blank

ರಿಲಾಯನ್ಸ್​ ಪ್ರತಿಷ್ಠಾನ ಮುನ್ನಡೆಸ್ತಾರಾ ಮಗಳು ಇಶಾ ಅಂಬಾನಿ?

blank

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ವಾರ್ಷಿಕ ಸಾಮಾನ್ಯ ಮಹಾಸಭೆ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

blank

ಕೋವಿಡ್​ ಕಾರಣದಿಂದಾಗಿ ಮಹಾಸಭೆಯನ್ನು ವರ್ಚುವಲ್ ಆಗಿ ನಡೆಸಲಾಯಿತು. ರಿಲಯನ್ಸ್​ ಸಂಸ್ಥೆ ಎಲ್ಲ ಸಾಲಗಳಿಂದ ಮುಕ್ತವಾಗಿದೆ. ​ ಗೂಗಲ್​ ಹಾಗೂ ಜಿಯೋ ನಡುವಿನ ಒಪ್ಪಂದವನ್ನು ಘೋಷಿಸಲಾಯಿತು. ಇದೆಲ್ಲದಕ್ಕಿಂತ ಮುಖ್ಯವಾಗಿ ರಿಲಯನ್ಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಪತ್ನಿ ಹಾಗೂ ನೀತಾ ಅಂಬಾನಿ ಮೊದಲ ಬಾರಿಗೆ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ; ಏರ್​ ಇಂಡಿಯಾ ಸಿಬ್ಬಂದಿಗೆ 6 ತಿಂಗಳಿನಿಂದ 2 ವರ್ಷದವರೆಗೂ ರಜೆ ಸೌಲಭ್ಯ; ಸಂಬಳದ ಕತೆಯೇನು…?

ಕಂಪನಿಯ ನಿರ್ದೇಶಕಿ ಹಾಗೂ ರಿಲಯನ್ಸ್​ ಪ್ರತಿಷ್ಠಾನದ ಅಧ್ಯಕ್ಷೆಯೂ ಆಗಿರುವ ನೀತಾ ಅಂಬಾನಿ ಕೋವಿಡ್​ ಸಂಕಷ್ಟ ಕಾಲದಲ್ಲಿ ಪ್ರತಿಷ್ಠಾನವು ಕೈಗೊಂಡಿರುವ ಸಮಾಜಸೇವಾ ಚಟುವಟಿಕೆಗಳ ವಿವರ ನೀಡಿದರು.

ಇನ್ನೊಂದು ಮುಖ್ಯ ವಿಷಯವನ್ನು ಅವರು ಉಲ್ಲೇಖಿಸಿದ್ದಾರೆ. ರಿಲಯನ್ಸ್​ ಪ್ರತಿಷ್ಠಾನಕ್ಕೀಗ 10 ವರ್ಷ ಸಂದಿದೆ. ಸಾಮಾನ್ಯ ಜನರ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಒಂದು ದಶಕ ಕಳೆದಿದೆ. ಈ ಅವಧಿಯಲ್ಲಿ ದೇಶದ 3.6 ಕೋಟಿ ಜನರನ್ನು ಪ್ರತಿಷ್ಠಾನದ ಮೂಲಕ ತಲುಪಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ; ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ

ಮುಂದಿನ ದಶಕಕ್ಕೆ ಪ್ರವೇಶಿಸುವ ಈ ಹಂತದಲ್ಲಿ ಇಶಾ ಮತ್ತವರ ತಂಡ ಈ ಚಟುವಟಿಕೆಗಳ ಪ್ರಮಾಣ ಹಾಗೂ ಪರಿಣಾಮವನ್ನು 10 ಪಟ್ಟು ಹೆಚ್ಚು ಮಾಡುವ ಧ್ಯೇಯ ಹೊಂದಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಷ್ಠಾನವನ್ನು ಇಶಾ ಮುನ್ನಡೆಸಬಹುದು ಎಂಬುದರ ಮುನ್ಸೂಚನೆ ಇದು ಎಂದೇ ವಿಶ್ಲೇಷಿಸಲಾಗುತ್ತಿದೆ.

ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

Share This Article
blank

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ…

blank