More

    ಭಾರತ ಲೆಜೆಂಡ್ಸ್ ತಂಡಕ್ಕೆ ಕರೊನಾ ಹೊಡೆತ, ನಾಲ್ಕಕ್ಕೇರಿದ ಪಾಸಿಟಿವ್ ಕೇಸ್!

    ನವದೆಹಲಿ: ಮಾಜಿ ಕ್ರಿಕೆಟಿಗರ ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದ ಭಾರತ ಲೆಜೆಂಡ್ಸ್ ತಂಡ ಇದೀಗ ಕರೊನಾ ಸೋಂಕಿನ ಹೊಡೆತದಿಂದ ತತ್ತರಿಸಿದೆ. ಸಚಿನ್ ತೆಂಡುಲ್ಕರ್, ಯೂಸುಫ್​ ಪಠಾಣ್, ಎಸ್. ಬದ್ರಿನಾಥ್ ಬಳಿಕ ಭಾರತ ಲೆಜೆಂಡ್ಸ್ ತಂಡದ ಪರ ಆಡಿದ ಮತ್ತೋರ್ವ ಆಟಗಾರ ಇರ್ಫಾನ್ ಪಠಾಣ್ ಕೂಡ ಕರೊನಾ ಸೋಂಕಿತರಾಗಿದ್ದಾರೆ.

    ಭಾರತ ಲೆಜೆಂಡ್ಸ್ ತಂಡಕ್ಕೆ ಕರೊನಾ ಹೊಡೆತ, ನಾಲ್ಕಕ್ಕೇರಿದ ಪಾಸಿಟಿವ್ ಕೇಸ್!

    ರಾಯ್‌ಪುರದಲ್ಲಿ ನಡೆದ ಟೂರ್ನಿಯಲ್ಲಿ ಸೋಂಕಿತರಾದ 4ನೇ ಆಟಗಾರರಾಗಿರುವ 36 ವರ್ಷದ ಇರ್ಫಾನ್ ಪಠಾಣ್, ಸೋಮವಾರ ಟ್ವಿಟರ್‌ನಲ್ಲಿ ಇದನ್ನು ದೃಢಪಡಿಸಿದ್ದಾರೆ. ‘ನಾನು ಯಾವುದೇ ಲಕ್ಷಣಗಳಿಲ್ಲದೆ ಕೋವಿಡ್-19 ಪಾಸಿಟಿವ್ ಆಗಿರುವೆ. ಇದರಿಂದಾಗಿ ಮನೆಯಲ್ಲೇ ಐಸೋಲೇಷನ್‌ನಲ್ಲಿರುವೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರೆಲ್ಲರಿಗೂ ಪರೀಕ್ಷೆಗೆ ಒಳಪಡಲು ಕೇಳಿಕೊಳ್ಳುತ್ತೇನೆ. ಎಲ್ಲರೂ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ’ ಎಂದು ಪಠಾಣ್ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕನಾಗಲು ಯಾರ್ಯಾರು ಪೈಪೋಟಿಯಲ್ಲಿದ್ದಾರೆ ಗೊತ್ತೇ?

    ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20 ಟೂರ್ನಿಯು ಬಿಸಿಸಿಐನಿಂದ ಮಾನ್ಯತೆ ಪಡೆದ ಟೂರ್ನಿಯಲ್ಲ. ನಿವೃತ್ತ ಕ್ರಿಕೆಟಿಗರು ಮಾತ್ರ ಪಾಲ್ಗೊಂಡಿದ್ದ ಈ ಟೂರ್ನಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ತಂಡಗಳೂ ಪಾಲ್ಗೊಂಡಿದ್ದವು. ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆ ಕಂಡ ಬೆನ್ನಲ್ಲೇ ಭಾರತ-ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದರೂ, ರಸ್ತೆ ಸುರಕ್ಷತಾ ವಿಶ್ವ ಸರಣಿಯಲ್ಲಿ ಪ್ರೇಕ್ಷಕರ ಹಾಜರಿ ಮುಂದುವರಿದಿತ್ತು. ಹೆಚ್ಚಿನ ಪ್ರೇಕ್ಷಕರು ಮಾಸ್ಕ್ ಧರಿಸದೆಯೇ ಪಂದ್ಯಗಳನ್ನು ವೀಕ್ಷಿಸಿದ್ದರು. ಟೂರ್ನಿಗೆ ನಿರ್ಮಿಸಲಾಗಿದ್ದ ಬಯೋಬಬಲ್ ವಾತಾವರಣದ ಬಗ್ಗೆಯೂ ಇದೀಗ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ.

    ಈ ಸಲ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಹೊಸ ಬ್ಯಾಟಿಂಗ್ ಕ್ರಮಾಂಕ!

    ಮದುವೆ ಬೆನ್ನಲ್ಲೇ ಸಂಜನಾ ಕೆಲಸಕ್ಕೆ ಹಾಜರ್! ಬುಮ್ರಾ ಹನಿಮೂನ್‌ಗೆ ಯಾರ ಜತೆ ಹೋದರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts