More

    ಮಿರ್ಚಿಗೆ ಕೈ ನಾಯಕರ ನಂಟು?: ದಾವೂದ್ ಇಬ್ರಾಹಿಂ ಬಂಟ ಮಿರ್ಚಿ

    ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ಹಾಗೂ ಕಾಂಗ್ರೆಸ್​ನ ಕೆಲ ನಾಯಕರ ಮಧ್ಯೆ ವ್ಯವಹಾರಗಳು ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಅನುಮಾನ ವ್ಯಕ್ತಪಡಿಸಿದೆ.

    ಇಕ್ಬಾಲ್ ಮಿರ್ಚಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ ಅಧಕಾರಿಗಳು ಸಹನಾ ಸಮೂಹದ ಅಧ್ಯಕ್ಷ ಸುಧಾಕರ್ ರೆಡ್ಡಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ ರೆಡ್ಡಿ ಮತ್ತು ಕಾಂಗ್ರೆಸ್​ನ ಅನೇಕ ನಾಯಕರ ನಡುವೆ ವಹಿವಾಟುಗಳು ನಡೆದಿರುವ ದಾಖಲೆಗಳು ಪತ್ತೆಯಾಗಿವೆ. ಹರಿಯಾಣ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್​ನ ಮಾಜಿ ಸಚಿವರ ಹೆಸರುಗಳೂ ಇದರಲ್ಲಿದ್ದು, ಇವರ ಸಂಬಂಧಿಕರ ಮದುವೆಗಳಿಗೆ ಸುಧಾಕರ್ ಶೆಟ್ಟಿ ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ. ಜತೆಗೆ ಮುಂಬೈನ ಕಾಂಗ್ರೆಸ್ ನಾಯಕರೊಬ್ಬರ ಜತೆ ಶೆಟ್ಟಿ ದೊಡ್ಡ ಪ್ರಮಾಣದ ಭೂಮಿ ಖರೀದಿ ವ್ಯವಹಾರ ನಡೆಸಿದ್ದರು ಎಂದು ತಿಳಿದುಬಂದಿದೆ.

    ದಾಳಿ ವೇಳೆ ಹಾರ್ಡ್​ಡಿಸ್ಕ್ ಗಳು, ಪೆನ್​ಡ್ರೖೆವ್ ಸೇರಿ ಹಲವು ದಾಖಲೆಗಳು ಸಿಕ್ಕಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ. ದಾವೂದ್ ಬಂಟನಾಗಿದ್ದ ಮಿರ್ಚಿ ಮುಂಬೈನ ಹಲವು ಕಡೆ ಆಸ್ತಿ ಖರೀದಿಸಿ ಬಳಿಕ ರಿಯಲ್ ಎಸ್ಟೇಟ್ ದಂಧೆ ಮೂಲಕ ಹೆಚ್ಚು ಹಣಕ್ಕೆ ಮಾರಾಟ ಮಾಡಿದ್ದ. ಬಳಿಕ ಮಿರ್ಚಿ 2013ರಲ್ಲಿ ಲಂಡನ್​ನಲ್ಲಿ ಸಾವನ್ನಪ್ಪಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts