಷ್ಯರಿಂದ ಸದಾ ದೂರವಿರಲು ಬಯಸುತ್ತವೆ. ಹಾವುಗಳು ಕೆಲವೊಮ್ಮೆ ತಮ್ಮ ದಾರಿಯಲ್ಲಿ ಅವಿತುಕೊಳ್ಳುವ ಮೂಲಕ ಮತ್ತು ದಾಳಿ ಮಾಡುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತವೆ.

    ಗಂಡು ಅಥವಾ ಹೆಣ್ಣು ನಾಗರ ಹಾವನ್ನು ಕೊಂದಾಗ, ಸಂಗಾತಿ ಹಾವು ಆ ಪ್ರದೇಶವನ್ನು ಸುತ್ತುತ್ತಾ ಇರುತ್ತದೆ. ಪದೇಪದೆ ಹಾವನ್ನು ಆ ಸ್ಥಳದಲ್ಲಿ ನೋಡುವುದರಿಂದ ನೋಡುಗರಿಗೆ ಹಾವು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಅನಿಸುತ್ತಿದೆ. ವಾಸ್ತವವಾಗಿ ಹಾವಿನ ಜನನಾಂಗಗಳ ಬಳಿ ಇರುವ ಗ್ರಂಥಿಯು ಅವುಗಳನ್ನು ಕೊಲ್ಲುವಾಗ ಹಲವಾರು ಬಾರಿ ಸ್ಫೋಟಗೊಳ್ಳುತ್ತದೆ. ಇದರಿಂದ ಸುಗಂಧವು ಬಿಡುಗಡೆಯಾಗುತ್ತದೆ. ವಾಸನೆಯು ಇತರ ಹಾವುಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಹಾವು ಸತ್ತ ನಂತರ ಹೆಣ್ಣು ಹಾವುಗಳು ಈ ಪ್ರದೇಶದಲ್ಲಿ ಹೆಚ್ಚಾಗಿ ಓಡಾಡುತ್ತವೆ.

    ಈ ಗ್ರಂಥಿಯಿಂದ ಹೊರಸೂಸುವ ಪರಿಮಳ ಹೆಣ್ಣು ಹಾವುಗಳಿಗೆ ಹೆಚ್ಚು ಆಕರ್ಷಕವಾಗಿದೆ. ಆದರೆ ಅದನ್ನು ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ಇನ್ನೊಂದು ಹಾವು ಬಂದಿದೆ ಎಂದು ಗ್ರಾಮಸ್ಥರು ಸಹಜವಾಗಿ ನಂಬಿದ್ದಾರೆ. ಆದರೆ, ಹಾವುಗಳು ದೀರ್ಘಕಾಲದವರೆಗೆ ಏನನ್ನೂ ನೆನಪಿಟ್ಟುಕೊಳ್ಳುವುದಿಲ್ಲ. ಇತರ ಪ್ರಾಣಿಗಳಿಗೆ ಹೋಲಿಸಿದರೆ ಹಾವುಗಳು ಬಹಳ ಸೀಮಿತ ಸ್ಮರಣೆಯನ್ನು ಹೊಂದಿರುತ್ತವೆ.

    ಹೀಗಾಗಿ ಹಾವುಗಳು ಸೇಡು ತೀರಿಸಿಕೊಳ್ಳುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಕೇವಲ ಪುರಾಣ ಮತ್ತು ಸಿನಿಮಾಗಳಲ್ಲಿ ಮಾತ್ರ ಇದನ್ನು ಬಿಂಬಿಸಲಾಗಿದೆ. (ಏಜೆನ್ಸೀಸ್​)

    ಅಳಿಯನ ಜತೆ ಅತ್ತೆ ಲಿಪ್​ಲಾಕ್​! ಬಿಗಿಲ್​ ಪಾಂಡಿಯಮ್ಮಳ ತಾಯಿ, ಗಂಡನ ಕಿಸ್ಸಿಂಗ್​ ವಿಡಿಯೋ ವೈರಲ್​, ತೀವ್ರ ಟೀಕೆ

    ಕೇಕ್​ ಮೇಲಿರುವ ಕ್ರೀಮ್​ ತಿಂದು ಆನಂದಿಸ್ತಾರೆ! ಈ ಕಾರಣಕ್ಕೆ ಈವರೆಗೆ RCB ಕಪ್​ ಗೆದ್ದಿಲ್ಲ ಅಂದ್ರು ಅಂಬಾಟಿ ರಾಯುಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts