More

    ಪಶ್ಚಿಮ ಬಂಗಾಳ ಚುನಾವಣೆ : ಡೆಬ್ರಾ ಕ್ಷೇತ್ರದಲ್ಲಿ ಐಪಿಎಸ್​ v/s ಐಪಿಎಸ್

    ಕೊಲ್ಕತಾ: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಪೋರ್ ಜಿಲ್ಲೆಯ ಡೆಬ್ರಾ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಮಾಜಿ ಐಪಿಎಸ್​ ಅಧಿಕಾರಿಗಳು ಪರಸ್ಪರ ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದಾರೆ. ಹುಮಾಯೂನ್ ಕಬೀರ್ ಅವರು ಟಿಎಂಸಿ ಪರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ವತಿಯಿಂದ ಭಾರತಿ ಘೋಷ್​ ಅಭ್ಯರ್ಥಿಯಾಗಿದ್ದಾರೆ.

    ಚಂದನನಗರ್ ಪೊಲೀಸ್ ಕಮಿಷನರ್ ಆಗಿದ್ದ ಕಬೀರ್ ಇತ್ತೀಚೆಗೆ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಟಿಎಂಸಿ ಸೇರಿದ್ದರು. ಅವರನ್ನು ಕೊಲ್ಕತಾದಿಂದ 100 ಕಿಲೋಮೀಟರ್ ದೂರದಲ್ಲಿರುವ ಡೆಬ್ರಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಟಿಎಂಸಿ ಕಣಕ್ಕಿಳಿಸಿತ್ತು. ಇದೀಗ ಇದೇ ಕ್ಷೇತ್ರಕ್ಕೆ ಬಿಜೆಪಿ, ಪಶ್ಚಿಮ ಮಿಡ್ನಪೋರ್ ಮತ್ತು ಝರ್​ಗ್ರಾಮ್ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸಿರುವ ಭಾರತಿ ಘೋಷ್ ಅವರನ್ನು ತನ್ನ ಅಭ್ಯರ್ಥಿಯಾಗಿ ಹೆಸರಿಸಿದೆ.

    ಇದನ್ನೂ ಓದಿ: ಕೋ-ವಿನ್ ಸರ್ಟಿಫಿಕೇಟ್​ : ಟಿಎಂಸಿ ಕಣ್ಣು ಕುಕ್ಕಿದ ಪ್ರಧಾನಿ ಮೋದಿ ಫೋಟೋ !

    ಸೇವಾ ಅವಧಿಯಲ್ಲೂ ಬಂಗಾಳದ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ವಿರೋಧವನ್ನು ಕಟ್ಟಿಕೊಂಡಿದ್ದ ಘೋಷ್​ ಅವರು, 2017 ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. 2019 ರಲ್ಲಿ ಬಿಜೆಪಿ ಸೇರಿ, ಈಗ ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ಆಗಿದ್ದಾರೆ. ಡೆಬ್ರಾ ಘಟಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಘೋಷ್​ ಈ ಮುನ್ನ ಘಟಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಅಧಿಕಾರಿ ದೀಪಕ್ (ದೇವ್) ಅವರ ವಿರುದ್ಧ ಭಾರತಿ ಘೋಷ್, 1,07,973 ಮತಗಳ ಅಂತರದಿಂದ ಪರಾಜಯ ಅನುಭವಿಸಿದ್ದರು.

    ಮತ್ತೊಂದೆಡೆ, ರಾಜಕೀಯಕ್ಕೆ ಹೊಸದಾಗಿ ಪ್ರವೇಶಿಸಿರುವ ಕಬೀರ್ ಅವರ ತವರೂರು ಡೆಬ್ರಾ. ಅವರ ಪಾಲಕರಾದ ಆರ್ಸೆದ್ ಅಲಿ ಮತ್ತು ಜಿನತುನ್ ಬೇಗಮ್ ಇನ್ನೂ ಡೆಬ್ರಾ ಕ್ಷೇತ್ರದಲ್ಲೇ ವಾಸಿಸುತ್ತಿದ್ದು, ಕಬೀರ್ ಈ ಪ್ರದೇಶವನ್ನು ಚೆನ್ನಾಗಿ ತಿಳಿದಿದ್ದಾರೆ ಎನ್ನಲಾಗಿದೆ. ಜೊತೆಗೆ, 2016 ರಲ್ಲಿ ಈ ಕ್ಷೇತ್ರವನ್ನು ಟಿಎಂಸಿ ಗೆದ್ದುಕೊಂಡಿತು. ಟಿಎಂಸಿಯ ಸೆಲಿಮಾ ಖತುನ್ (ಬೀಬಿ) 11,908 ಮತಗಳ ಅಂತರದಿಂದ ಸಿಪಿಐ(ಎಂ)ನ ಜಹಾಂಗೀರ್ ಕರೀಮ್ ಅವರನ್ನು ಸೋಲಿಸಿದ್ದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಲ್ಯಾಗ್​ ಮಂಜ ಹೇಳಿದ್ದನ್ನು ಕೇಳಿ ಶಾಕ್​ ಆದ ದಿವ್ಯಾ ಸುರೇಶ್​: ಬಾಡಿತು ನಗು ಮುಖ..!

    ಕರೊನಾ ಲಸಿಕೆ ಪಡೆದ ಧರ್ಮಗುರು ದಲೈ ಲಾಮಾ

    ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ಧಾಳಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts