More

    ನೀರಾವರಿ ಯೋಜನೆ ಶೀಘ್ರ ಕಾರ್ಯರೂಪಕ್ಕೆ

    ಅಥಣಿ: ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರೊೃೀತ್ಸವ ದಿನಾಚರಣೆ ಅಂಗವಾಗಿ ತಾಲೂಕಾಡಳಿತದಿಂದ ಹಮ್ಮಿಕೊಂಡ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮವು ಅತ್ಯಂತ ಸರಳವಾಗಿ ಜರುಗಿತು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ತಾಲೂಕನ್ನು ಸಂಪೂರ್ಣವಾಗಿ ನೀರಾವರಿ ಕ್ಷೇತ್ರವನ್ನಾಗಿಸಲು 1600 ಕೋಟಿ ರೂ. ಬೃಹತ್ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಾಲೂಕಿನಲ್ಲಿ 5600 ಕೃಷಿ ಹೊಂಡ ನಿರ್ಮಾಣ ಮತ್ತು 21 ಕೆರೆ ತುಂಬುವ ಯೋಜನೆ ಹಾಗೂ 102 ಚೆಕ್‌ಡ್ಯಾಂ ನಿರ್ಮಾಣಕ್ಕೆ 948ಕೋಟಿ ರೂ. ಅನುದಾನಕ್ಕೆ ಡಿಪಿಆರ್ ಆಗಿದೆ. ಅವರಖೋಡದಲ್ಲಿ ಬಾಂದಾರ್ ನಿರ್ಮಾಣಕ್ಕೆ 48 ಕೋಟಿ ರೂ., ಕೃಷ್ಣಾ ನದಿಯಿಂದ ಬಾಧಿತ 17 ಗ್ರಾಮಗಳ ಸವಳು- ಜವಳು ನಿರ್ವಹಣೆಗಾಗಿ 180 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ತಿಳಿಸಲಾಗಿದೆ. ಇದರಿಂದ ಬಹುದಿನಗಳ ರೈತರ ಬೇಡಿಕೆಗಳು ಈಡೇರಲಿವೆ. ತಾಲೂಕು ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದರು.

    ತಹಸೀಲ್ದಾರ್ ದುಂಡಪ್ಪ ಕೋಮಾರ ಧ್ವಜಾರೊಹಣ ನೆರವೇರಿಸಿದರು. ಡಾ. ಎಂ.ಜಿ. ಹಂಜಿ, ವೈದ್ಯಾಧಿಕಾರಿ ಸಿ.ಎಸ್. ಪಾಟೀಲ, ರಾಮನಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು.

    ತಾಪಂ ಅಧ್ಯಕ್ಷೆ ಭಾರತಿ ಮುಗ್ಗಣ್ಣವರ, ಉಪಾಧ್ಯಕ್ಷೆ ಜ್ಯೋತಿ ಪಾಟೀಲ, ಇಒ ಆ ಎನ್. ಬಂಗಾರೆಪ್ಪನವರ, ಡಿವೈಎಸ್‌ಪಿ ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಉಪತಹಸೀಲ್ದಾರ್ ರಾಜು ಬುರ್ಲಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಸ್. ಸೊಂದಕರ, ಬಿಇಒ ಬಿ.ಎಂ. ಮೊರಟಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts