More

    ಕರೊನಾ ನಿಗ್ರಹಕ್ಕೆ ಅಶ್ವಗಂಧವೇ ಮದ್ದು? ಆಯುರ್ವೇದಕ್ಕೆ ಜಪಾನ್​ನಿಂದಲೂ ಆಸಕ್ತಿ

    ನವದೆಹಲಿ: ಆಯುರ್ವೇದದ ಅಶ್ವಗಂಧ ಕೋವಿಡ್-19 ವಿರುದ್ಧ ಹೋರಾಡುವ ಔಷಧವಾಗಲಿದೆಯೇ ಎಂಬುದರ ಕುರಿತು ಜಪಾನ್‌ನ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಇಂಡಸ್ಟ್ರಿಯಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಹಾಗೂ ದೆಹಲಿ ಐಐಟಿ ಸಂಶೋಧಕರ ತಂಡ ಅಧ್ಯಯನ
    ತಂಡ ಅಧ್ಯಯನ ನಡೆಸಿವೆ.
    “ಅಶ್ವಗಂಧ ಮತ್ತು ಪ್ರೋಪೋಲಿಸ್​ನ ( ಮೊಗ್ಗುಗಳಿಂದ ಜೇನುನೊಣಗಳು ಸಂಗ್ರಹಿಸಿದ ಕೆಂಪು ಅಥವಾ ಕಂದು ಅಂಟಿನ ವಸ್ತು) ನೈಸರ್ಗಿಕ ಸಂಯುಕ್ತಗಳು COVID-19 ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ” ಎಂದು ತಂಡ ವರದಿ ಮಾಡಿರುವುದಾಗಿ ದೆಹಲಿ ಐಐಟಿ ತಿಳಿಸಿದೆ.

    ಇದನ್ನೂ ಓದಿ: ಸುದ್ದಿವಾಹಿನಿಯೊಂದರ 25ಕ್ಕೂ ಹೆಚ್ಚು ಮಂದಿಗೆ ಕರೊನಾ ಪಾಸಿಟಿವ್​; ಕಚೇರಿ ಸೀಲ್​ ಡೌನ್​

    ಆಯುರ್ವೇದ ಮೂಲಿಕೆಯಾದ ಅಶ್ವಗಂಧದಲ್ಲಿ ಔಷಧೀಯ ಗುಣಲಕ್ಷಣಗಳಿದ್ದು, ಕೋವಿಡ್- 19 ಸೋಂಕಿನ ವಿರುದ್ಧ ಚಿಕಿತ್ಸಕ ಮತ್ತು ತಡೆಗಟ್ಟುವ ಮೌಲ್ಯವನ್ನು ಹೊಂದಿವೆ ಎಂದು ದೆಹಲಿ ಐಐಟಿ ಸಂಶೋಧಕರು ಹಾಗೂ ಜಪಾನ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಐಎಸ್ಟಿ) ಜಂಟಿ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.
    ಕಳೆದ ಹಲವಾರು ವರ್ಷಗಳಿಂದ ಅಶ್ವಗಂಧ ಮತ್ತು ಪ್ರೋಪೋಲಿಸ್‌ನ ಸಂಯುಕ್ತಗಳ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಅವುಗಳ ಕೆಲವು ಜೈವಿಕ- ಕ್ರಿಯಾಶೀಲ ಅಂಶಗಳು ಕರೊನಾದೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆಯನ್ನು ಸಂಶೋಧಿಸಿದ್ದಾರೆ ಎಂದು ದೆಹಲಿ ಐಐಟಿ ತಿಳಿಸಿದೆ.

    ಇದನ್ನೂ ಓದಿ: ಎಲ್ಲ ಇದ್ದರೂ ಸಾಯುವಾಗ ಯಾರಿಲ್ಲ!

    ಸಂಶೋಧಕರು ಪ್ರೊಟೀನ್ ವಿಭಜಿಸಲು ಮುಖ್ಯ SARS-CoV-2 ನ ಕಿಣ್ವವನ್ನು ಗುರಿಯಾಗಿಸಿಕೊಂಡಿದ್ದಾರೆ, ಇದನ್ನು ಮುಖ್ಯ ಪ್ರೋಟಿಯೇಸ್ ಅಥವಾ ಎಂಪ್ರೊ ಎಂದು ಕರೆಯಲಾಗುತ್ತದೆ. ಇದು ಸಾಂಕ್ರಾಮಿಕ ಪುನರಾವರ್ತನೆಗೆ ಮಧ್ಯಸ್ಥಿಕೆ ವಹಿಸುತ್ತದೆ. ಈ ವೈರಸ್‌ ವಿರುದ್ಧ ಹೋರಾಡಲು ಇದು ಅತ್ಯಗತ್ಯ ಔಷಧವಾಗಿದೆ. ಅಶ್ವಗಂಧ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಂಟುಮಾಡುವ ನೈಸರ್ಗಿಕ ಅಂಶವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಈ ಸಂಶೋಧನೆಯನ್ನು ನಡೆಸಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
    ಅಶ್ವಗಂಧ ಹಲವು ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ಆಯುವೇದ ಔಷಧವಾಗಿ ಬಳಸುತ್ತಾರೆ. ಭಾರತದ ಸಾಂಪ್ರದಾಯಿಕ ಔಷಧ ಇದಾಗಿದೆ.

    ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕೆ ಕೇಂದ್ರದ ಹೊಸ ಪೋರ್ಟಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts