More

    ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಿ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಆಗ್ರಹ

    ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ ಕಳೆದ ಒಂದು ವಾರದಿಂದ ಒಳ ಹರಿವಿನ ಪ್ರಮಾಣ ಹೆಚ್ಚಿರುವುದು ಆಶಾದಾಯಕವಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಎಡದಂಡೆ ನಾಲೆಗೆ ನೀರು ಹರಿಸಲು ಮುಂದಾಗಬೇಕೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.


    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಒಂದು ತಿಂಗಳಿಂದ ಸಮರ್ಪಕ ಮಳೆ ಬೀಳದೆ ರೈತರು ಆತಂಕಕ್ಕೆ ಒಳಗಾಗಿದ್ದರು. ತುಂಗಭದ್ರಾ ಜಲಾಶಯದಲ್ಲೂ ನೀರಿನ ಪ್ರಮಾಣ ಕುಸಿದಿತ್ತು. ಮುಂಗಾರು ಬೆಳೆ ಬೆಳೆಯುವುದೇ ಅನುಮಾನ ಮೂಡಿಸಿತ್ತು ಎಂದರು.

    ಇದನ್ನೂ ಓದಿ: ಏ.10ರವರೆಗೆ ನಾಲೆಗಳಿಗೆ ನೀರು; ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ


    ಜಲಾಶಯದಲ್ಲಿ 30ಕ್ಕೂ ಹೆಚ್ಚಿನ ಟಿಎಂಸಿ ಸಂಗ್ರಹವಾಗಿದೆ. ಒಳಹರಿವು ಕೂಡ 50 ಸಾವಿರ ಕ್ಯೂಸೆಕ್ ಮೇಲಿದೆ. ಇದೇ ಪ್ರಮಾಣದಲ್ಲಿ ಮೂರು ದಿನ ನೀರು ಹರಿದು ಬಂದರೆ 45 ಟಿಎಂಸಿಗೂ ಅಧಿಕ ನೀರು ಸಂಗ್ರಹಗೊಳ್ಳಲಿದೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ರೈತರು ಭತ್ತ ನಾಟಿಗೆ ಉತ್ಸುಕರಾಗಿದ್ದಾರೆ. ಈಗ ಸಂಗ್ರಹವಾಗಿರುವ ನೀರಿನಲ್ಲಿ ಕಾಲುವೆಗೆ ನೀರು ಹರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.


    ಸರ್ಕಾರ ಕೂಡಲೇ ತುಂಗಭದ್ರಾ ಕಾಡಾ ಅಧ್ಯಕ್ಷರನ್ನು ನೇಮಿಸಬೇಕು. ಈ ವಾರದಲ್ಲಿಯೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಎಡದಂಡೆ ನಾಲೆಗೆ ನೀರು ಹರಿಸಲು ನಿರ್ಧರಿಸಬೇಕು. ತಡವಾಗಿ ನೀರು ಹರಿಸಿದರೆ ರೈತರಿಗೆ ಭತ್ತ ನಾಟಿಗೆ ತೊಂದರೆಯಾಗಲಿದೆ ಎಂದು ಕೆ.ವಿರೂಪಾಕ್ಷಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts