More

    ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕೆ ಕೇಂದ್ರದ ಹೊಸ ಪೋರ್ಟಲ್

    ನವದೆಹಲಿ: ವಲಸೆ ಕಾರ್ಮಿಕರ ಸಂಚಾರ ಸುಗಮಗೊಳಿಸಲು ಕೇಂದ್ರವು ಶೀಘ್ರವೇ ವೆಬ್​ ಪೋರ್ಟಲ್ ಪ್ರಾರಂಭಿಸಲಿದೆ.
    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಅಭಿವೃದ್ಧಿಪಡಿಸಿದ ಆನ್‌ಲೈನ್ ಡ್ಯಾಶ್‌ಬೋರ್ಡ್‌ ಆದ ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆ (ಎನ್‌ಎಂಐಎಸ್) ಬಗ್ಗೆ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಶನಿವಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

    ಇದನ್ನೂ ಓದಿ: ಮೈಮೇಲೆ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ತಲೆಗೊಂದು ನೂಡಲ್​ ಕಟ್ಟಿಕೊಳ್ಳಿ ಎಂದಿದೆ ಹೋಟೆಲ್​ಗಳು!
    ಲಾಕ್‌ಡೌನ್ ಜಾರಿಯಿಂದಾಗಿ ವಲಸಿಗರು ಮನೆಗೆ ತಲುಪಲು ಕಾಲ್ನಡಿಗೆ ಮೂಲಕ ಹೊರಟಿದ್ದು, ಅವರ ಸಂಚಾರ ಸುಗಮ ಗೊಳಿಸಲು ಕೇಂದ್ರವು ಈ ಪೋರ್ಟಲ್ ಅನ್ನು ಘೋಷಿಸಿದೆ. ಇದರಲ್ಲಿ ವಲಸಿಗರ ಬಗ್ಗೆ ರಾಷ್ಟ್ರೀಯ ಅಂಕಿ ಅಂಶ ಮಾಹಿತಿ ಇರುತ್ತದೆ. ಇದು ಎಷ್ಟು ಜನ ವಲಸೆ ಕಾರ್ಮಿಕರು ಎಲ್ಲೆಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದರ ನೈಜ ಮಾಹಿತಿಯನ್ನು ನೀಡುವುದಲ್ಲದೆ ಅದರ ಜತೆಗೆ ಮುಂದಿನ ದಿನಗಳಲ್ಲಿ ಎಷ್ಟು ಜನ ವಲಸಿಗರು ಬರುತ್ತಾರೆ ಎಂಬುದನ್ನು ಲೆಕ್ಕ ಹಾಕಲೂ ಕೂಡ ಸಹಾಯವಾಗುತ್ತದೆ. ಅಂಕಿ ಅಂಶ ಮಾಹಿತಿಯಲ್ಲಿ ವಲಸೆ ಕಾರ್ಮಿಕರ ಮೊಬೈಲ್ ಸಂಖ್ಯೆಗಳನ್ನು ನೀಡಲಾಗುತ್ತಿರುವುದರಿಂದ ಸರ್ಕಾರವು ವಲಸೆ ಕಾರ್ಮಿಕರ ಸಂಪರ್ಕ ಪತ್ತೆ ಹಚ್ಚುವಲ್ಲಿಯೂ ಇದನ್ನು ಬಳಸಿಕೊಳ್ಳುತ್ತದೆ. ಅವರು ಯಾವಾಗ ಮತ್ತು ಹೇಗೆ ಮನೆಗೆ ಪ್ರಯಾಣಿಸಬಹುದು ಎಂಬುದರ ಮಾಹಿತಿ, ಅವರ ಸಂಪರ್ಕ ಪತ್ತೆಗಾಗಿ ಅದನ್ನು ಬಳಸಲು ಸರ್ಕಾರ ಉದ್ದೇಶಿಸಿದೆ. ಭವಿಷ್ಯದಲ್ಲಿ ಅವರು ಎಲ್ಲಿ ಕೆಲಸವನ್ನು ಹುಡುಕಿಕೊಳ್ಳಬಹುದು ಎಂಬುದನ್ನೂ ತಿಳಿಸುತ್ತದೆ.

    ಇದನ್ನೂ ಓದಿ: ಫೆಬ್ರವರಿಯಲ್ಲಿ ಇಸ್ರೇಲ್​ಗೆ ಬಂದಿದ್ದ ಚೀನಾ ರಾಯಭಾರಿಯ ನಿಗೂಢ ಸಾವು

    ನಗೆಯುಕ್ಕಿಸುವಂತಿದೆ ಆನೆಯ ಸೋಷಿಯಲ್ ಡಿಸ್ಟೆನ್ಸಿಂಗ್ ಟೆಕ್ನಿಕ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts