More

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಅರೆಸ್ಟ್​ ವಾರೆಂಟ್​…!

    ತೆಹ್ರಾನ್​: ಇರಾನ್​ನ ಬಾಗ್ದಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಜನವರಿಯಲ್ಲಿ ವಾಯುದಾಳಿ ನಡೆಸಿದ್ದ ಅಮೆರಿಕ ‘ಇಸ್ಲಾಮಿಕ್‌ ರಿವಲ್ಯೂಷನರಿ ಗಾರ್ಡ್ ಕೋರ್‌ (ಐಆರ್‌ಜಿಸಿ)’ ಕ್ವಾಡ್ಸ್‌ ಫೋರ್ಸ್‌ ಘಟಕದ ಮುಖ್ಯಸ್ಥ ಜನರಲ್‌ ಖಾಸಿಮ್‌ ಸುಲೈಮಾನಿ ಅವರನ್ನು ಹತ್ಯೆಗೈದಿದೆ. ಅಂದಿನಿಂದಲೂ ಯುಎಸ್​-ಇರಾನ್​ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.

    ಅದರ ಮುಂದುವರಿದ ಭಾಗವಾಗಿ ಇರಾನ್​ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸೇರಿ ಸುಮಾರು 30 ಜನರ ವಿರುದ್ಧ ಅರೆಸ್ಟ್ ವಾರೆಂಟ್​ ಹೊರಡಿಸಿದೆ. ಅಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷನನ್ನು ವಶಕ್ಕೆ ಪಡೆಯಲು ಸಹಾಯ ಮಾಡಿ ಎಂದು ಇಂಟರ್​​ಪೋಲ್​ನ್ನು ಕೇಳಿಕೊಂಡಿದೆ. ಇದನ್ನೂ ಓದಿ: VIDEO: ಮಹಿಳೆಗೆ ಮುದ್ದಾಗಿ ಕೃತಜ್ಞತೆ ಸಲ್ಲಿಸಿದ ಪೆಂಗ್ವಿನ್​ ಪಕ್ಷಿ..ತಮಾಷೆಯಲ್ಲ ಅದರ ಮುಗ್ಧತೆ ನೀವೂ ನೋಡಿ…

    ತೆಹ್ರಾನ್​ನ ಪ್ರಾಸಿಕ್ಯೂಟರ್​ ಅಲಿ ಅಲ್​​ಖಾಸಿಮರ್​ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜನವರಿ 3ರಂದು ನಡೆದ ವಾಯುದಾಳಿ, ಜನರಲ್‌ ಖಾಸಿಮ್‌ ಸುಲೈಮಾನಿ ಅವರ ಹತ್ಯೆಯಲ್ಲಿ ಟ್ರಂಪ್​ ಸೇರಿ 30ಕ್ಕೂ ಹೆಚ್ಚು ಜನರ ಪಾತ್ರವಿದೆ. ಹಾಗಾಗಿ ಅವರು ಭಯೋತ್ಪಾದನೆ ಮತ್ತು ಹತ್ಯೆ ಆರೋಪದಡಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ನಾಗಾಲೋಟ- ಜುಲೈ 31ರವರೆಗೆ ಸಂಪೂರ್ಣ ಲಾಕ್‌ಡೌನ್‌: ‘ಮಹಾ’ ಆದೇಶ

    ಟ್ರಂಪ್​ ಹೊರತಾಗಿ ಬೇರೆ ಯಾರ ಹೆಸರನ್ನೂ ಪ್ರಾಸಿಕ್ಯೂಟರ್​ ಹೇಳಿಲ್ಲ. ಆದರೆ ಅಮೆರಿಕ ಅಧ್ಯಕ್ಷರನ್ನು ಮಾತ್ರ ಬಿಡುವುದಿಲ್ಲ. ಅವರು ಅಧ್ಯಕ್ಷಸ್ಥಾನದಿಂದ ಕೆಳಗೆ ಇಳಿದ ಮೇಲೆ ಕೂಡ ಈ ಪ್ರಕರಣದ ವಿಚಾರಣೆ ಎದುರಿಸಲೇಬೇಕು ಎಂದು ತಿಳಿಸಿದ್ದಾರೆ.
    ಟ್ರಂಪ್ ಹಾಗೂ ಉಳಿದವರ ಬಂಧನಕ್ಕಾಗಿ ರೆಡ್​ ನೋಟಿಸ್​ ಹೊರಡಿಸಲು ಇಂಟರ್​ಪೋಲ್​ಗೆ ಮನವಿ ಮಾಡಲಾಗಿದೆ ಎಂದು ಅಲಿ ಅಲ್​​ಖಾಸಿಮರ್​ ತಿಳಿಸಿದ್ದಾರೆ. ಆದರೆ ಫ್ರಾನ್ಸ್​ನಲ್ಲಿರುವ ಇಂಟರ್​ಪೋಲ್​ ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

    VIDEO: ಡೆಡ್ಲಿ ಹಾವಿನ ಜತೆ ಚೆಲ್ಲಾಟ…ಭಯಂಕರ ಅನಾಕೊಂಡದ ಬಾಲ ಹಿಡಿದು ಆಟ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts